ಈ ವರ್ಷವೇ ಕೊನೆ​​! 2025ಕ್ಕೆ ರೋಹಿತ್ ಶರ್ಮಾ ಆ ತಂಡದಲ್ಲಿರುತ್ತಾರೆ… ಶಾಕ್ ಕೊಟ್ಟ ಮಾಜಿ ಕ್ರಿಕೆಟಿಗ

WhatsApp Image 2024-04-11 at 11.14.08 AM
Published on

ನವದೆಹಲಿ: ಎರಡು ವರ್ಷ ಗುಜರಾತ್ ಟೈಟನ್ಸ್ ನಾಯಕನಾಗಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಫೈನಲ್​ವರೆಗೂ ತಂದಿದ್ದ ಹಾರ್ದಿಕ್ ಪಾಂಡ್ಯ ಕಳೆದ ವರ್ಷ ದಿಢೀರ್​ ಟೈಟನ್ಸ್​​ಗೆ ಕೈಕೊಟ್ಟು ಮುಂಬೈ ಇಂಡಿಯನ್ಸ್ ತಂಡಕ್ಕೆ ಮತ್ತೆ ಹಿಂತಿರುಗಿದರು. ಈ ಸಂಗತಿ ಕ್ರಿಕೆಟ್​ ಫ್ಯಾನ್ಸ್​ಗಳಲ್ಲಿ ಭಾರೀ ಆಶ್ಚರ್ಯ ಮೂಡಿಸಿದ್ದಲ್ಲದೇ, ತೀವ್ರ ಆಘಾತವನ್ನು ತಂದೊಡ್ಡಿತು.

ಐಪಿಎಲ್​ ನಾಯಕತ್ವ ಬದಲಾವಣೆ ಆದಾಗಿನಿಂದಲೂ ಮುಂಬೈ ತಂಡದಲ್ಲಿ ಮಾತ್ರ ಎಲ್ಲವೂ ಸರಿಯಿಲ್ಲ. ರೋಹಿತ್​ರಿಂದ ನಾಯಕತ್ವ ಕಸಿದು ಹಾರ್ದಿಕ್​ ಪಾಂಡ್ಯಗೆ ನೀಡಿರುವುದು ಇದೀಗ ಅಭಿಮಾನಿಗಳ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ಇಂದಿಗೂ ಹಾರ್ದಿಕ್​ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕಾ ಪ್ರಹಾರಗಳು ನಡೆಯುತ್ತಿವೆ. ಐಪಿಎಲ್​ 2024ರ ಸೀಸನ್ ಆರಂಭಕ್ಕೂ ಮುನ್ನವೇ ವಿರೋಧ ವ್ಯಕ್ತಪಡಿಸುತ್ತಿದ್ದ ಫ್ಯಾನ್ಸ್​, ಇಷ್ಟು ದಿನಗಳು ಕಳೆದರೂ ಇನ್ನೂ ಪಾಂಡ್ಯರನ್ನು ಕ್ಯಾಪ್ಟನ್ ಎಂದು ಒಪ್ಪುತ್ತಿಲ್ಲ.

ಈ ಎಲ್ಲಾ ಬೆಳವಣಿಗೆಯ ಬೆನ್ನಲ್ಲೇ ಇದೀಗ ಇದೇ ವರ್ಷ ರೋಹಿತ್​ ಮುಂಬೈ ಇಂಡಿಯನ್ಸ್ ತಂಡವನ್ನು​ ಬಿಡ್ತಾರೆ! ಮುಂದಿನ ವರ್ಷದ ಐಪಿಎಲ್ ಆಕ್ಷನ್​ನಲ್ಲಿ ಶರ್ಮಾ​ ಮತ್ಯಾವುದಾದರು ತಂಡಕ್ಕೆ ಹೋಗುವ ನಿರೀಕ್ಷೆಯಿದೆ ಎಂಬ ವದಂತಿಗಳು ಸದ್ಯ ಸಿಕ್ಕಾಪಟ್ಟೆ ಚರ್ಚೆಯಲ್ಲಿದೆ. ಈ ಕುರಿತು ಮಾತನಾಡಿದ ಟೀಂ ಇಂಡಿಯಾದ ಮಾಜಿ ಆಟಗಾರ, ಸಿಎಸ್​ಕೆ ತಂಡದಿಂದ ನಿವೃತ್ತಿ ಪಡೆದ ಅಂಬಟಿ ರಾಯಡು, ಅಂತಿಮವಾಗಿ ಅದು ರೋಹಿತ್ ಅವರ ಕರೆ. ಎಲ್ಲಿಗೆ ಹೋಗಬೇಕೆಂದು ಬಯಸುತ್ತಾರೆ, ಯಾವ ತಂಡ ಆಯ್ಕೆ ಮಾಡ್ಕೋತ್ತಾರೆ ಎಂಬುದು ಅವರಿಗೆ ಬಿಟ್ಟದ್ದು ಎಂದರು.

ಪ್ರತಿ ತಂಡಗಳು ರೋಹಿತ್​ರನ್ನು ತಮ್ಮ ತಂಡದಲ್ಲಿ ಉಳಿಸಿಕೊಳ್ಳಲು ಇಷ್ಟಪಡುತ್ತದೆ ಮತ್ತು ಕ್ಯಾಪ್ಟನ್ ಆಗಿ ನೋಡಲು ಬಯಸುತ್ತಾರೆ. ಈ ಹಿಂದೆ ಶರ್ಮಾ ತಮ್ಮ ಒಂದೇ ಒಂದು ಹೇಳಿಕೆಯಿಂದ ಇಡೀ ಮುಂಬೈ ಮ್ಯಾನೆಜ್​ಮೆಂಟ್​ನ ಹೊಂದಿದ್ದರು. ಇಲ್ಲಿ ಏನಾಗಿತ್ತೋ ಅದಕ್ಕಿಂತ ಉತ್ತಮವಾಗಿ ಅಲ್ಲಿ ನಡೆಸಿಕೊಂಡರೆ ಅಲ್ಲಿಗೆ ರೋಹಿತ್ ಹೋಗುವುದು ಖಚಿತ ಎಂದು ನನಗೆ ಅನಿಸುತ್ತದೆ ಎಂದು ಅಂಬಟಿ ರಾಯುಡು ಹೇಳಿದ್ದಾರೆ.

ಈ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಕ್ಯಾಪ್ಟನ್ ಆಗಿ ರೋಹಿತ್​ ಬದಲಿಗೆ ಹಾರ್ದಿಕ್​ ಸ್ಥಾನ ಪಡೆದ ದಿನದಿಂದ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ಬೇಸರ, ಮನಸ್ತಾಪಗಳು ಕೂಡಿವೆ. ಇನ್ನು ಈ ಮಧ್ಯೆ ಕೇಳಿಬಂದಿರುವ ವದಂತಿಗಳ ಪ್ರಕಾರ, ಮುಂಬರುವ ಸೀಸನ್​ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವು ರೋಹಿತ್​ರನ್ನು ತಮ್ಮ ತಂಡದ ಕ್ಯಾಪ್ಟನ್ ಆಗಿ ಸಹಿ ಮಾಡಿಸಿಕೊಳ್ಳಲು ಆಸಕ್ತಿ ತೋರಿದೆ ಎಂದು ಹೇಳಲಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net