More

    2019ರಲ್ಲಿ ನಿಷೇಧಕ್ಕೊಳಗಾದ ಕಥೆ ಬಿಚ್ಚಿಟ್ಟ ಮುಂಬೈ ಬ್ಯಾಟ್ಸ್​ಮನ್​ ಪೃಥ್ವಿ ಷಾ

    ಮುಂಬೈ: ಭಾರತದ ಯುವ ಬ್ಯಾಟ್ಸ್​ಮನ್​ ಪೃಥ್ವಿ ಷಾ ಪಾಲಿಗೆ 2019ರಲ್ಲಿ ಕಹಿ ಘಟನೆಯೊಂದು ನಡೆದಿತ್ತು. ನಿಷೇಧಿತ ಮದ್ದು ಸೇವಿಸಿದ ಹಿನ್ನೆಲೆಯಲ್ಲಿ 8 ತಿಂಗಳ ಕಾಲ ಬಿಸಿಸಿಐನಿಂದ ಅಮಾನತು ಶಿಕ್ಷೆ ಎದುರಿಸಿದ್ದರು. ಶಿಕ್ಷೆ ವಿಧಿಸುವುದಕ್ಕೂ ಮೊದಲೇ ನಾಲ್ಕೂ ತಿಂಗಳು ಕಳೆದಿದ್ದ ಕಾರಣ ಕೇವಲ 4 ತಿಂಗಳಿಗೆ ವಾಪಸಾದರು. ಈ ಕುರಿತು ಬಹುದಿನಗಳ ಬಳಿಕ ಮಾಹಿತಿ ಹಂಚಿಕೊಂಡಿರುವ 21 ವರ್ಷದ ಪೃಥ್ವಿ ಷಾ, ಈ ಘಟನೆಗೆ ನಾನು ಹಾಗೂ ನನ್ನ ತಂದೆಯೇ ಕಾರಣ. ಅತಿಯಾದ ಕೆಮ್ಮು ಭಾದಿಸಿದ ಹಿನ್ನೆಲೆಯಲ್ಲಿ ಔಷಧಿ ತೆಗೆದುಕೊಳ್ಳಲಾಯಿತು. ಆದರೆ, ಈ ಔಷಧಿ ಬಿಸಿಸಿಐ ನಿಷೇಧಿಸಿರುವ ಪಟ್ಟಿಯಲ್ಲಿದೆ ಎಂದು ನಮಗೆ ಗೊತ್ತಿರಲಿಲ್ಲ ಎಂದು ಪೃಥ್ವಿ ಷಾ ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ನೆಚ್ಚಿನ ತಂಡ ಗೆದ್ದ ಸಂಭ್ರಮಾಚರಣೆ ವೇಳೆ ಪ್ರಾಣತೆತ್ತ ಫುಟ್​ಬಾಲ್​ ಅಭಿಮಾನಿ, 

    ಇಂದೋರ್​ನಲ್ಲಿ ಸಯ್ಯದ್​ ಮುಷ್ತಾಕ್​ ಅಲಿ ಟ್ರೋಫಿ ಟಿ20 ಟೂನಿರ್ಯಲ್ಲಿ ಆಡುತ್ತಿದ್ದೆ, ಈ ವೇಳೆಗೆ ನನಗೆ ಅತಿಯಾದ ಕೆಮ್ಮು ಹಾಗೂ ಶೀತ ಕಾಡಿತು. ಪಂದ್ಯ ಮುಗಿಸಿ ರಾತ್ರಿ ಹೋಟೆಲ್​ಗೆ ಊಟಕ್ಕೆ ಹೋದಾಗ ಕೆಮ್ಮು ಅತಿಯಾಗಿ ಕಾಡಿತು. ಈ ವೇಳೆ ತಂದೆಯೊಂದಿಗೆ ಮಾತನಾಡಿದೆ. ನನ್ನ ತಂದೆ ಒಂದು ಸಿರಪ್​ ತೆಗೆದುಕೊಳ್ಳಲು ಹೇಳಿದರು. ನಾನು ತಂಡದ ಫಿಸಿಯೋ ಅವರನ್ನು ಸಂಪಕಿರ್ಸದೆ ಔಷಧ ಕುಡಿದದ್ದು ನನ್ನಿಂದಾದ ದೊಡ್ಡ ತಪ್ಪು ಎಂದು ಪೃಥ್ವಿ ಷಾ ಕ್ರಿಕೆಟ್​ ವೆಬ್​ಸೈಟ್​ವೊಂದಕ್ಕೆ ಹೇಳಿಕೊಂಡಿದ್ದಾರೆ. ಮದ್ದು ತೆಗೆದುಕೊಂಡ ಮೂರನೇ ದಿನಕ್ಕೆ ಡೋಪಿಂಗ್​ ಟೆಸ್ಟ್​ ಎದುರಿಸಬೇಕಾಯಿತು. ನಿಷೇಧಿತ ಮದ್ದು ತೆಗೆದುಕೊಂಡಿರುವುದು ಪತ್ತೆಯಾಯಿತು. ಬಳಿಕ ನನಗೆ ಶಿಕ್ಷೆಯೂ ಆಯಿತು ಎಂದು ವಿವರಿಸಿದ್ದಾರೆ.

    ಇದನ್ನೂ ಓದಿ: ಯಾರಾದರೂ ತಂಡಕ್ಕೆ ಪ್ರಾಯೋಜಕತ್ವ ನೀಡಿ ಎಂದು ಅಳಲು ತೋಡಿಕೊಂಡ ಜಿಂಬಾಬ್ವೆ ಆಲ್ರೌಂಡರ್

    ಪೃಥ್ವಿ ಷಾ ಅನುಪಸ್ಥಿತಿಯಲ್ಲಿ ಶುಭಮಾನ್​ ಗಿಲ್​ ಟೆಸ್ಟ್​ ಕ್ರಿಕೆಟ್​ನಲ್ಲಿ ಇನಿಂಗ್ಸ್​ ಆರಂಭಿಸುವ ಅವಕಾಶ ಗಿಟ್ಟಿಸಿಕೊಂಡರು. ರೋಹಿತ್​ ಶರ್ಮ ಜತೆಗೂಡಿ ಇನಿಂಗ್ಸ್​ ಆರಂಭಿಸಿದರು. ಕಳೆದ ವರ್ಷ ಆಸ್ಟ್ರೆಲಿಯಾದಲ್ಲೂ ಸಿಕ್ಕ ಅವಕಾಶವನ್ನು ಪೃಥ್ವಿ ಷಾ ಸೂಕ್ತವಾಗಿ ಬಳಸಿಕೊಳ್ಳಲು ವಿಫಲರಾದ ಹಿನ್ನೆಲೆಯಲ್ಲಿ ತಂಡದಿಂದ ಕೈಬಿಡಲಾಗಿತ್ತು. ಬಳಿಕ ದೇಶೀಯ ಕ್ರಿಕೆಟ್​ನಲ್ಲಿ ಉತ್ತಮ ನಿರ್ವಹಣೆ ತೋರಿದ್ದರು.

    ಜಿಂಬಾಬ್ವೆ ಆಲ್ರೌಂಡರ್​ ಮನವಿಗೆ ಸ್ಪಂದಿಸಿದ ಪೂಮಾ ಕ್ರಿಕೆಟ್​, ತಂಡಕ್ಕೆ ಕಡೆಗೂ ದಕ್ಕಿದ ಪ್ರಾಯೋಜಕರು

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts