More

  ಗುತ್ತಿಗೆದಾರನ ಮನೆ ಮೇಲೆ ಐಟಿ ದಾಳಿ ಪ್ರಕರಣ; ಭ್ರಷ್ಟಾಚಾರ ಕಾಂಗ್ರೆಸ್​ನ​ ಡಿಎನ್​ಎಯಲ್ಲೇ ಅಡಕವಾಗಿದೆ: ರಾಜೀವ್​ ಚಂದ್ರಶೇಖರ್

  ನವದೆಹಲಿ: ಕಾಂಗ್ರೆಸ್​ ಡಿಎನ್​ಎಯಲ್ಲಿ ಭ್ರಷ್ಟಾಚಾರ ಅಡಕವಾಗಿದೆ. ಅದಕ್ಕೆ ಉತ್ತಮ ಉದಾಹರಣೆ ಎಂದರೆ ಗುತ್ತಿಗೆದಾರರೊಬ್ಬರ ಮನೆಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ 42 ಕೋಟಿ ರೂಪಾಯಿ ಹಣ ಸಿಕ್ಕಿರುವುದು ಎಂದು ಕೇಂದ್ರ ಸಚಿವ ರಾಜೀವ್​ ಚಂದ್ರಶೇಖರ್​ ವಾಗ್ದಾಳಿ ನಡೆಸಿದ್ದಾರೆ.

  ಪಕ್ಷದ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಾಜೀವ್​ ಚಂದ್ರಶೇಖರ್​, ಕಳೆದ ವರ್ಷ ನಮ್ಮ ಮೇಲೆ ಆರೋಪ ಮಾಡಿ ಗುತ್ತಿಗೆದಾರರಿಂದ ಪ್ರಧಾನಿಗೆ ಪತ್ರ ಬರೆಸಿದ್ದ ಕಾಂಗ್ರೆಸ್​ನವರು ಈ ವಿಚಾರವಾಗಿ ಯಾಕೆ ಮೌನ ವಹಿಸಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

  ಕಳೆದ ವರ್ಷ ಕರ್ನಾಟಕದಲ್ಲಿದ್ದ ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್​ ಕಮಿಷನ್​ ಆರೋಪ ಹೊರಿಸಿ ಪ್ರಧಾನಿ ಕಚೇರಿಗೆ ಪತ್ರ ಬರೆದಿದ್ದವರಲ್ಲಿ ಗುತ್ತಿಗೆದಾರ ಅಂಬಿಕಾಪತಿ ಕೂಡ ಒಬ್ಬರು. ಅಂಬಿಕಾಪತಿ ಹಾಗೂ ಕೆಲ ಗುತ್ತಿಗೆದಾರರು ಕಾಂಗ್ರೆಸ್​ ಪರವಾಗಿ ಕೆಲಸ ಮಾಡುತ್ತಿದ್ದು, ಬಿಜೆಪಿ ವಿರುದ್ಧ ಸುಳ್ಳು ಭ್ರಷ್ಟಾಚಾರ ಆರೋಪಗಳನ್ನು ಹೊರಿಸಿ ಕರ್ನಾಟಕ ಜನತೆಯ ದಾರಿ ತಪ್ಪಿಸಿದ್ದಾರೆ.

  ಇದನ್ನೂ ಓದಿ: VIDEO| ಅಪರೂಪದ ಘಟನೆಗೆ ಸಾಕ್ಷಿಯಾಯಿತು ಭಾರತ-ಪಾಕ್ ನಡುವಿನ ಪಂದ್ಯ; ವಿಭಿನ್ನ ಅನುಭವ ಎಂದ ನೆಟ್ಟಿಗರು

  ಅಂಬಿಕಾಪತಿ ಮನೆ ಮೇಲೆ ಐಟಿ ದಾಳಿಯಾದ ಬಳಿಕ ಅನೇಕ ವಿಚಾರಗಳು ಹೊರಬಂದಿದ್ದು, ಅವರು ಆಡಿದ ನಾಟಕ ಒಂದೊಂದಾಗಿ ಬಯಲಾಗುತ್ತಿದೆ. ದುರಾದೃಷ್ಟವೇನೆಂದರೆ ಕಾಂಗ್ರೆಸ್​ ನಾಯಕರು ಆಡಿಸಿದ ಈ ನಾಟಕಕ್ಕೆ ಜನರು ಮರುಳಾಗಿ ಅವರಿಗೆ ಅಧಿಕಾರ ನೀಡಿದ್ದಾರೆ. ಜನರ ದಿಕ್ಕನ್ನು ತಪ್ಪಿಸಿ ಕಾಂಗ್ರೆಸ್​ ಅಧಿಕಾರ ಹಿಡಿದಿದೆ ಎಂದು ಕಿಡಿಕಾರಿದ್ದಾರೆ.

  ನಕಲಿ ಗ್ಯಾರಂಟಿ, ಸುಳ್ಲನ್ನು ಹೆಚ್ಚಾಗಿ ನಂಬುವ ಕಾಂಗ್ರೆಸ್​ ಡಿಎನ್​ಎಯಲ್ಲೇ ಭ್ರಷ್ಟಾಚಾರ ಅಡಕವಾಗಿದೆ. ನಾವು ಈಗಾಗಲೇ ಇದನ್ನು ಕರ್ನಾಟಕದಲ್ಲಿ ನೋಡಿದ್ದು, ಅದನ್ನು ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್​ಗಢ, ಮಿಜೋರಾಂನಲ್ಲಿ ತನ್ನ ಸುಳ್ಳಿನ ಅಸ್ತ್ರವನ್ನು ಪ್ರಯೋಗಿಲು ಕಾಂಗ್ರೆಸ್​ ನಾಯಕರು ಮುಂದಾಗಿದ್ದಾರೆ.

  ಅಂಬಿಕಾಪತಿ ಪ್ರಕರಣವು ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಜನರ ಮುಖವಾಡಗಳು ಕಳಚುವ ಸಾಧ್ಯತೆ ಇದೆ. ಭ್ರಷ್ಟಾಚಾರದಲ್ಲೇ ಮುಳುಗಿರುವ ಕಾಂಗ್ರೆಸ್​ಗೆ ಮುಂದಿನ ದಿನಗಳಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕೇಂದ್ರ ಸಚಿವ ರಾಜೀವ್​ ಚಂದ್ರಶೇಖರ್​ ಗುಡುಗಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts