

ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗದಲ್ಲಿ ಸೋಮವಾರ ನೆದರ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು ಸರ್ವಾಂಗೀಣ ಪ್ರದರ್ಶನದಿಂದ 99 ರನ್ಗಳ ಭರ್ಜರಿ ಗೆಲುವು ಸಾಧಿಸಿದೆ.
ನ್ಯೂಜಿಲೆಂಡ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಆಲ್ರೌಂಡರ್ ಮಿಚೆಲ್ ಸ್ಯಾಂಟ್ನರ್ ಬ್ಯಾಟಿಂಗ್ ವೇಳೆ ಅಸಾಧ್ಯ ಸಾಧನೆ ಒಂದನ್ನು ಮಾಡಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇನ್ನಿಂಗ್ಸ್ನ ಕೊನೆಯ ಓವರ್ನಲ್ಲಿ ಬ್ಯಾಟಿಂಗ್ ಮಾಡುವ ಕ್ರೀಸ್ನಲ್ಲಿದ್ದ ಮಿಚೆಲ್ ಸ್ಯಾಂಟ್ನರ್ 1 ಎಸೆತದಲ್ಲಿ 13ರನ್ ಗಳಿಸುವ ಮೂಲಕ ವಿಶ್ವಕಪ್ ಕ್ರಿಕೆಟ್ನಲ್ಲಿ ಅಸಾಧ್ಯ ಸಾಧನೆ ಒಂದನ್ನು ಮಾಡಿದ್ದಾರೆ. ನೆದರ್ಲೆಂಡ್ಸ್ ಪರ ಇನ್ನಿಂಗ್ಸ್ನ ಕೊನೆಯ ಓವರ್ ಎಸೆದ ಬಾಸ್ ದಿ ಲೀಡೆ ಮೊದಲ ಬಾಲ್ಅನ್ನು ಫುಲ್ಟಾಸ್ ಎಸೆಯುತ್ತಾರೆ. ಫುಲ್ಟಾಸ್ ಎಸೆತವನ್ನು ಸ್ಯಾಂಟ್ನರ್ ಸಿಕ್ಸರ್ಗೆ ಅಟ್ಟುತ್ತಾರೆ. ಆದರೆ, ಇದಕ್ಕೆ ತ್ವರಿತವಾಗಿ ಪ್ರತಿಕ್ರಿಯಿಸಿದ ಅಂಪೈರ್ ಫುಲ್ಟಾಸ್ ಎಸೆತವನ್ನು ನೋಬಾಲ್ ಎಂದು ಘೋಷಿಸುತ್ತಾರೆ.
ಫ್ರೀಹಿಟ್ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಸ್ಯಾಂಟ್ನರ್ ಮರುಎಸೆತವನ್ನು ಬ್ಯಾಕ್ವರ್ಡ್ ಪಾಯಿಂಟ್ನತ್ತ ಸಿಕ್ಸರ್ಗೆ ಅಟ್ಟಿದ್ದರು. ಈ ಮೂಲಕ ಮಿಚೆಲ್ ಸ್ಯಾಂಟ್ನರ್ 1 ಎಸೆತದಲ್ಲೇ 13 ರನ್ಗಳಿಸುವ ಮೂಲಕ ವಿಶ್ವಕಪ್ ಕ್ರಿಕೆಟ್ನಲ್ಲಿ ವಿಶಿಷ್ಟ ಸಾಧನೆಯನ್ನು ಮಾಡಿದ್ದಾರೆ. ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಆಲ್ರೌಂಡ್ ಪ್ರದರ್ಶನ ನೀಡಿದ ಸ್ಯಾಂಟ್ನರ್ ನ್ಯೂಜಿಲೆಂಡ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.