ಇಬ್ಬರ ಜೀವನದಲ್ಲಿ ಮಧ್ಯಪ್ರವೇಶಿಸುವ ಹಕ್ಕು ಯಾವನಿಗೂ ಇಲ್ಲ: ಸಿಡಿದೆದ್ದ ಗೌತಮ್​ ಗಂಭೀರ್

WhatsApp Image 2024-04-29 at 7.17.41 AM
Published on

ನವದೆಹಲಿ: ಐಪಿಎಲ್​ ಇತಿಹಾಸದಲ್ಲೇ ಅತೀ ಹೆಚ್ಚಿನ ಅಭಿಮಾನಿ ಬಳಗ ಹೊಂದಿರುವ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಸದ್ಯ ಈ ಬಾರಿಯ ಲೀಗ್​ನಲ್ಲಿ ಯಶಸ್ವಿ ಪ್ರದರ್ಶನ ಕೊಡುವಲ್ಲಿ ವಿಫಲವಾಗಿದ್ದೇ ಆದರೂ, ಕಳೆದ ಎರಡು ಪಂದ್ಯಗಳಲ್ಲಿ ಭರ್ಜರಿ ಗೆಲುವು ದಾಖಲಿಸುವ ಮೂಲಕ ಪ್ಲೇ-ಆಫ್​ ಕನಸನ್ನು ದಿನದಿಂದ ದಿನಕ್ಕೆ ಉಳಿಸಿಕೊಳ್ಳುತ್ತಿದೆ.

ಕಳೆದ ವರ್ಷ ಐಪಿಎಲ್​ 16ನೇ ಆವೃತ್ತಿಯಲ್ಲಿ ಟೀಂ ಇಂಡಿಯಾದ ಮಾಜಿ ಆಟಗಾರ, ಪ್ರಸ್ತುತ ಕೆಕೆಆರ್​ ಮೆಂಟರ್​ ಆಗಿರುವ ಗೌತಮ್ ಗಂಭೀರ್​, ವಿರಾಟ್​ ಕೊಹ್ಲಿ ಜತೆ ಮೈದಾನದಲ್ಲೇ ತೀವ್ರ ವಾಗ್ವಾದಕ್ಕಿಳಿದಿದ್ದರು. ಈ ಘಟನೆ ನಡೆದ ಬಳಿಕ ಇಬ್ಬರ ನಡುವೆ ಭಾರೀ ಮನಸ್ತಾಪವಿದೆ, ಜಟಾಪಟಿ ಇದೆ, ಒಬ್ಬರನೊಬ್ಬರು ನೋಡಲು ಇಷ್ಟಪಡುವುದಿಲ್ಲ ಎಂದೆಲ್ಲಾ ಸಾಮಾಜಿಕ ಜಾಲತಾಣದಲ್ಲಿ ಮಾಧ್ಯಮಗಳು ಸುದ್ದಿ ಮಾಡಿತ್ತು. ಸದ್ಯ ಇದನ್ನು ತೀವ್ರವಾಗಿ ಖಂಡಿಸಿರುವ ಗಂಭೀರ್​, ತನ್ನ ಹಾಗೂ ವಿರಾಟ್ ನಡುವಿನ​ ಸಂಬಂಧದ ಬಗ್ಗೆ ಕೆಲವು ಮೀಡಿಯಾ ತೋರಿಸಿದ ನೆಗೆಟಿವ್​ ವಿರುದ್ಧ ಭಾರೀ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

"ನಾನು ವಿರಾಟ್​ನಿಂದ ಕೆಲವು ಡ್ಯಾನ್ಸ್​ ಸ್ಟೆಪ್ಸ್​ ಕಲಿಯಲು ಇಷ್ಟಪಡ್ತೀನಿ. ನಮ್ಮಿಬ್ಬರ ಮಧ್ಯೆ ಒಳ್ಳೆಯ ಸಂಬಂಧವಿದೆ. ಅದನ್ನು ಬಿಟ್ಟು ಕೇವಲ ನೆಗೆಟಿವ್ ತೋರಿಸಿ, ಪ್ರಚೋದಿಸಿದ ಕೆಲವು ಮೀಡಿಯಾಗಳ ನಡೆಯನ್ನು ಈಗಲೂ ಸಹ ನಾನು ಧಿಕ್ಕರಿಸುತ್ತೇನೆ. ಅದನ್ನು ನಾನು ಒಪ್ಪುವುದಿಲ್ಲ. ನನ್ನ ಹಾಗೂ ವಿರಾಟ್​ ನಡುವೆ ಉತ್ತಮ ಬಾಂಧವ್ಯವಿದೆ. ಅದು ಈ ಮೀಡಿಯಾಗಳಿಗೆ ಗೊತ್ತಿಲ್ಲ. ಸುಖಾಸುಮ್ಮನೆ ಇಬ್ಬರ ಜೀವನದ ಮಧ್ಯೆ ಪ್ರವೇಶಿಸುತ್ತಾರೆ" ಎಂದು ಕಿಡಿಕಾರಿದ್ದಾರೆ.

"ನಾವು ಪ್ರಬುದ್ಧ ಜನರು, ಇಬ್ಬರ ಜೀವನದಲ್ಲಿ ಮಧ್ಯೆ ಪ್ರವೇಶಿಸುವ ಅಧಿಕಾರ ಯಾವನಿಗೂ ಇಲ್ಲ" ಎಂದು ಹೇಳುವ ಮೂಲಕ ತಮ್ಮ ಹಾಗೂ ವಿರಾಟ್ ಕೊಹ್ಲಿ ನಡುವೆ ಯಾವುದೇ ಮನಸ್ತಾಪವಿಲ್ಲ. ನಮ್ಮಿಬ್ಬರ ಮಧ್ಯೆ ಉತ್ತಮ ಬಾಂಧವ್ಯವಿದೆ, ಅದನ್ನು ತೋರಿಸಿ, ಪಾಸಿಟಿವ್ ಪಸರಿಸಿ" ಎಂದು ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net