More

    ಬಾಯ್.. ಬಾಯ್​ ಇಮಾಮ್​ ಉಲ್ ಹಕ್, ಇಲ್ಲಿಗೆ ಬಂದಿದ್ದಕ್ಕೆ ಧನ್ಯವಾದ ಎಂದ ಹಾರ್ದಿಕ್ ಪಾಂಡ್ಯ; ವಿಡಿಯೋ ವೈರಲ್

    ಅಹಮದಬಾದ್: ಏಕದಿನ ವಿಶ್ವಕಪ್​ನಲ್ಲಿ ಟೂರ್ನಿಯಲ್ಲಿ ಇಂದು (ಅಕ್ಟೋಬರ್ 14)ರಂದು ಕ್ರಿಕೆಟ್​ ಲೋಕದ ಬದ್ದವೈರಿಗಳಾದ ಭಾರತ ಹಾಗೂ ಪಾಕಿಸ್ತಾನ ಸೆಣಸಾಡುತ್ತಿವೆ. ಪಂದ್ಯ ಶುರುವಾಗುವುದಕ್ಕೂ ಮುನ್ನ ಹಾಗೂ ನಂತರ ಒಂದಿಲ್ಲೊಂದು ವಿಚಾರಕ್ಕೆ ಸದ್ದು ಮಾಡುತ್ತಿದ್ದು, ಪಾಂಡ್ಯ ಕೊಟ್ಟ ರಿಯಾಕ್ಷನ್ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಅಹಮದಬಾದಿನ ನರೇಂದ್ರ ಮೋದಿ ಕ್ರೀಡಾಂಗಣದಲಲ್ಇ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್​ ಗೆದ್ದು ಫೀಲ್ಡಿಂಗ್​ ಆಯ್ದುಕೊಂಡ ಭಾರತ ಪಾಕಿಸ್ತಾನದ ಬ್ಯಾಟ್ಸ್​ಮನ್​ಗಳಿಗೆ ಕಡಿವಾಣ ಹೇರುವಲ್ಲಿ ಯಶಸ್ವಿಯಾಗಿದ್ದಾರೆ.

    ಪಾಕಿಸ್ತಾನ ತಂಡದ ಎಡಗೈ ಆರಂಭಿಕ ಇಮಾಮ್​ ಉಲ್​ ಹಲ್​ ಬಿರುಸಿನ ಬ್ಯಾಟಿಂಗ್​ ಮೂಲಕ ಭಾರತದ ಬೌಲರ್​ಗಳಿಗೆ ತಲೆನೋವಾಗಿ ಪರಿಣಮಿಸಿದ್ದರು. ಈ ಸಂದರ್ಭದಲ್ಲಿ ಬೌಲಿಂಗ್​ನಲ್ಲಿ ಬದಲಾವಣೆ ಮಾಡಿದ ನಾಯಕ ರೋಹಿತ್​ ಶರ್ಮಾ ಚೆಂಡನ್ನು ಹಾರ್ದಿಕ್​ ಪಾಂಡ್ಯಗೆ ನೀಡಿದ್ದರು. 13ನೇ ಓವರ್​ ಎಸೆದ ಹಾರ್ದಿಕ್ ಪಾಂಡ್ಯ ಅವರ ಎರಡನೇ ಎಸೆತದಲ್ಲಿ ಇಮಾಮ್ ಚೆಂಡನ್ನು ಫೋರ್​​ಗೆ ಅಟ್ಟಿದರು. ಈ ಸಂದರ್ಭ ಪಾಂಡ್ಯ ಹೊಸ ಸ್ಟ್ರಾಟಜಿ ಮಾಡಿದರು.

    ಇದನ್ನೂ ಓದಿ: ಶವದ ಪಕ್ಕ ಕುಳಿತು ರೋದಿಸಿದ ಕೋತಿ; ಮನಕಲಕುವ ದೃಶ್ಯ ವೈರಲ್

    ತನ್ನ ಮೂರನೇ ಎಸೆತವನ್ನು ಹಾಕುವುದಕ್ಕೂ ಮುನ್ನ ಹಾರ್ದಿಕ್ ಅವರು ಬಾಲ್​ಗೆ ಕೈ ಮುಗಿದು ವೈಡ್ ಆಫ್ ಸ್ಟಂಪ್ ಮೂಲಕ ಚೆಂಡನ್ನು ಎಸೆದರು. ಇದನ್ನು ಬ್ಯಾಕ್ ಫುಟ್ ಡ್ರೈವ್​ನಲ್ಲಿ ಆಡಲು ಇಮಾಮ್ ಯತ್ನಿಸಿದರು. ಆದರೆ, ಚೆಂಡು ಕೊಂಚ ಟರ್ನ್ ಆಗಿದ್ದರಿಂದ ಬ್ಯಾಟ್ ತುದಿಗೆ ತಾಗಿ ವಿಕೆಟ್ ಕೀಪರ್ ಕೆಎಲ್ ರಾಹುಲ್ ಕೈ ಸೇರಿತು. 

    ಇಮಾಮ್​ ಉಲ್ ಹಕ್ (36 ರನ್, 38 ಎಸೆತ, 6 ಬೌಂಡರಿ), ಔಟಾಗಿ ಪೆವಿಲಿಯನ್​ಗೆ ತೆರಳುವ ಸಂದರ್ಭ ಹಾರ್ದಿಕ್ ಬಾಯ್.. ಬಾಯ್.. ಎಂದು ಸನ್ನೆ ಮಾಡಿದ್ದಾರೆ. ಜೊತೆಗೆ ಇಲ್ಲಿದೆ ಬಂದಿದ್ದಕ್ಕೆ ಧನ್ಯವಾದ ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಟಾಸ್​ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿರುವ ನಾಯಕ ರೋಹಿತ್​ ಶರ್ಮಾ ನಿರ್ಧಾರವನ್ನು ಸಮರ್ಥಿಕೊಂಡಿರುವ ಭಾರತದ ಬೌಲರ್​ಗಳು ಪಾಕಿಸ್ತಾನದ ಬ್ಯಾಟ್ಸ್​ಮನ್​ಗಳಿಗೆ ಕಡಿವಾಣ ಹೇರಿದ್ದಾರೆ. 38 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 176 ರನ್​ ಗಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts