More

    ಮತದಾನದಲ್ಲಿ ಉತ್ತರವೇ ಬೆಸ್ಟ್; ಮಂಡ್ಯ ಫಸ್ಟ್

    ಬೆಂಗಳೂರು: ರಾಜ್ಯದ ಲೋಕಸಭೆ ಚುನಾವಣೆಯ 28 ಕ್ಷೇತ್ರಗಳ ಮತದಾನದ ಅಧಿಕೃತ ಅಂಕಿ-ಅಂಶಗಳು ಅಂತಿಮವಾಗಿವೆ. ಒಟ್ಟು 5.47 ಕೋಟಿಗೂ ಅಧಿಕೃತ ಮತದಾರರಲ್ಲಿ 3.86 ಕೋಟಿಗೂ ಹೆಚ್ಚು ಮತದಾರರು (ಅಂಚೆ ಮತದಾನ ಹೊರತುಪಡಿಸಿ) ತಮ್ಮ ಹಕ್ಕು ಚಲಾಯಿಸಿದ್ದಾರೆ. 2019ರ ಲೋಕಸಭೆ ಚುನಾವಣೆಗೆ ಹೋಲಿಸಿದರೆ ಮತದಾನ ಪ್ರಮಾಣ ಶೇಕಡ 1.83ರಷ್ಟು ಹೆಚ್ಚಳವಾಗಿದೆ.

    ಇತರ 5,012 ಮತದಾರರಲ್ಲಿ 1,076 ಮತದಾರರು ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ. 28 ಲೋಕಸಭಾ ಕ್ಷೇತ್ರಗಳ ಪೈಕಿ ಮಂಡ್ಯ ಕ್ಷೇತ್ರದಲ್ಲಿ ಗರಿಷ್ಠ ಶೇ.81.67ರಷ್ಟು ಮತದಾನವಾಗಿ, ಮೊದಲ ಸ್ಥಾನದಲ್ಲಿದ್ದರೆ, ಶೇ.53.17ರಷ್ಟು ಮತದಾನವಾದ ಬೆಂಗಳೂರು ದಕ್ಷಿಣ ಕೊನೆಯ ಸ್ಥಾನದಲ್ಲಿದೆ.

    ಮೊದಲ ಹಂತದ 14 ಲೋಕಸಭೆ ಕ್ಷೇತ್ರಗಳಲ್ಲಿ ಒಟ್ಟು ಶೇ.70.64ಕ್ಕೆ ಹೋಲಿಸಿದರೆ ಎರಡನೇ ಹಂತದ 14 ಲೋಕಸಭೆ ಕ್ಷೇತ್ರಗಳಿಗೆ ಒಟ್ಟು ಶೇ.71.84 ಮತದಾನವಾಗಿದೆ. ಬೇಸಿಗೆ ಧಗೆಯಲ್ಲೂ ಕರ್ನಾಟಕದ ಉತ್ತರ ಪ್ರಾಂತದ ಜನರು ಮತದಾನಕ್ಕೆ ಹೆಚ್ಚಿನ ಉತ್ಸಾಹ ತೋರಿಸಿರುವುದು ನಿಚ್ಚಳವಾಗಿದೆ.

    ಮಂಡ್ಯ ಕ್ಷೇತ್ರದ 8,76,112 ಪುರುಷರು, 9,02,963 ಸೀಯರು,  ಇತರರು 168 ಸೇರಿ 17,79,243 ಮತದಾರರಲ್ಲಿ 7,20,512 ಪುರುಷರು, 7,32,504 ಸೀಯರು, 44 ಇತರರು ಸೇರಿ 14,53,060 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

    ಬೆಂಗಳೂರು ದಕ್ಷಿಣ ಕ್ಷೇತ್ರದ 12,07,291 ಪುರುಷರು, 11,34,068 ಸೀಯರು, 400 ಇತರರು ಸೇರಿ 23,41,759 ಮತದಾರರಲ್ಲಿ 6,30,747 ಪುರುಷರು, 6,14,371 ಸೀಯರು, 50 ಇತರರು ಸೇರಿ 12,45,168 ಮತದಾರರು ತಮ್ಮ ಕರ್ತವ್ಯ ಪಾಲಿಸಿದ್ದಾರೆ.

    ತುಲನಾತ್ಮಕ ಶೇಕಡವಾರು ಮತದಾನ ಪ್ರಮಾಣ

    ಕ್ಷೇತ್ರಗಳು  2019  2024

    ಚಿಕ್ಕೋಡಿ  75.62  78.66

    ಬೆಳಗಾವಿ  67.84  71.49

    ಬಾಗಲಕೋಟೆ 70.70  72.66

    ವಿಜಯಪುರ 61.89  66.32

    ಕಲಬುರಗಿ    61.18   62.25

    ರಾಯಚೂರು 58.34 64.66

    ಬೀದರ್         63.00  65.47

    ಕೊಪ್ಪಳ         68.56  70.99

    ಬಳ್ಳಾರಿ          69.76  73.59

    ಹಾವೇರಿ        74.21  77.60

    ಧಾರವಾಡ     70.29  74.37

    ಉತ್ತರಕನ್ನಡ  74.16  76.53

    ದಾವಣಗೆರೆ     73.19  76.99

    ಶಿವಮೊಗ್ಗ       76.58    78.33


    ಹಂತ-2 ಒಟ್ಟು   68.65   71.84

    ————————————

    ಉಡುಪಿ-ಚಿಕ್ಕಮಗಳೂರು 76.07  77.15

    ಹಾಸನ                            77.35  77.68

    ದಕ್ಷಿಣಕನ್ನಡ                      77.99  77.56

    ಚಿತ್ರದುರ್ಗ                        70.80  73.30

    ತುಮಕೂರು                      77.43  78.05

    ಮಂಡ್ಯ                             80.59   81.67

    ಮೈಸೂರು                         69.51  70.62

    ಚಾಮರಾಜನಗರ               75.35  76.81

    ಬೆಂಗಳೂರು ಗ್ರಾಮಾಂತರ   64.98  68.30

    ಬೆಂಗಳೂರು ಉತ್ತರ            54.76  54.45

    ಬೆಂಗಳೂರು ಕೇಂದ್ರ             54.32  54.06

    ಬೆಂಗಳೂರು ದಕ್ಷಿಣ               53.70  53.17

    ಚಿಕ್ಕಬಳ್ಳಾಪುರ                      76.74  77.00

    ಕೋಲಾರ                              77.25  78.27

    ————————————————————

    ಹಂತ-1 ಒಟ್ಟು                       68.96   69.56

    ————————————————————-

    ಎರಡು ಹಂತ ಸೇರಿ ಒಟ್ಟಾರೆ     68.81  70.64

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts