VIDEO: ನೆಚ್ಚಿನ ಶ್ವಾನಗಳೊಂದಿಗೆ ವಿಶಿಷ್ಟವಾಗಿ 42ನೇ ಬರ್ತ್​​ಡೇ ಆಚರಿಸಿಕೊಂಡ ಧೋನಿ!

dhoni web
Published on

ನವದೆಹಲಿ: ಟೀಮ್​ ಇಂಡಿಯಾ ಮಾಜಿ ನಾಯಕ ಹಾಗೂ ಐಪಿಎಲ್​ ಚಾಂಪಿಯನ್​ ಚೆನ್ನೈ ಸೂಪರ್​ಕಿಂಗ್ಸ್​ ತಂಡದ ನಾಯಕ ಎಂಎಸ್​ ಧೋನಿ ಶುಕ್ರವಾರ ತಮ್ಮ 42ನೇ ಜನ್ಮದಿನವನ್ನು ವಿಶಿಷ್ಟವಾಗಿ ಆಚರಿಸಿಕೊಂಡರು. ರಾಂಚಿಯ ಮನೆಯ ಅಂಗಳದಲ್ಲಿ ನೆಚ್ಚಿನ ನಾಯಿಗಳ ಎದುರು ಕೇಕ್​ ಕತ್ತರಿಸಿದ ಧೋನಿ, ಬಳಿಕ ಅದರ ಪೀಸ್​ಗಳನ್ನು ನಾಯಿಗಳಿಗೆ ತಿನ್ನಿಸಿದರು. ಇದರ ವಿಡಿಯೋವನ್ನು ಧೋನಿ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಸಾಮಾನ್ಯವಾಗಿ ಸಾಮಾಜಿಕ ಜಾಲತಾಣಗಳಿಂದ ದೂರ ಉಳಿಯುವ ಧೋನಿ, ಶನಿವಾರ ಮೂಲಕ ಅಪರೂಪಕ್ಕೆಂಬಂತೆ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಹಾಕಿದರು. ವಿಶಿಷ್ಟವಾಗಿ ಬರ್ತ್​ಡೇ ಆಚರಿಸಿರುವ ವಿಡಿಯೋವನ್ನು ಹಂಚಿಕೊಂಡಿರುವ ಧೋನಿ, ಜನ್ಮದಿನದಂದು ಶುಭಾಶಯ ತಿಳಿಸಿದ ಅಭಿಮಾನಿಗಳು ಮತ್ತು ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ಧೋನಿ ಪೋಸ್ಟ್​ ಮಾಡಿದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಭಾರತಕ್ಕೆ 2007ರಲ್ಲಿ ಟಿ20 ಮತ್ತು 2011ರಲ್ಲಿ ಏಕದಿನ ವಿಶ್ವಕಪ್​ ಗೆದ್ದುಕೊಟ್ಟಿರುವ ನಾಯಕರಾಗಿರುವ ಧೋನಿ, 2020ರಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದು, ಸದ್ಯ ಐಪಿಎಲ್​ನಲ್ಲಿ ಮಾತ್ರ ಆಡುತ್ತಿದ್ದಾರೆ. ಈ ವರ್ಷವೇ ಅವರು ಐಪಿಎಲ್​ನಿಂದ ನಿವೃತ್ತಿ ಹೊಂದಲಿದ್ದಾರೆ ಎಂದು ಭಾವಿಸಲಾಗಿತ್ತು. ಆದರೆ ಇನ್ನೊಂದು ವರ್ಷ ಐಪಿಎಲ್​ ಆಡುವ ಮೂಲಕ ಅಭಿಮಾನಿಗಳಿಗೆ ವಿಶೇಷ ಉಡುಗೊರೆ ನೀಡಲು ಬಯಸಿರುವುದಾಗಿ ಧೋನಿ, ಕಳೆದ ಆವೃತ್ತಿಯ ಪ್ರಶಸ್ತಿ ಗೆಲುವಿನ ಬಳಿಕ ಹೇಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net