ಅಮಿತ್ ಷಾ-ಆದಿತ್ಯನಾಥರ ಮೇಲೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಬಾಂಬ್ ದಾಳಿ ಬೆದರಿಕೆ

bomb
Published on

ಮುಂಬೈ : ದೇಶದ ಮಂದಿರಗಳು, ಏರ್​ಪೋರ್ಟ್​ಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಬಾಂಬ್ ದಾಳಿ ನಡೆಸುವ ಬೆದರಿಕೆಯುಳ್ಳ ಈ-ಮೇಲ್ ಒಂದು ಸಿಆರ್​ಪಿಎಫ್​ ಮುಂಬೈ ಕಚೇರಿ ತಲುಪಿದೆ. ಈ ಮೇಲ್​​ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್​ ಷಾ ಮತ್ತು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಅವರನ್ನು ಕೊಲ್ಲುವ ಬೆದರಿಕೆ ಕೂಡ ಇದೆ ಎನ್ನಲಾಗಿದೆ.

ಭಾರತದಲ್ಲಿ ಲಷ್ಕರ್​-ಎ-ತೈಬಾದ ಆತಂಕವಾದಿಗಳು ಮುಚ್ಚಿಟ್ಟುಕೊಂಡಿದ್ದಾರೆ. ಮೂರು ರಾಜ್ಯಗಳಲ್ಲಿ 200 ಕಿಲೋಗ್ರಾಮ್ ಹೈಗ್ರೇಡ್​ ಆರ್​ಡಿಎಕ್ಸ್​ ಶೇಖರಿಸಲಾಗಿದೆ. ಮತ್ತು 11 ಸೂಯಿಸೈಡ್ ಬಾಂಬರ್​ಗಳು ದಾಳಿ ನಡೆಸಲು ಸಿದ್ಧರಾಗಿದ್ದಾರೆ ಎಂದು ಈ-ಮೇಲ್​ನಲ್ಲಿ ಬರೆದಿದ್ದಾರೆ ಎನ್ನಲಾಗಿದೆ.

ಅಮಿತ್​ ಷಾ​ ಅವರನ್ನು ಮತ್ತು ಆದಿತ್ಯನಾಥರನ್ನು ಸೂಯಿಸೈಡ್​ ಅಟ್ಯಾಕ್ ಮೂಲಕ 'ಎಲಿಮಿನೇಟ್' ಮಾಡುವುದಾಗಿ ಸದರಿ ಮೇಲ್​ನಲ್ಲಿ ಹೇಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ-ಮೇಲ್​ನ ಮೂಲವನ್ನು ಕಂಡುಹಿಡಿಯುವ ಪ್ರಯತ್ನದೊಂದಿಗೆ ಸಿಆರ್​ಪಿಎಫ್​ ಮತ್ತು ಬೇಹುಗಾರಿಕೆ ಇಲಾಖೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net