More

    ವಿಂಬಲ್ಡನ್​ನಲ್ಲಿ ಒಳಉಡುಪಿನ ನಿಯಮ ಸಡಿಲ; ಟೆನಿಸ್ ಆಟಗಾರ್ತಿಯರು ಈಗ ನಿರಾಳ!

    ಲಂಡನ್​: ವಿಂಬಲ್ಡನ್​ ಉಳಿದೆಲ್ಲ ಟೆನಿಸ್​ ಗ್ರಾಂಡ್​ ಸ್ಲಾಂಗಳಿಗಿಂತ ಭಿನ್ನವಾದ ನಿಯಮಾವಳಿಗಳನ್ನು ಹೊಂದಿದೆ. ಟೂರ್ನಿಯಲ್ಲಿ ಆಡುವ ಎಲ್ಲರೂ ಬಿಳಿ ಸಮವಸ್ತ್ರ ಧರಿಸಬೇಕೆಂಬುದು ಅದರಲ್ಲಿ ಪ್ರಮುಖವಾದ ಕಟ್ಟುಪಾಡು ಆಗಿತ್ತು. ಆದರೆ, ಈ ಬಾರಿ ಸಂಪೂರ್ಣ ಬಿಳಿ ಸಮವಸ್ತ್ರದ ಕಟ್ಟುನಿಟ್ಟಿನ ನಿಯಮವನ್ನು ವಿಂಬಲ್ಡನ್​ನಲ್ಲಿ ಸಡಿಲಗೊಳಿಸಲಾಗಿದೆ. ಒಳಉಡುಪುಗಳೂ ಬಿಳಿ ಬಣ್ಣದ್ದಾಗಿರಬೇಕೆಂಬ ನಿಯಮವನ್ನು ಕೈಬಿಡಲಾಗಿದೆ. ಆಟಗಾರ್ತಿಯರ ಋತುಸ್ರಾವದ ದಿನಗಳ ಆತಂಕವನ್ನು ತಪ್ಪಿಸಲು ಈ ಬದಲಾವಣೆ ಮಾಡಲಾಗಿದೆ. ಇದಕ್ಕೆ ವಿಕ್ಟೋರಿಯಾ ಅಜರೆಂಕಾ, ಹೀದರ್​ ವ್ಯಾಟ್ಸನ್​ ಮತ್ತಿತರ ಆಟಗಾರ್ತಿಯರು ಸಂತಸ ವ್ಯಕ್ತಪಡಿಸಿದ್ದಾರೆ.

    ಆಟಗಾರ್ತಿಯರು ಋತುಚಕ್ರದ ದಿನಗಳಲ್ಲಿ ಬಿಳಿ ಒಳಉಡುಪಿನಿಂದಾಗಿ ಸೋರಿಕೆಯಿಂದ ಕಲೆಗಳು ಕಾಣಿಸುವ ಭಯದಿಂದ ಆಡುವಾಗ ಮಾನಸಿಕವಾಗಿ ಕುಗ್ಗುತ್ತಾರೆ ಎಂಬ ಬಗ್ಗೆ ತಜ್ಞರು ವಾದಿಸಿದ್ದರು. ಅಲ್ಲದೆ, ಕೆಲ ಆಟಗಾರ್ತಿಯರು, ಸೂಕ್ತ ತಿಳಿಬಣ್ಣದ ಬ್ರಾ ಸಿಗದೆ, ಬ್ರಾರಹಿತವಾಗಿಯೂ ಆಡಿ ಮುಜುಗರಕ್ಕೀಡಾಗಿದ್ದರು. ಈ ಸಂಬಂಧ ಕಳೆದ ವರ್ಷ ನಡೆದ ಪ್ರತಿಭಟನೆ ನಡೆದಿತ್ತು.

    145 ವರ್ಷಗಳ ಇತಿಹಾಸ ಹೊಂದಿರುವ ವಿಂಬಲ್ಡನ್​ನಲ್ಲಿ ಕಡ್ಡಾಯ ಬಿಳಿ ಸಮವಸ್ತ್ರದ ನಿಯಮವನ್ನು ಇದುವರೆಗೆ ಕಟ್ಟುನಿಟ್ಟಾಗಿ ಅಳವಡಿಸಿಕೊಂಡು ಬರಲಾಗಿತ್ತು. ಕೆಲ ಆಟಗಾರ್ತಿಯರು ಕೆಂಪು ಬಣ್ಣದ ಶಾರ್ಟ್ಸ್​ ಅಥವಾ ಕಪ್ಪು ಬ್ರಾ ಧರಿಸಿ ಕೋರ್ಟ್​ಗೆ ಬಂದಾಗ ಅವರನ್ನು ಬಿಳಿ ಬಣ್ಣದ ಒಳಉಡುಪು ಧರಿಸುವಂತೆ ಸೂಚಿಸಿ ಲಾಕರ್​ ರೂಮ್​ಗೆ ವಾಪಸ್​ ಕಳುಹಿಸಿದ ಅಥವಾ ದಂಡ ಶಿಕ್ಷೆ ವಿಧಿಸಿದ ದೃಷ್ಟಾಂತಗಳೂ ಇದ್ದವು. ಆದರೆ ಈ ನಿಯಮವನ್ನು ಬದಲಾಯಿಸಬೇಕೆಂದು ಇತ್ತೀಚಿನ ವರ್ಷಗಳಲ್ಲಿ ಒತ್ತಾಯಗಳು ಕೇಳಿಬಂದಿದ್ದವು. ಕಳೆದ ಆವೃತ್ತಿಯ ವೇಳೆ ಆಲ್​ ಇಂಗ್ಲೆಂಡ್​ ಕ್ಲಬ್​ ಹೊರಗೆ ಪ್ರತಿಭಟನೆಗಳೂ ನಡೆದಿದ್ದವು. ಹೀಗಾಗಿ 2023ರಿಂದ ಆಟಗಾರ್ತಿಯರಿಗೆ ಯಾವುದೇ ಬಣ್ಣದ ಒಳಉಡುಪು ಧರಿಸಿ ಆಡಲು ಅವಕಾಶ ನೀಡಲಾಗಿದೆ. ಇದರಿಂದಾಗಿ ಈ ಬಾರಿ ಆಲ್​ ಇಂಗ್ಲೆಂಡ್​ ಕ್ಲಬ್​ನಲ್ಲಿ ಕಪ್ಪು ಮತ್ತಿತರ ಕಡುಬಣ್ಣದ ಶಾರ್ಟ್ಸ್​ ಧರಿಸಿ ಆಡುತ್ತಿರುವುದು ಈಗಾಗಲೆ ಕಾಣಿಸಿದೆ.

    ಕ್ರಿಕೆಟ್‌ನಿಂದ ದೂರವುಳಿದರು ಟೆಸ್ಟ್ ರ‍್ಯಾಂಕಿಂಗ್ ನಂ.1 ಸ್ಥಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts