More

    ಏಕದಿನ ವಿಶ್ವಕಪ್​: ಬೆಂಗಳೂರಿನಲ್ಲಿ ಟೀಮ್​ ಇಂಡಿಯಾ ವಿರುದ್ಧ ಆಡುವ ಎದುರಾಳಿ ನಿರ್ಧಾರ

    ಬುಲವಾಯೊ: ಅಮೋ ಆಲ್ರೌಂಡ್​ ನಿರ್ವಹಣೆ ತೋರಿದ 23 ವರ್ಷದ ಬಾಸ್​ ಡಿಲೀಡೆ (123 ರನ್​, 92 ಎಸೆತ,7 ಬೌಂಡರಿ, 5 ಸಿಕ್ಸರ್​ ಹಾಗೂ 52ಕ್ಕೆ 5 ವಿಕೆಟ್​) ಸಾಹಸದ ನೆರವಿನಿಂದ ನೆದರ್ಲೆಂಡ್​ ತಂಡ ಐಸಿಸಿ ಏಕದಿನ ವಿಶ್ವಕಪ್​ ಅರ್ಹತಾ ಟೂರ್ನಿಯ ಸೂಪರ್​ ಸಿಕ್ಸ್​ ಪಂದ್ಯದಲ್ಲಿ ಸ್ಕಾಟ್ಲೆಂಡ್​ ಎದುರು 4 ವಿಕೆಟ್​ಗಳಿಂದ ಭರ್ಜರಿ ಗೆಲುವು ದಾಖಲಿದೆ. ಈ ಮೂಲಕ ಭಾರತದಲ್ಲಿ ನಡೆಯಲಿರುವ ವಿಶ್ವಕಪ್​ಗೆ ಅರ್ಹತೆ ಪಡೆದಿದೆ. 2011ರ ಬಳಿಕ ಮೊದಲ ಬಾರಿಗೆ ವಿಶ್ವಕಪ್​ಗೆ ಪ್ರವೇಶಿಸಿರುವ ನೆದರ್ಲೆಂಡ್​, ನವೆಂಬರ್​ 11ರಂದು ಬೆಂಗಳೂರಿನಲ್ಲಿ ಭಾರತ ತಂಡವನ್ನು ಎದುರಿಸಲಿದೆ.

    ಎರಡು ತಂಡಗಳು ಗುರುವಾರ ಗೆಲುವಿನ ಒತ್ತಡದಲ್ಲಿ ಕಣಕ್ಕಿಳಿದವು. ಟಾಸ್​ ಸೋತು ಬ್ಯಾಟಿಂಗ್​ ಇಳಿದ ಸ್ಕಾಟ್ಲೆಂಡ್​ ತಂಡ ಬ್ರಾಂಡನ್​ ಮೆಕ್​ಮೂಲನ್​ (106 ) ಶತಕದ ನೆರವಿನಿಂದ 9 ವಿಕೆಟ್​ಗೆ 277 ರನ್​ಗಳ ಸವಾಲಿನ ಮೊತ್ತ ಕಲೆಹಾಕಿತು. ಪ್ರತಿಯಾಗಿ ನೆದರ್ಲೆಂಡ್​ ತಂಡ 42.5 ಓವರ್​ಗಳಲ್ಲಿ 6 ವಿಕೆಟ್​ಗೆ 278 ರನ್​ ಪೇರಿಸಿ ಜಯದ ಸಂಭ್ರಮ ಕಂಡಿತು. ವಿಶ್ವಕಪ್​ಗೆ ಅರ್ಹತೆ ಪಡೆಯಲು ನೆದರ್ಲೆಂಡ್​ 44 ಓವರ್​ನೊಳಗೆ ಚೇಸಿಂಗ್​ ಮಾಡಬೇಕಾಗಿತ್ತು. 40 ಓವರ್​ಗಳಲ್ಲಿ 233 ರನ್​ ಪೇರಿಸಿದ್ದ ನೆದರ್ಲೆಂಡ್​ ನಂತರ 4 ಓವರ್​ಗಳಲ್ಲಿ 45 ರನ್​ ಕಸಿದು ವಿಶ್ವಕಪ್​ ಟಿಕೆಟ್​ ಗಿಟ್ಟಿಸಿಕೊಂಡಿತು. ಇದರಲ್ಲಿ ಡಿ ಲೀಡೆ 9 ಎಸೆತಗಳಲ್ಲೇ 33 ರನ್​ ದೋಚಿದರು.

    ಸ್ಕಾಟ್ಲೆಂಡ್​: 9 ವಿಕೆಟ್​ಗೆ 277 (ಕ್ರಿಸ್ಟೋರ್​ 32, ಮೆಕ್​ಮೂಲನ್​ 106, ಬೆರಿಂಗ್ಟನ್​ 64, ಥಾಮಸ್​ 38, ಗ್ರೀವ್ಸ್​ 18, ಡಿ ಲೀಡೆ 52ಕ್ಕೆ5,ರ್ಯಾನ್​ ಕ್ಲೆನ್​ 52ಕ್ಕೆ2). ನೆದರ್ಲೆಂಡ್​: 42.5 ಓವರ್​ಗಳಲ್ಲಿ 6 ವಿಕೆಟ್​ಗೆ 278 (ವಿಕ್ರಮ್​ಜೀತ್​ 40, ಓ ಡೌಡ್​ 20, ಡಿ ಲೀಡೆ 123, ಎಡ್ವರ್ಡ್ಸ್​ 25, ಜುಲ್ಫಿಕರ್​ 33*, ಲೀಸ್ಕ್​ 42ಕ್ಕೆ2).

