

ಢಾಕಾ: ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲೂ ಪ್ರಭುತ್ವ ಸಾಧಿಸಿದ ಆತಿಥೇಯ ಬಾಂಗ್ಲಾದೇಶ ತಂಡಕ್ಕೆ ಎರಡನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ಡಕ್‌ವರ್ತ್ ಲೂಯಿಸ್ ನಿಮಯದಡಿ 103 ರನ್‌ಗಳಿಂದ ಜಯ ದಾಖಲಿಸಿತು. ಇದರೊಂದಿಗೆ ಬಾಂಗ್ಲಾದೇಶ ತಂಡ 3 ಪಂದ್ಯಗಳ ಸರಣಿಯಲ್ಲಿ 2-0ಯಿಂದ ಮುನ್ನಡೆ ಸಾಧಿಸಿ, ಸರಣಿ ವಶಪಡಿಸಿಕೊಂಡಿತು.
ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡ, ಮುಶ್ಫಿಕರ್ ರಹೀಂ (125 ರನ್, 127 ಎಸೆತ, 10 ಬೌಂಡರಿ) ಶತಕದಾಟದ ನೆರವಿನಿಂದ 48.1 ಓವರ್‌ಗಳಲ್ಲಿ 246 ರನ್ ಪೇರಿಸಿತು. ಪ್ರತಿಯಾಗಿ ಈ ಸಾಧಾರಣ ಮೊತ್ತ ಬೆನ್ನಟ್ಟಿದ ಶ್ರೀಲಂಕಾ ತಂಡಕ್ಕೆ ಮೆಹಿದಿ ಹಸನ್ ಮಿರಾಜ್ (28ಕ್ಕೆ 3) ಮುಸ್ತಾಫಿಝರ್ ರೆಹಮಾನ್ (16ಕ್ಕೆ 3) ಜೋಡಿ ಆಘಾತ ನೀಡಿತು. ಶ್ರೀಲಂಕಾ ತಂಡ 38 ಓವರ್‌ಗಳಲ್ಲಿ 9 ವಿಕೆಟ್‌ಗೆ 126 ರನ್ ಪೇರಿಸಿದ್ದ ವೇಳೆ ಪಂದ್ಯಕ್ಕೆ ಮಳೆ ಅಡ್ಡಿಯುಂಟು ಮಾಡಿತು. ಬಳಿಕ ಶ್ರೀಲಂಕಾ ತಂಡಕ್ಕೆ 40 ಓವರ್‌ಗಳಲ್ಲಿ 245 ರನ್ ಪರಿಷ್ಕೃತ ಗೆಲುವಿನ ಗುರಿ ನೀಡಲಾಯಿತು. ಬ್ಯಾಟಿಂಗ್ ಮುಂದುವರಿಸಿದ ಶ್ರೀಲಂಕಾ 9 ವಿಕೆಟ್‌ಗೆ 141 ರನ್ ಜಯ ದಾಖಲಿಸಲಷ್ಟೇ ಶಕ್ತವಾಯಿತು. 3ನೇ ಹಾಗೂ ಅಂತಿಮ ಏಕದಿನ ಪಂದ್ಯ ಶುಕ್ರವಾರ ನಡೆಯಲಿದೆ.
ಬಾಂಗ್ಲಾದೇಶ: 48. 1 ಓವರ್‌ಗಳಲ್ಲಿ 246 (ಮುಶ್ಫಿಕರ್ ರಹೀಂ 125, ಮಹಮದುಲ್ಲಾ 41, ಲಕ್ಷ್ಮಣ್ ಸಂದ್ಕನ್ 54ಕ್ಕೆ 3, ದುಶಾಮಾಂತ ಚಮೀರಾ 44ಕ್ಕೆ 3), ಶ್ರೀಲಂಕಾ: 40 ಓವರ್‌ಗಳಲ್ಲಿ 9 ವಿಕೆಟ್‌ಗೆ 141 (ಧನುಷ್ಕಾ ಗುಣತಿಕಲ 24, ಪಾಥುಮ್ ನಿಸ್ಸಾಂಕ 20, ಮೆಹಿದಿ ಹಸನ್ ಮಿರಾಜ್ 28ಕ್ಕೆ 3, ಮುಸ್ತಾಫಿಝರ್ ರೆಹಮಾನ್ 16ಕ್ಕೆ 3, ಶಕೀಬ್ ಅಲ್ ಹಸನ್ 38ಕ್ಕೆ 2).