

ನವದೆಹಲಿ: ಇಸ್ರೇಲ್ ಮೇಲೆ ಹಮಾಸ್ ಉಗ್ರರು ನಡೆಸಿರುವ ಮಾರಣಾಂತಿಕ ರಾಕೆಟ್ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 900ಕ್ಕೆ ಏರಿಕೆಯಾಗಿದ್ದು, 38 ಸೈನಿಕರು ಸೇರಿದಂತೆ 2,400ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಜಾ ಆರೋಗ್ಯ ಸಚಿವಾಲಯದ ಪ್ರಕಾರ, 143 ಮಕ್ಕಳು ಮತ್ತು 105 ಮಹಿಳೆಯರು ಸೇರಿದಂತೆ 704 ಜನರು ಸಾವನ್ನಪ್ಪಿದ್ದಾರೆ ಮತ್ತು ನಾಲ್ಕು ದಿನಗಳ ಅವಧಿಯಲ್ಲಿ ದಾಳಿಯಲ್ಲಿ 4,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ನಾವು ಯುದ್ಧವನ್ನು ಪ್ರಾರಂಭಿಸಿಲ್ಲ ಆದರೆ ಅದನ್ನು ನಾವೇ ಕೊನೆಗೊಳಿಸುತ್ತೇವೆ. ಹಮಾಸ್ ಅನ್ನು ಐಸಿಸ್ ಉಗ್ರರಿಗೆ ಹೋಲಿಸಿರುವ ನೇತನ್ಯಾಹು, ಅವರ ವಿರುದ್ಧ ಜನರು ಒಗ್ಗೂಡಿ ಸೋಲಿಸಬೇಕೆಂದು ಕರೆ ನೀಡಿದ್ದಾರೆ. ನಮ್ಮ ಮೇಲೆ ದಾಳಿ ಮಾಡುವ ಮೂಲಕ ಹಮಾಸ್ ಉಗ್ರರು ದೊಡ್ಡ ತಪ್ಪು ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಇದಕ್ಕೆ ತಕ್ಕ ಬೆಲೆ ತೆರಲಿದ್ದಾರೆ. ನಾವು ಅವರಿಗೆ ಸರಿಯಾಗಿ ಬುದ್ದಿ ಕಲಿಸುತ್ತೇವೆ ಎಂದು ಇಸ್ರೇಲ್ ಪ್ರಧಾನಿ ನೇತನ್ಯಾಹು ಎಚ್ಚರಿಸಿದ್ದಾರೆ.
ಇಸ್ರೇಲ್ನ ನಿರಂತರ ದಾಳಿಗಳು ಮುಂದುವರೆದಿದೆ, ಗಾಜಾದ 187,500 ಜನರು ಸ್ಥಳಾಂತರಗೊಂಡಿದ್ದಾರೆ ಮತ್ತು 687 ಜನರು ಸಾವನ್ನಪ್ಪಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ, ಯುಎಸ್ ಅಧ್ಯಕ್ಷ ಜೋ ಬೈಡನ್, ಫ್ರಾನ್ಸ್, ಜರ್ಮನಿ, ಇಟಲಿ ಮತ್ತು ಬ್ರಿಟನ್ ನಾಯಕರು ಇಸ್ರೇಲ್ಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.