    ವಿಶ್ವಕಪ್​ಗೆ ಎಲ್ಲ 10 ತಂಡಗಳು ಅಂತಿಮ
    ನೆದರ್ಲೆಂಡ್​ ತಂಡದ ಅರ್ಹತೆ ಖಚಿತಗೊಳ್ಳುವುದರೊಂದಿಗೆ ಭಾರತದಲ್ಲಿ ಅಕ್ಟೋಬರ್​ 5ರಿಂದ ನಡೆಯಲಿರುವ ಏಕದಿನ ವಿಶ್ವಕಪ್​ನಲ್ಲಿ ಆಡಲಿರುವ ಎಲ್ಲ 10 ತಂಡಗಳು ಅಂತಿಮಗೊಂಡಿವೆ. ಆತಿಥೇಯ ಭಾರತದೊಂದಿಗೆ ಆಸ್ಟ್ರೆಲಿಯಾ, ಹಾಲಿ ಚಾಂಪಿಯನ್​ ಇಂಗ್ಲೆಂಡ್​, ನ್ಯೂಜಿಲೆಂಡ್​, ದಣ ಆಫ್ರಿಕಾ, ಪಾಕಿಸ್ತಾನ, ಬಾಂಗ್ಲಾದೇಶ, ಅ್ಘಾನಿಸ್ತಾನ ತಂಡಗಳು ಈಗಾಗಲೆ ನೇರಪ್ರವೇಶ ಪಡೆದಿದ್ದರೆ, ಅರ್ಹತೆ ಟೂರ್ನಿಯಲ್ಲಿ ಶ್ರೀಲಂಕಾ ಮೊದಲ ತಂಡವಾಗಿ ಪ್ರವೇಶ ಪಡೆದಿತ್ತು.

    ಬೆಂಗಳೂರಿನಲ್ಲಿ ಭಾರತಕ್ಕೆ ನೆದರ್ಲೆಂಡ್​ ಎದುರಾಳಿ
    ನೆದರ್ಲೆಂಡ್​ ತಂಡ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಭಾರತ ತಂಡ ನವೆಂಬರ್​ 11ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಲಿರುವ ತನ್ನ ಕೊನೇ ಪಂದ್ಯದಲ್ಲಿ ಎದುರಾಳಿ ಆಗಿರಲಿದೆ. ಐಸಿಸಿ ಸೂತ್ರದ ಪ್ರಕಾರ, “ಅರ್ಹತಾ ತಂಡ1′ ಈ ಪಂದ್ಯ ಆಡಬೇಕಿತ್ತು. ವೆಸ್ಟ್​ ಇಂಡೀಸ್​ ಈ “ಅರ್ಹತಾ ತಂಡ1′ ಎನಿಸಿದ್ದರೂ, ಅದು ಅರ್ಹತೆ ಗಳಿಸದ ಕಾರಣ ಈಗ ಆ ಸ್ಥಾನ ಡಚ್ಚರಿಗೆ ಒಲಿದಿದೆ. ನೆದರ್ಲೆಂಡ್​ ಉಳಿದಂತೆ ಅ.6ರಂದು ಪಾಕಿಸ್ತಾನ (ಹೈದರಾಬಾದ್​), ಅ. 9ರಂದು ನ್ಯೂಜಿಲೆಂಡ್​ (ಹೈದರಾಬಾದ್​), ಅ. 17ರಂದು ದಕ್ಷಿಣ ಆಫ್ರಿಕಾ (ಧರ್ಮಶಾಲಾ), ಅ. 21ರಂದು ಶ್ರೀಲಂಕಾ (ಲಖನೌ), ಅ. 25ರಂದು ಆಸ್ಟ್ರೆಲಿಯಾ (ನವದೆಹಲಿ), ಅ. 28ರಂದು ಬಾಂಗ್ಲಾದೇಶ (ಕೋಲ್ಕತ), ನ. 3ರಂದು ಅಫ್ಘಾನಿಸ್ತಾನ (ಲಖನೌ), ನ. 8ರಂದು ಇಂಗ್ಲೆಂಡ್​ (ಪುಣೆ) ವಿರುದ್ಧ ಆಡಲಿದೆ.

    ವಿಂಬಲ್ಡನ್​ನಲ್ಲಿ ಒಳಉಡುಪಿನ ನಿಯಮ ಸಡಿಲ; ಟೆನಿಸ್ ಆಟಗಾರ್ತಿಯರು ಈಗ ನಿರಾಳ!

    ಧೋನಿ ಜನ್ಮದಿನಕ್ಕೆ ಸಿದ್ಧವಾಯ್ತು 52 ಅಡಿ ಎತ್ತರದ ಕಟೌಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts