ಶವದ ಪಕ್ಕ ಕುಳಿತು ರೋದಿಸಿದ ಕೋತಿ; ಮನಕಲಕುವ ದೃಶ್ಯ ವೈರಲ್

1 Min Read
Monkey Grievance

ಲಖನೌ: ಮನುಷ್ಯ ಹಾಗೂ ಪ್ರಾಣಿಗಳ ನಡುವ ಅವಿನಭಾವ ಸಂಬಂಧವಿದೆ. ಅನೇಕ ಜನರು ಮನುಷ್ಯರಿಗಿಂತ ಪ್ರಾಣಿಗಳನ್ನು ಹೆಚ್ಚು ಪ್ರೀತಿ ಮಾಡುತ್ತಾರೆ. ಮನೆಯ ಒಬ್ಬ ಸದಸ್ಯನಂತೆ ಪ್ರಾಣಿಗಳನ್ನು ನೋಡಿಕೊಳ್ತಾರೆ. ಅದೇ ರೀತಿ ಈ ಜಗತ್ತಿನಲ್ಲಿ ಎಷ್ಟೆಲ್ಲ ವಿಚಿತ್ರ ನಡೆಯುತ್ತೆ, ಏನೆನೆಲ್ಲ ಆಗುತ್ತೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ತನಗೆ ಆಗಿಂದಾಗೆ ಆಹಾರ ನೀಡುತ್ತಿದ್ದರು ಎಂಬ ಕಾರಣಕ್ಕೆ ಕೋತಿಯೊಂದು ವ್ಯಕ್ತಿಯೊಬ್ಬರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡು ಆತನಿಗೆ ಅಂತಿಮ ನಮನ ಸಲ್ಲಿಸಿರುವ ಘಟನೆ ಉತ್ತರಪ್ರದೇಶದ ಅಮ್ರೋಹಾದಲ್ಲಿ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ಮೃತ ವ್ಯಕ್ತಿಯ ದೇಹದ ಪಕ್ಕ ಕುಳಿತುಕೊಳ್ಳುವ ಕೋತಿ ಕುಟುಂಬಸ್ಥರ ಜೊತೆ ರೋದಿಸುತ್ತಿರುವುದು ಕಂಡು ಬರುತ್ತದೆ. ಶವವನ್ನು ಅಂತ್ಯಕ್ರಿಯೆಗೆ ಕೊಂಡೊಯ್ಯುವ ವೇಳೆ ಕೋತಿ ಮೃತದೇಹದೊಂದಿಗೆ ತೆರಳಿ ಅಂತಿಮ ವಿಧಿವಿಧಾನದ ಬಳಿಕ ವಾಪಸ್ಸಾಗುವುದು ಕಂಡು ಬರುತ್ತದೆ.

ಇದನ್ನೂ ಓದಿ: ಪ್ರಜ್ವಲ್ ದೇವರಾಜ್-ಶ್ರುತಿ ಹರಿಹರನ್​ ಸಿನಿಮಾದಲ್ಲಿ ತೆಲುಗು ನಟ ಸುನೀಲ್

See also  ಶಿಕ್ಷಕರು ಕ್ರಿಯಾಶೀಲರಾಗಬೇಕು: ಬಿಇಒ ಮಹೇಶ್.ವಿ.ಪೂಜಾರ

ಈ ಕುರಿತು ಪ್ರತಿಕ್ರಿಯಿಸಿರುವ ಮೃತ ವ್ಯಕ್ತಿಯ ಸಂಬಂಧಿಕರೊಬ್ಬರು, ರಾಮ್​ಕುನ್ವರ್ ಸಿಂಗ್​ ಕಳೆದ ಎರಡು ತಿಂಗಳಿನಿಂದ ಕೋತಿಗೆ ಹಾಲು, ಬ್ರೆಡ್​ ಹಾಗೂ ತಿನುಸುಗಳನ್ನು ಪ್ರತಿನಿತ್ಯ ಕೊಡುತ್ತಿದ್ದರು. ಇವರಿಬ್ಬರ ನಡುವೆ ಒಂದು ಅನ್ಯೋನ್ಯತೆ ಬೆಳೆದಿತ್ತು. ಮಂಗಳವಾರ ಬೆಳಗ್ಗೆ ಎಂದಿನಂತೆ ಕೋತಿ ಅವರ ಮನೆ ಬಳಿ ಭೇಟಿ ನೀಡಿದ ವೇಳೆ ಆತ ಮೃತಪಟ್ಟಿರುವ ವಿಚಾರ ತಿಳಿದು ಅದು ಸಹ ಕುಟುಂಬ ಸದಸ್ಯರ ಜೊತೆ ಕಣ್ಣೀರಿಟ್ಟಿದೆ.

ಸುಮಾರು 40 ಕಿಲೋಮೀಟರ್​ ದೂರ ಪ್ರಯಾಣಿಸಿ ಆತನ ಅಂತ್ಯಕ್ರಿಯೆಯಲ್ಲೂ ಸಹ ಭಾಗಿಯಾಗಿ ವಾಪಸ್ಸಾಗಿರುವುದು ಎಲ್ಲರ ಮನ ಕಲುಕಿದೆ. ಇದು ಪ್ರಾಣಿ ಹಾಗೂ ಮನುಷ್ಯನ ನಡುವಿನ ಸಂಬಂಧಕ್ಕೆ ಅತಿದೊಡ್ಡ ಉದಾಹರಣೆ ಎಂದು ಮೃತ ರಾಮ್​ಕುನ್ವರ್​ ಸಿಂಗ್​ ಸಂಬಂಧಿಕರೊಬ್ಬರು ಹೇಳಿದ್ದಾರೆ.

Share This Article