More

    ಪಾಕ್​ ಬ್ಯಾಟ್ಸ್​ಮನ್​ಗಳ ವಿರುದ್ಧ ಅಬ್ಬರಿಸಿದ ಟೀಂ ಇಂಡಿಯಾ ಬೌಲರ್ಸ್​; 191ಕ್ಕೆ ಸರ್ವಪತನ

    ಅಹಮದಬಾದ್: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಪಾಕ್ ನಡುವಿನ ಹೈವೋಲ್ಟೇಜ್ ವಿಶ್ವಕಪ್​ ಕದನದಲ್ಲಿ ಟೀಂ ಇಂಡಿಯಾದ ಬೌಲರ್​ಗಳು ಎದುರಾಳಿ ತಂಡದ ವಿರುದ್ಧ ಮೇಲುಗೈ ಸಾಧಿಸಿದ್ದು, ಸಾಧಾರಣ ಮೊತ್ತಕ್ಕೆ ಕಟ್ಟಿ ಹಾಕಿದ್ದಾರೆ.

    ಟಾಸ್​ ಗೆದ್ದು ಫೀಲ್ಡಿಂಗ್​ ಆಯ್ದ ಟೀಂ ಇಂಡಿಯಾದ ನಾಯಕ ರೋಹಿತ್​ ಶರ್ಮಾ ನಿರ್ಧಾರವನ್ನು ಸಮರ್ಥಿಸಿಕೊಂಡ ಭಾರತದ ಬೌಲರ್​ಗಳು ಎದುರಾಳಿ ತಂಡವನ್ನು 42.5 ಓವರ್​ಗಳಲ್ಲಿ 191ಕ್ಕೆ ಆಲೌಟ್​ ಮಾಡಿದ್ದಾರೆ.

    ಪಾಕಿಸ್ತಾನದ ಪರ ನಾಯಕ ಬಾಬರ್​ ಅಜಂ (50 ರನ್, 58 ಎಸೆತ, 7 ಬೌಂಡರಿ), ಮೊಹಮ್ಮದ್​ ರಿಜ್ವಾನ್ (49 ರನ್, 69 ಎಸೆತ, 7 ಬೌಂಡರಿ) ತಂಡಕ್ಕೆ ಆಸರೆಯಾಗಿದ್ದಾರೆ. ಒಂದು ಹಂತದಲ್ಲಿ 155-2 ರನ್​ ಗಳಿಸದ್ದ ಪಾಕಿಸ್ತಾನವು ಭಾರತದ ಬೌಲರ್​ಗಳ ಅಬ್ಬರದ ಮುಂದೆ ಮಂಕಾಗಿ 36 ರನ್​ಗಳಿಗೆ 8 ವಿಕೆಟ್​ ಕಳೆದುಕೊಂಡು 191ಕ್ಕೆ ಆಲೌಟ್​ ಆಯಿತು.

    ಭಾರತದ ಪರ ಜಸ್ಪ್ರೀತ್​ ಬುಮ್ರಾ (7-1-19-2), ಮೊಹಮ್ಮದ್​ ಸಿರಾಜ್ (8-0-50-2), ಹಾರ್ದಿಕ್ ಪಾಂಡ್ಯ (6-0-34-2), ಕುಲದೀಪ್ ಯಾದವ್ (10-0-35-2), ರವೀಂದ್ರ ಜಡೇಜಾ (9.5-0-38-2), ಶಾರ್ದೂಲ್​ ಠಾಕೂರ್ (2-0-12-0) ಎದುರಾಳಿ ತಂಡವನ್ನು ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. 50 ಓವರ್​ಗಳಲ್ಲಿ ಪಾಕಿಸ್ತಾನ ಭಾರತಕ್ಕೆ 192ರನ್​ಗಳ ಗುರಿ ನೀಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts