More

    ರೋಹಿತ್​​ ಶರ್ಮರನ್ನು ಟಿ20 ವಿಶ್ವಕಪ್​ ನಾಯಕತ್ವದಿಂದ ಕಿತ್ತೊಗೆಯಿರಿ, ಆತನ ಅಗತ್ಯವಿಲ್ಲ!

    ನವದೆಹಲಿ: ಸದ್ಯ ನಡೆಯುತ್ತಿರುವ ಐಪಿಎಲ್ ಸೀಸನ್ ಕ್ರಿಕೆಟ್ ಪ್ರೇಮಿಗಳಿಗೆ ಭರ್ಜರಿ ಮನರಂಜನೆ ನೀಡುತ್ತಿದೆ. ಈ ಮೆಗಾ ಟೂರ್ನಮೆಂಟ್ ಮುಗಿದ ತಕ್ಷಣ ಮತ್ತೊಂದು ಪಂದ್ಯಾವಳಿ ಪ್ರೇಕ್ಷಕರನ್ನು ರಂಜಿಸಲು ಸಿದ್ಧವಾಗಿದೆ. ಅದೇ ಟಿ20 ವಿಶ್ವಕಪ್ 2024.

    ರೋಹಿತ್​​ ಶರ್ಮರನ್ನು ಟಿ20 ವಿಶ್ವಕಪ್​ ನಾಯಕತ್ವದಿಂದ ಕಿತ್ತೊಗೆಯಿರಿ, ಆತನ ಅಗತ್ಯವಿಲ್ಲ!ಜೂನ್ 1 ರಿಂದ ಅಮೆರಿಕ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ವಿಶ್ವಕಪ್​ ಪ್ರಾರಂಭವಾಗಲಿದೆ. ಟ್ರೋಫಿಯನ್ನು ಗೆಲ್ಲಲು ಎಲ್ಲ ತಂಡಗಳು ಈಗಾಗಲೇ ತಮ್ಮ ತಂತ್ರಗಳನ್ನು ರಚಿಸುತ್ತಿವೆ. ಇದರ ನಡುವೆ ಖ್ಯಾತ ಹಿರಿಯ ಕ್ರಿಕೆಟ್ ವಿಶ್ಲೇಷಕ ಜಾಯ್ ಭಟ್ಟಾಚಾರ್ಯ ಅವರು ಆಘಾತಕಾರಿ ಕಾಮೆಂಟ್ ಅನ್ನು ಮಾಡಿದ್ದಾರೆ. ಟಿ20 ವಿಶ್ವಕಪ್‌ಗೆ ರೋಹಿತ್ ಶರ್ಮ ಅವರ ನಾಯಕತ್ವದ ಅಗತ್ಯವಿಲ್ಲ ಎಂದಿದ್ದಾರೆ.

    ಟಿ20 ವಿಶ್ವಕಪ್ 2024 ಸದ್ಯ ಟೀಮ್ ಇಂಡಿಯಾ ಮುಂದಿರುವ ಗುರಿ. ಈ ಕಿರು ವಿಶ್ವಕಪ್‌ಗೆ ಟೀಮ್​ ಇಂಡಿಯಾ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದೆ. ಈ ಮೆಗಾ ಟೂರ್ನಿಯಲ್ಲಿ ಭಾರತ ತಂಡವನ್ನು ನಾಯಕ ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ. ಈ ವಿಷಯವನ್ನು ಬಿಸಿಸಿಐ ಕೂಡ ಬಹಿರಂಗಪಡಿಸಿದೆ. ಆದರೆ, ಖ್ಯಾತ ಹಿರಿಯ ಕ್ರಿಕೆಟ್ ವಿಶ್ಲೇಷಕ ಜಾಯ್ ಭಟ್ಟಾಚಾರ್ಯ ಆಘಾತಕಾರಿ ಹೇಳಿಕೆ ನೀಡಿದ್ದು, ಟಿ20 ವಿಶ್ವಕಪ್‌ಗೆ ಭಾರತ ತಂಡದ ನಾಯಕರಾಗಿ ರೋಹಿತ್ ಶರ್ಮ ಅಗತ್ಯವಿಲ್ಲ. ರೋಹಿತ್ ಒಬ್ಬ ಅದ್ಭುತ ಕ್ರಿಕೆಟಿಗ. ಆದರೆ ಈಗ ಅವರು ಫಾರ್ಮ್‌ನಲ್ಲಿಲ್ಲ. ಜೈಸ್ವಾಲ್ ಮತ್ತು ವಿರಾಟ್ ಕೊಹ್ಲಿಯಂತಹವರು ರೋಹಿತ್​ಗಿಂತ ಉತ್ತಮವಾಗಿ ಆಡುತ್ತಿದ್ದಾರೆ. ಆದರೆ, ರೋಹಿತ್​ ಶರ್ಮರನ್ನು ನಾಯಕನೆಂದು ಘೋಷಿಸುವ ಮೂಲಕ ತಂಡದಲ್ಲಿ ಈಗಾಗಲೇ ಸ್ಥಾನವನ್ನು ತುಂಬಿದಂತಾಗಿದೆ. ನಾನು ಜಸ್ಪ್ರೀತ್ ಬುಮ್ರಾ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಲು ಇಚ್ಛಿಸುತ್ತೇನೆ ಎಂದು ಹೇಳಿದ್ದಾರೆ.

    ಆದರೆ, ಭಟ್ಟಾಚಾರ್ಯ ಅವರ ಕಾಮೆಂಟ್‌ಗೆ ರೋಹಿತ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಐಪಿಎಲ್ ಸೀಸನ್‌ನಲ್ಲಿ ಹಿಟ್‌ಮ್ಯಾನ್ ಶತಕ ಬಾರಿಸಿದ್ದು ಮರೆತುಹೋಯಿತೇ? ನಾಯಕನಾಗಿ ರೋಹಿತ್ ಅವರ ಅನುಭವವನ್ನು ನೀವು ಮರೆತಿದ್ದೀರಾ? ಹಿಟ್ ಮ್ಯಾನ್ ತನ್ನ ಅಪಾರ ಅನುಭವವನ್ನು ಬಳಸಿಕೊಂಡು ಟೀಮ್ ಇಂಡಿಯಾಕ್ಕೆ ಟಿ20 ವಿಶ್ವಕಪ್ ತಲುಪಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಅಂತಹ ಹಿರಿಯ ವಿಶ್ಲೇಷಕರಾಗಿರುವ ನೀವು ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ಭಟ್ಟಾಚಾರ್ಯ ಮೇಲೆ ಕಿಡಿಕಾರಿದ್ದಾರೆ. (ಏಜೆನ್ಸೀಸ್​)

    ಸಾವಿನ ಹೊಸ್ತಿಲಲ್ಲಿದ್ದ ಪಾಕ್​ ಯುವತಿಯ ಜೀವ ಉಳಿಸಿತು ಭಾರತೀಯನ ಹೃದಯ! ಮಾನವೀಯತೆ ಅಂದ್ರೆ ಇದು ಅಂದ್ರು ನೆಟ್ಟಿಗರು

    ಚಾಹಲ್​​ ಪತ್ನಿ ಧನಶ್ರೀ ಜತೆಗಿರುವ ಯುವಕನ್ಯಾರು? ವೈರಲ್​ ಆಗ್ತಿರುವ ವಿಡಿಯೋ ಹಿಂದಿನ ಅಸಲಿಯತ್ತೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts