ಬ್ಯಾಡ್ಮಿಂಟನ್ ಸ್ಟಾರ್ ಪಿವಿ ಸಿಂಧು ಅವರ ಬಹುದಿನಗಳ ಕನಸು ಯಾವುದು ಗೊತ್ತೇ?

sindhu and serena williams
Published on

ಹೈದರಾಬಾದ್: ವಿಶ್ವ ಬ್ಯಾಡ್ಮಿಂಟನ್ ಸ್ಟಾರ್ ಪಿವಿ ಸಿಂಧುಗೆ ಬಹುದಿನಗಳ ಒಂದು ಕನಸು ಇದೆಯಂತೆ. ವಿಶ್ವ ಟೆನಿಸ್‌ನಲ್ಲಿ ತನ್ನದೇ ಛಾಪು ಮೂಡಿಸುತ್ತಿರುವ ಅಮೆರಿಕದ ಸೆರೇನಾ ವಿಲಿಯಮ್ಸ್ ಜತೆ ಕೂತು ಸಿಂಧು ಬೆಳಗಿನ ಉಪಹಾರ ಸೇವಿಸಬೇಕಂತೆ. ಆಕೆ ಯಾವಾಗೂ ಸಂತೋಷದಿಂದ ಇರುತ್ತಾರೆ, ಅಲ್ಲದೆ, ತುಂಬಾ ಸ್ನೇಹಮಯಿ ವ್ಯಕ್ತಿತ್ವ ಅವರದು. ಹೀಗಾಗಿಯೇ ಸೆರೇನಾ ಎಂದರೆ ನನಗೆ ತುಂಬಾ ಇಷ್ಟ ಎಂದು ಸಿಂಧು ಹೇಳಿಕೊಂಡಿದ್ದಾರೆ. ಯಾರೊಂದಿಗೆ ನಿಮಗೆ ಬ್ರೇಕ್‌ ಫಾಸ್ಟ್ ಮಾಡಲು ಇಷ್ಟ ಎಂಬ ಪ್ರಶ್ನೆಯೊಂದಕ್ಕೆ ಸಿಂಧು ಈ ರೀತಿ ಉತ್ತರಿಸಿದ್ದಾರೆ.

ನಾನು ಅತ್ಯಂತ ಖುಷಿಯಿಂದ ಇರುವ ವ್ಯಕ್ತಿಗಳನ್ನು ಇಷ್ಟಪಡುತ್ತೇನೆ. ಬೆಳಗಿನ ವೇಳೆ ಶುಭಾಶಯ ತಿಳಿಸುವುದು, ಹೇಗಿದ್ದಿ ಎಂದು ವಿಚಾರಿಸುವುದು ಎಂದರೆ ನನಗೆ ತುಂಬಾ ಇಷ್ಟು ಎಂದು ಸಿಂಧು ಹೇಳಿದ್ದಾರೆ. ಅಲ್ಲದೆ, ಟೋಕಿಯೊ ಒಲಿಂಪಿಕ್ಸ್‌ಗೆ ಸಿದ್ಧತೆ ಕುರಿತಂತೆ ಮಾತನಾಡಿದ ಸಿಂಧು, ಬೆಳಗಿನ ಅವಧಿಯನ್ನು ಅಭ್ಯಾಸಕ್ಕೆ ಮೀಸಲಿಟ್ಟಿದ್ದೇನೆ. ಸಂಜೆ ಅವಧಿಯಲ್ಲಿ ರನ್ನಿಂಗ್ ಹಾಗೂ ಹೆಚ್ಚು ದೈಹಿಕ ಕಸರತ್ತು ನಡೆಸುತ್ತೇನೆ ಎಂದು ಹೇಳಿದ್ದಾರೆ. ಬೆಳಗ್ಗೆ 6.40ಕ್ಕೆ ಮನೆಯಿಂದ ಹೊರಟರೆ, 7 ಗಂಟೆಗೆ ಸ್ವಲ್ಪ ವ್ಯಾಯಾಮ ಮಾಡುವೆ, ಬಳಿಕ 7.30ರಿಂದ ಕೋರ್ಟ್‌ನಲ್ಲಿ ಅಭ್ಯಾಸ ಆರಂಬಿಸುತ್ತಿದೆ. ಸಂಜೆ ಪೂರ್ತಿ ಜಿಮ್, ರನ್ನಿಂಗ್ ಹಾಗೂ ಇತರ ದೈಹಿಕ ಕಸರತ್ತು ನಡೆಸುವೆ ಎಂದು ಸಿಂಧು ಹೇಳಿದ್ದಾರೆ. ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಸಿಂಧು 2014 ರಿಂದ 2019ರ ಅವಧಿಯಲ್ಲಿ 5 ಪದಕ ಜಯಿಸಿದ್ದಾರೆ.

ಕಠಿಣವಾದ ತರಬೇತಿ ಹಾಗೂ ಅಭ್ಯಾಸ ನಡೆಸಿದರೆ ಕನಿಷ್ಠ 6 ರಿಂದ 7 ಗಂಟೆಗಳ ಕಾಲ ನಿದ್ದೆ ಬೇಕೇ ಬೇಕು. ಮಧ್ಯಾಹ್ನದ ವೇಳೆ ಒಂದೂವರೆ ಅಥವಾ ಎರಡು ಗಂಟೆಗಳ ಕಾಲ ನಿದ್ದೆ ಮಾಡುವೆ. ಅಭ್ಯಾಸ, ದೈಹಿಕ ಕಸರತ್ತಿಗೆ ಜತೆಗೆ ನಿದ್ದೆಗೂ ಆದ್ಯತೆ ನೀಡಬೇಕು ಎಂದು ಸಿಂಧು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net