More

    ಭಾರತ-ವೆಸ್ಟ್​ ಇಂಡೀಸ್​ ಕ್ರಿಕೆಟ್​ ಸರಣಿಗೆ ಕರ್ನಾಟಕದ ಅಗರಬತ್ತಿ ಕಂಪನಿ ಪ್ರಾಯೋಜಕತ್ವ

    ಬೆಂಗಳೂರು: ಕೆರಿಬಿಯನ್​ ನಾಡಿನಲ್ಲಿ ನಡೆಯಲಿರುವ ಭಾರತ&ವೆಸ್ಟ್​ ಇಂಡೀಸ್​ ನಡುವಿನ ಎರಡು ಪಂದ್ಯಗಳ ಟೆಸ್ಟ್​ ಸರಣಿಗೆ ರಾಜ್ಯದ ಸೈಕಲ್​ ಪ್ಯೂರ್​ ಅಗರ್​ಬತ್ತಿ ಸಂಸ್ಥೆ ಶೀರ್ಷಿಕೆ ಪ್ರಾಯೋಜಕತ್ವ ವಹಿಸಿದೆ. ಉಭಯ ದೇಶಗಳು “್ರಾಂಕ್​ ವೂರೆಲ್​ ಟ್ರೋಫಿ’ಗಾಗಿ ಸಾಂಪ್ರದಾಯಿಕವಾಗಿ ಸೆಣಸುತ್ತಿದ್ದು, 2023ರ ಸರಣಿಯನ್ನು “ಸೈಕಲ್​ ಪ್ಯೂರ್​ ಅಗರಬತ್ತಿ ಸರಣಿ’ ಎಂದು ಕರೆಯಲಾಗುತ್ತದೆ.

    ಟ್ರ್ರಿನಿಡಾಡ್​ನ ಹೆಸರಾಂತ ಕ್ವೀನ್ಸ್​ ಪಾರ್ಕ್​ನ ಓವಲ್​ನಲ್ಲಿ ಜು.20ರಿಂದ 24ರವರೆಗೆ ನಡೆಯಲಿರುವ 2ನೇ ಪಂದ್ಯ ಉಭಯ ರಾಷ್ಟ್ರಗಳ ನಡುವಿನ 100ನೇ ಟೆಸ್ಟ್​ ಪಂದ್ಯವಾಗಿರುವುದರಿಂದ ಈ ಸರಣಿ ಐತಿಹಾಸಿಕ ಪ್ರಾಮುಖ್ಯತೆ ಪಡೆದುಕೊಂಡಿದೆ. 1948ರಲ್ಲಿ ದೆಹಲಿಯಲ್ಲಿ ಎರಡೂ ದೇಶಗಳ ನಡುವಿನ ಮೊದಲ ಪಂದ್ಯ ನಡೆದಿತ್ತು. ಜು.12ರಂದು ಸರಣಿ ಆರಂಭವಾಗಲಿದ್ದು, ಬಳಿಕ 3 ಏಕದಿನ ಮತ್ತು 5 ಟಿ20 ಪಂದ್ಯಗಳ ಸರಣಿಯೂ ನಡೆಯಲಿದೆ.

    “ಭಾರತದಲ್ಲಿ ಕ್ರಿಕೆಟ್​ ಅನ್ನು ಧರ್ಮವಾಗಿ ಕಾಣುತ್ತಾರೆ. ಪ್ರಾರ್ಥನೆಯ ದ್ಯೋತಕವಾಗಿ ಹೊತ್ತಿಸುವ ಸೈಕಲ್​ ಪ್ಯೂರ್​ ಅಗರಬತ್ತಿಯಂತೆ ಗಡಿ, ಭಾಷೆ, ಸಂಸತಿ ಎಲ್ಲವನ್ನೂ ಮತ್ತು ಎಲ್ಲರನ್ನೂ ಮೀರಿ ಒಟ್ಟಿಗೆ ಸೇರಿಸುವ ಕ್ರೀಡೆಯಾಗಿದೆ. ಈ ಪ್ರಾಯೋಜಕತ್ವದ ಮೂಲಕ ಸೈಕಲ್​ ಬ್ರಾ$್ಯಂಡ್​ ಕೇವಲ ಆಟವನ್ನು ಬೆಂಬಲಿಸುವುದು ಮಾತ್ರವಲ್ಲ, ಭರವಸೆ ಮತ್ತು ಸಕಾರಾತ್ಮಕತೆಯನ್ನು ಹರಡುವ ದೊಡ್ಡ ಉದ್ದೇಶಕ್ಕೆ ಕೊಡುಗೆ ನೀಡುತ್ತದೆ. ಕ್ರಿಕೆಟ್​ನಂಥ ಆಟ ಸವಾಲಿನ ಸಮಯದಲ್ಲಿಯೂ ವ್ಯಕ್ತಿಗಳು, ಸಮುದಾಯ ಮತ್ತು ರಾಷ್ಟ್ರಗಳನ್ನು ಪ್ರೇರೇಪಿಸುವ ಮತ್ತು ಮೇಲೆಕ್ಕೆತ್ತುವ ಸಾಮರ್ಥ್ಯವನ್ನು ಹೊಂದಿದೆ ಎಂದು ಸೈಕಲ್​ ಪ್ಯೂರ್​ ಅಗರಬತ್ತಿ ದೃಢವಾಗಿ ನಂಬುತ್ತದೆ’ ಎಂದು ಕಂಪನಿಯ ಎಂಡಿ ಅರ್ಜುನ್​ ರಂಗ ತಿಳಿಸಿದ್ದಾರೆ.

    “ಸೈಕಲ್​ ಪ್ಯೂರ್​ನಲ್ಲಿ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮತ್ತು ಸಬಲೀಕರಣಗೊಳಿಸುವುದು ನಮ್ಮ ಪ್ರಾಥಮಿಕ ಉದ್ದೇಶಗಳಲ್ಲಿ ಒಂದಾಗಿದೆ. ಈ ಪಾಲುದಾರಿಕೆಯು ಏಕತೆಯ ಮೌಲ್ಯಗಳನ್ನು ಪ್ರಚಾರ ಮಾಡಲು ನಮಗೆ ಒಂದು ಅನನ್ಯ ಅವಕಾಶಗಳನ್ನು ಒದಗಿಸುತ್ತದೆ. 100ನೇ ಪಂದ್ಯವನ್ನು ವೀಸಲು ನನಗೂ ಕೂಡ ಕುತೂಹಲ ಇದೆ’ ಎಂದು ಅರ್ಜುನ್​ ರಂಗ ತಿಳಿಸಿದ್ದಾರೆ.

    ಏಕದಿನ ವಿಶ್ವಕಪ್​: ಬೆಂಗಳೂರಿನಲ್ಲಿ ಟೀಮ್​ ಇಂಡಿಯಾ ವಿರುದ್ಧ ಆಡುವ ಎದುರಾಳಿ ನಿರ್ಧಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts