ಧೋನಿ ಜನ್ಮದಿನಕ್ಕೆ ಸಿದ್ಧವಾಯ್ತು 52 ಅಡಿ ಎತ್ತರದ ಕಟೌಟ್

1 Min Read
ಧೋನಿ ಜನ್ಮದಿನಕ್ಕೆ ಸಿದ್ಧವಾಯ್ತು 52 ಅಡಿ ಎತ್ತರದ ಕಟೌಟ್

ಬೆಂಗಳೂರು: ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಶುಕ್ರವಾರ (ಜು.7) 42ನೇ ವರ್ಷಕ್ಕೆ ಪದಾರ್ಪಣೆ ಮಾಡಲಿದ್ದು, ತನ್ನ ನೆಚ್ಚಿನ ‘ಕ್ಯಾಪ್ಟನ್ ಕೂಲ್’ ಎಂದೇ ಕರೆಯಲ್ಪಡುವ ಧೋನಿ ಅವರ ಜನ್ಮದಿನಕ್ಕೆ ಅಭಿಮಾನಿಗಳು ಭರ್ಜರಿ ತಯಾರಿ ನಡೆಸಿದ್ದಾರೆ. ಈ ಮೂಲಕ ತನ್ನ ನೆಚ್ಚಿನ ಆಟಗಾರರ ಮೇಲಿನ ಅಭಿಮಾನ ಮೆರೆದಿದ್ದಾರೆ.

ಆಂಧ್ರ ಪ್ರದೇಶ್ ನಂದಿಗಾಮ ಎಂಬಲ್ಲಿ 72 ಅಡಿ ಎತ್ತರದ ಬೃಹತ್ ಕಟೌಟ್ ನಿಲ್ಲಿಸುವ ಮೂಲಕ ಮಹಿ ಮೇಲಿನ ಪ್ರೀತಿ ತೋರಿಸಿದ್ದಾರೆ. ಇದು ಕ್ರಿಕೆಟ್ ಆಟಗಾರರೊಬ್ಬರ ಅತಿ ಎತ್ತರದ ಕಟೌಟ್ ಸಹ ಆಗಿದೆ. ಧೋನಿ ಅವರ ಕಟೌಟ್ ಸಾಮಾಜಿಕ ಜಾಲತಾಣದಲ್ಲಿ ಸದ್ಯ ವೈರಲ್ ಆಗಿದೆ.

ಟೀಮ್ ಇಂಡಿಯಾಗೆ 27 ವರ್ಷಗಳ ಬಳಿಕ ಏಕದಿನ ವಿಶ್ವಕಪ್ ಗೆಲ್ಲಿಸಿಕೊಟ್ಟ ಧೋನಿ, ಮೂಲತ ಜಾರ್ಖಂಡ್‌ನ ರಾಂಚಿಯ ಆಟಗಾರ. ಅಂಗಣದಲ್ಲಿ ಒತ್ತಡ ಸಂದರ್ಭಗಳಲ್ಲಿಯೂ ತಂಡವನ್ನು ಗೆಲುವಿನತ್ತ ಮುನ್ನಡೆಸುವ ಸಾಮರ್ಥ್ಯ ಹೊಂದಿರುವ ಧೋನಿ ವಿಶ್ವದೆಲ್ಲೆಡೆ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಹೈದರಾಬಾದ್‌ನಲ್ಲಿ 52 ಅಡಿ ಎತ್ತರದ ಬೃಹತ್ ಕಟೌಟ್ ನಿಲ್ಲಿಸಲಾಗಿದೆ.

ನನಗೆ ತೋರಿಸಲಾಗುತ್ತಿರುವ ಅಪಾರ ಪ್ರೀತಿಗೆ ಪ್ರತಿಯಾಗಿ ಧನ್ಯವಾದ ಹೇಳುತ್ತ ಹೊರನಡೆಯುವುದು ಸುಲಭ. ಇನ್ನೂ 9 ತಿಂಗಳ ಕಾಲ ಕಠಿಣ ಪರಿಶ್ರಮ ಪಡುವುದು ಮತ್ತು ಇನ್ನೊಂದು ಐಪಿಎಲ್ ಆಡಲು ಪ್ರಯತ್ನಿಸುವುದು ಕಷ್ಟಕರವಾದುದು. ಆದರೂ ನಾನು ಇನ್ನೊಂದು ವರ್ಷ ಐಪಿಎಲ್ ಆಡುವ ಮೂಲಕ ಅಭಿಮಾನಿಗಳಿಗೆ ಉಡುಗೊರೆ ನೀಡಲು ಪ್ರಯತ್ನಿಸಲಿದ್ದೇನೆ’ ಎಂದು ಚೆನ್ನೈ ಸೂಪರ್‌ಕಿಂಗ್ಸ್ ನಾಯಕ ಎಂಎಸ್ ಧೋನಿ, ಐಪಿಎಲ್-16ರ ನಲ್ ಪಂದ್ಯ ಬಳಿಕ 17ನೇ ಆವೃತ್ತಿಯಲ್ಲೂ ಕಣಕ್ಕಿಳಿಯುವ ಭರವಸೆ ನೀಡಿದ್ದಾರೆ.

See also  ಯುವ ಭಾರತದ ಅಬ್ಬರಕ್ಕೆ ಮಣಿದ ದಕ್ಷಿಣ ಆಫ್ರಿಕಾ: ಸೂರ್ಯ ಕುಮಾರ್ ಶತಕದ ಬಲದಿಂದ ಸರಣಿ ಸಮಬಲ

ಮುಂದಿನ ವರ್ಷದ ಐಪಿಎಲ್ ವೇಳೆ 43ನೇ ವಯಸ್ಸಿಗೆ ಹತ್ತಿರವಾಗಲಿದ್ದಾರೆ. ಈ ಬಾರಿ ಮೊಣಕಾಲು ನೋವಿನ ಸಮಸ್ಯೆಯ ನಡುವೆಯೂ ಕಣಕ್ಕಿಳಿದಿದ್ದ ಧೋನಿ ಪಾಲಿಗೆ ಐಪಿಎಲ್-16ನೇ ಆವೃತ್ತಿ ಕೊನೇ ಟೂರ್ನಿಯಾಗಲಿದೆ ಎಂಬ ನಿರೀಕ್ಷೆ ಟೂರ್ನಿ ಇತ್ತು. ಸಿಎಸ್‌ಕೆ ತಂಡ ಎದುರಾಳಿ ನೆಲದಲ್ಲಿ ಆಡಿದಾಗಲೂ, ತವರು ತಂಡಕ್ಕಿಂತ ಹಳದಿ ಜೆರ್ಸಿ ಧರಿಸಿದ ಅಭಿಮಾನಿಗಳೇ ಕ್ರೀಡಾಂಗಣದಲ್ಲಿ ಹೆಚ್ಚು ಕಾಣಿಸಿದ್ದರು.

Share This Article