ಮುಂಬೈ: ಭಾರತ ತಂಡದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ಪತ್ನಿ ನತಾಶಾ ಸ್ಟಾನ್ಕೊವಿಕ್ ಜೋಡಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಜೋಡಿ. ಸದ್ಯ ಕೋವಿಡ್ನಿಂದ ಲಾಕ್ಡೌನ್ ಬಿಸಿ ಎದುರಿಸುತ್ತಿರುವ ಈ ಜೋಡಿ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಸಕ್ರಿಯವಾಗಿದೆ. ನತಾಶಾ ಇತ್ತೀಚೆಗೆ ಕಪ್ಪುಬಣ್ಣದ ಬಿಕಿನಿ ತೊಟ್ಟು ಕಪ್ಪು ಕನ್ನಡಕ ಹಾಕಿದ್ದ ಹಳೇ ಫೋಟೋವೊಂದನ್ನು ಪೋಸ್ಟ್ ಮಾಡಿದ್ದರು. ಗುಡ್ ಟೈಮ್ಸ್..ಕಂದು ಬಣ್ಣ ಎಂದು ಬರೆದುಕೊಂಡಿದ್ದರು. ಇದಕ್ಕೆ ಸಾವಿರಾರು ಮಂದಿ ಪ್ರತಿಕ್ರಿಯೆ ನೀಡಿದ್ದರು. ಪತಿ ಹಾರ್ದಿಕ್ ಪಾಂಡ್ಯ ಕೂಡ ಪತ್ನಿ ಫೋಟೋಗೆ ಹಾರ್ಟ್ ಎಮೊಜಿಯೊಂದಿಗೆ ಹಾಕುವ ಮೂಲಕ ಫಿದಾ ಆಗಿದ್ದಾರೆ.
ಇದನ್ನೂ ಓದಿ: ಶ್ರೀಲಂಕಾ ಎದುರು 33 ರನ್ಗಳಿಂದ ಗೆಲುವು ದಾಖಲಿಸಿದ ಬಾಂಗ್ಲಾದೇಶ
ಸದ್ಯ ಕ್ರಿಕೆಟ್ನಲ್ಲಿ ಬಿಡುವಿನಲ್ಲಿ ಹಾರ್ದಿಕ್ ಪಾಂಡ್ಯ ಪತ್ನಿ ಹಾಗೂ ಮಗನೊಂದಿಗೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಹಾರ್ದಿಕ್ ಪಾಂಡ್ಯ ಜತೆಗಿನ ಹಳೇ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಪ್ರಕಟಿಸುತ್ತಿದ್ದಾರೆ. ವಿಶೇಷ ಉಡುಪುಗಳನ್ನು ತೊಟ್ಟಿರುವ ಫೋಟೋಗಳು ವೈರಲ್ ಆಗಿವೆ.
ಇದನ್ನೂ ಓದಿ: ಶೀಘ್ರವೇ ಮಹಿಳಾ ತಂಡದ ಕೈ ಸೇರಲಿದೆ ಟಿ20 ವಿಶ್ವಕಪ್ ಬಹುಮಾನದ ಮೊತ್ತ
ಕೋವಿಡ್-19 ಪ್ರಕರಣಗಳು ಕಂಡುಬಂದ ಹಿನ್ನೆಲೆಯಲ್ಲಿ 14ನೇ ಐಪಿಎಲ್ ಅನಿದಿರ್ಷ್ಟಾವಧಿವರೆಗೆ ಮುಂದೂಡಿಕೆಯಾಗಿದೆ. ಟೆಸ್ಟ್ ತಂಡದ ಹೊರಗುಳಿದಿರುವ ಪಾಂಡ್ಯ ಮುಂಬರುವ ಶ್ರೀಲಂಕಾ ಪ್ರವಾಸದಲ್ಲಿ ಎರಡನೇ ಸ್ಥರದ ಭಾರತ ತಂಡದ ನಾಯಕ ಸ್ಥಾನಕ್ಕೆ ಪ್ರಬಲ ಆಕಾಂಯಾಗಿದ್ದಾರೆ. ಜುಲೈನಲ್ಲಿ ಭಾರತ ಎರಡನೇ ಸ್ಥರದ ತಂಡ ಲಂಕಾ ಪ್ರವಾಸ ಕೈಗೊಳ್ಳಲಿದೆ.