

ಮುಂಬೈ : ಬಾಲಿವುಡ್ ತಾರೆ ಕತ್ರೀನಾ ಕೈಫ್ ಅವರಿಗೆ ಕರೊನಾ ಸೋಂಕು ತಗುಲಿದೆ. ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಕೈಫ್ ಅಭಿಮಾನಿಗಳಿಗೆ ತಿಳಿಸಿದ್ದಾರೆ.
ಕತ್ರೀನಾ ಕೈಫ್ ಅವರ ಬಾಯ್ಫ್ರೆಂಡ್ ಎಂದು ಹೇಳಲಾಗುತ್ತಿರುವ ನಟ ವಿಕಿ ಕೌಶಲ್ರಿಗೆ ಕರೊನಾ ಸೋಂಕು ದೃಢಪಟ್ಟ ವಿಷಯ ತಿಳಿದ ಮರುದಿನವಾದ ಇಂದು ಈ ಸುದ್ದಿ ಬಂದಿದೆ.
ಇತ್ತೀಚೆಗೆ ಕರೊನಾ ಪಾಸಿಟೀವ್ ಬಂದಿರುವ ಬಾಲಿವುಡ್ ನಟ-ನಟಿಯರ ಪಟ್ಟಿಯಲ್ಲಿ ಅಕ್ಷಯ್ಕುಮಾರ್, ಗೋವಿಂದ, ಆಲಿಯ ಭಟ್, ಆಮೀರ್ ಖಾನ್, ಆರ್.ಮಾಧವನ್ ಸೇರಿದ್ದಾರೆ. (ಏಜೆನ್ಸೀಸ್)