ಆರ್​​ಸಿಬಿಯ ಮತ್ತೊಬ್ಬ ಆಟಗಾರ ಡೇನಿಯಲ್ ಸ್ಯಾಮ್ಸ್​​ಗೆ ಕರೊನಾ

sams
Published on

ಚೆನ್ನೈ : ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​​ಸಿಬಿ) ತಂಡದ ಆಲ್​ರೌಂಡರ್ ಡೇನಿಯಲ್ ಸ್ಯಾಮ್ಸ್ ಅವರಿಗೆ ಕರೊನಾ ಸೋಂಕು ತಗುಲಿದೆ. ಏಸಿಂಪ್ಟಮಾಟಿಕ್ ಆಗಿರುವ ಸ್ಯಾಮ್ಸ್​ ಅವರನ್ನು ನಿಗದಿತ ವೈದ್ಯಕೀಯ ಕೇಂದ್ರದಲ್ಲಿ ಐಸೋಲೇಷನ್​​ನಲ್ಲಿರಿಸಲಾಗಿದೆ ಎಂದು ಆರ್​ಸಿಬಿ ಅಧಿಕೃತ ಹೇಳಿಕೆ ನೀಡಿದೆ.

ಐಪಿಲ್​ 2021 ಪಂದ್ಯಾವಳಿಯಲ್ಲಿ ಭಾಗವಹಿಸಲು ಸ್ಯಾಮ್ಸ್​ ಅವರು, ಚೆನ್ನೈನ ಹೊಟೆಲ್​​ಗೆ ಏಪ್ರಿಲ್ 3 ರಂದು ಕರೊನಾ ನೆಗೆಟೀವ್ ವರದಿಯೊಂದಿಗೆ ಆಗಮಿಸಿದ್ದರು. ಇಂದು ಮಾಡಿದ ಎರಡನೇ ಪರೀಕ್ಷೆಯಲ್ಲಿ ಅವರಿಗೆ ಪಾಸಿಟೀವ್ ಬಂದಿದೆ ಎಂದು ಆರ್​ಸಿಬಿ ತಿಳಿಸಿದೆ.

ಈ ಮುನ್ನ ಆರ್​ಸಿಬಿಯ ಮತ್ತೊಬ್ಬ ಆಟಗಾರ ದೇವದತ್ ಪಡಿಕ್ಕಲ್ ಅವರಿಗೆ ಹೊಟೆಲ್ ಕ್ವಾರಂಟೈನ್ ಸಮಯದಲ್ಲಿ ಕರೊನಾ ಪಾಸಿಟೀವ್ ಬಂದಿತ್ತು. 14ನೇ ಆವೃತ್ತಿಯ ಐಪಿಎಲ್ ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲಿ ಆರ್​ಸಿಬಿ, ಏಪ್ರಿಲ್ 9 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಸೆಣೆಸಲಿದೆ. ಆ ಪಂದ್ಯದಲ್ಲಿ ಡೇನಿಯಲ್ ಸ್ಯಾಮ್ಸ್ ಆಡಲು ಸಾಧ್ಯವಾಗುವುದಿಲ್ಲ ಎನ್ನಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net