ಪಾಕ್​ ವಿರುದ್ಧ ಅಬ್ಬರಿಸಿದ ರೋಹಿತ್ ಶರ್ಮಾ; ಏಕದಿನ ಕ್ರಿಕೆಟ್ ಮಾದರಿಯಲ್ಲಿ ನೂತನ ದಾಖಲೆ ಬರೆದ ಹಿಟ್​ಮ್ಯಾನ್

Rohit Sharma
Published on

ಅಹಮದಬಾದ್​: ಟೀಂ ಇಂಡಿಯಾದ ನಾಯಕ ರೋಹಿತ್​ ಶರ್ಮಾ ಏಕದಿನ ವಿಶ್ವಕಪ್​ನಲ್ಲಿ ತಮ್ಮ ಬಿರುಸಿನ ಬ್ಯಾಟಿಂಗ್​ ಮುಂದುವರೆಸಿದ್ದು, ಪಾಕಿಸ್ತಾನದ ವಿರುದ್ಧವೂ ಲೀಲಾಜಾಲವಾಗಿ ಬ್ಯಾಟ್​ ಬೀಸಿದ್ದಾರೆ. ಇತ್ತ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಹೊಸ ದಾಖಲೆಯನ್ನು ಸಹ ಅವರು ಬರೆದಿದ್ದಾರೆ.

ಏಕದಿನ ಕ್ರಿಕೆಟ್​ ಮಾದರಿಯಲ್ಲಿ 300 ಸಿಕ್ಸರ್​ ಸಿಡಿಸಿದ ಭಾರತದ ಮೊದಲ ಹಾಗೂ ವಿಶ್ವದ ಮೂರನೇ ಬ್ಯಾಟ್ಸ್​ಮನ್​ ಎಂಬ ಹೆಗ್ಗಳಿಕೆಗೆ ಹಿಟ್​ಮ್ಯಾನ್​ ರೋಹಿತ್​ ಶರ್ಮಾ ಭಾಜನರಾಗಿದ್ದಾರೆ.

ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ 5 ಸಿಕ್ಸರ್​ ಸಿಡಿಸುವ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ಗಳಿಸಿದ ಒಟ್ಟು ಸಿಕ್ಸರ್​ಗಳ ಸಂಖ್ಯೆಯನ್ನು 556ಕ್ಕೆ ಏರಿಸಿಕೊಂಡಿದ್ದರು. ಪಾಕ್​ ವಿರುದ್ಧದ ಪಂದ್ಯದಲ್ಲೂ ಅವರ ಸಿಕ್ಸರ್​ ಯಾತ್ರೆ ಮುಂದುರೆವದಿದ್ದು, ಅವರ ಬ್ಯಾಟ್​ನಿಂದ ಒಟ್ಟಾರೆಯಾಗಿ 6 ಸಿಕ್ಸರ್​ ಸಿಡಿದಿವೆ. ಈ ಮೂಲಕ ಏಕದಿನ ಮಾದರಿ ಒಂದರಲ್ಲೇ 300 ಸಿಕ್ಸರ್​ ಸಿಡಿಸಿದ ಮೊದಲ ಭಾರತೀಯ ಹಾಗೂ ಒಟ್ಟಾರೆಯಾಗಿ ಮೂರನೇ ಆಟಗಾರ ಎನ್ನಿಸಿಕೊಂಡಿದ್ದಾರೆ.

ಪಾಕಿಸ್ತಾನದ ಶಾಹಿದ್​ ಅಫ್ರಿದಿ (351), ವೆಸ್ಟ್​ ಇಂಡೀಸ್​ನ ಸ್ಪೋಟಕ ಬ್ಯಾಟ್ಸ್​ಮನ್ ಕ್ರಿಸ್ ಗೇಲ್ (331) ಮೊದಲ ಎರಡು ಸ್ಥಾನದಲ್ಲಿ ಇರುವ ಆಟಗಾರರು. ಈಗಾಗಲೇ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಈ ಇಬ್ಬರು ಆಟಗಾರರು ನಿವೃತ್ತಿ ಘೋಷಿಸಿರುವುದರಿಂದ ರೋಹಿತ್​ ಶರ್ಮಾ(302) ಇವರಿಬ್ಬರನ್ನು ಹಿಂದಿಕ್ಕುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net