More

    ಏಕದಿನ ವಿಶ್ವಕಪ್ 2023| ಆಸ್ಪತ್ರೆಗೆ ದಾಖಲಾದ ಶುಭಮನ್ ಗಿಲ್; ಪಾಕ್​ ವಿರುದ್ಧದ ಪಂದ್ಯಕ್ಕೆ ಡೌಟ್?

    ಡೆಂಗೆ ಜ್ವರಕ್ಕೆ ತುತ್ತಾಗಿರುವ ಭಾರತ ತಂಡದ ಆರಂಭಿಕ ಬ್ಯಾಟ್ಸ್​ಮನ್ ಶುಭಮನ್ ಗಿಲ್​ ಅವರ ದೇಹದಲ್ಲಿ ಪ್ಲೇಟ್​ಲೇಲೆಟ್​ 1,00,000 ಕಡಿಮೆಯಾದ ಕಾರಣ ಅವರನ್ನು ಚೆನ್ನೈನ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಅವರನ್ನು ಡಿಸ್ಚಾರ್ಜ್​ ಮಾಡಲಾಗಿದೆ.

    ಡೆಂಗೆ ಜ್ವರದಿಂದ ಬಳಲುತ್ತಿರುವ ಅವರು ಇನ್ನೂ ಚೇತರಿಸಿಕೊಳ್ಳದ ಕಾರಣ ಪಾಕಿಸ್ತಾನ ವಿರುದ್ಧದ ಹೈವೋಲ್ಟೇಜ್​ ಪಂದ್ಯದಲ್ಲೂ ಕಣಕ್ಕಿಳಿಯುವುದು ಅನುಮಾನ ಎಂದು ಹೇಳಲಾಗಿದೆ. ಕಳೆದ ವಾರ ಚೆನ್ನೈಗೆ ಆಗಮಿಸಿದ ವೇಳೆ ಗಿಲ್​ ಅವರಿಗೆ ಡೆಂಗೆ ಜ್ವರ ದೃಢವಾಗಿತ್ತು.

    ಇದನ್ನೂ ಓದಿ: ಹಮಾಸ್ ಉಗ್ರರ ದಾಳಿ; ಇದೊಂದು ಘೋರ ಕೃತ್ಯ ಎಂದು ಖಂಡಿಸಿದ ಯುಎನ್​

    ಈ ಕುರಿತು ಪ್ರತಿಕ್ರಿಯಿಸಿರುವ ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು, ಕಳೆದ ಎರಡು ದಿನಗಳಿಂದ ಚೆನ್ನೈನ ಹೋಟೆಲ್​ ಕೊಠಡಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶುಭಮನ್​ ಗಿಲ್​ ಅವರ ಪ್ಲೇಟ್​ಲೆಟ್​ 70,000 ಇಳಿದಿದೆ. ಡೆಂಗೆ ಜ್ವರದಿಂದ ಬಳಲುತ್ತಿರುವವರ ಪ್ಲೇಟ್​ಲೆಟ್​ 1,00,000ಕ್ಕಿಂತ ಕಡಿಮೆ ಇದ್ದರೆ ಮುಂಜಾಗ್ರತಾ ಕ್ರಮವಾಗಿ ಅವರನ್ನು ಆಸ್ಪತ್ರೆದೆ ದಾಖಲಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಶುಭಮನ್​ ಗಿಲ್​ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ಲೇಟ್​ಲೆಟ್​ ಸಂಖ್ಯೆ 1,00,000 ದಾಟಿದರೆ ಅವರನ್ನು ಡಿಸ್ಚಾರ್ಜ್​ ಮಾಡಲಾಗುವುದು. ಚೆನ್ನೈನ ಕಾವೇರಿ ಆಸ್ಪತ್ರೆಗೆ ಗಿಲ್​ ಅವರನ್ನು ದಾಖಲಿಸಲಾಗಿದ್ದು, ಭಾರತ ಕ್ರಿಕೆಟ್​ ತಂಡದ ವೈದ್ಯ ರಿಜ್ವಾನ್​ ಅವರ ಆರೋಗ್ಯದ ಮೇಲ್ವಿಚಾರಣೆ ನಡೆಸುತ್ತಿದ್ದಾರೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ಧಾರೆ.

    ಪಾಕಿಸ್ತಾನ ವಿರುದ್ಧದ ಹೈವೋಲ್ಟೇಜ್​ ಪಂದ್ಯಕ್ಕೆ ಇನ್ನೂ 96 ಘಂಟೆಗಳು ಬಾಕಿ ಇದ್ದು, ಒಂದು ವೇಳೆ ಶುಭಮನ್​ ಗಿಲ್​ ಫಿಟ್​ ಆಗಿದ್ದರೆ, ಕಣಕ್ಕಿಳಿಯಲಿದ್ದಾರೆ. ಒಂದು ವೇಳೆ ಅವರು ಸಂಪೂರ್ಣ ಫಿಟ್​ ಆಗದಿದ್ದಲ್ಲಿ ಪಾಕಿಸ್ತಾನದ ವಿರುದ್ಧ ಕಣಕ್ಕಿಳಿಯುವುದು ಡೌಟ್​ ಎಂದು ಹೇಳಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts