RCB ತಂಡದ 'ವಿಜಯ' ಕೋರಿದ ಮಲ್ಯ: ಮಾಜಿ ಮಾಲೀಕನಿಗೆ ಅಭಿಮಾನಿಗಳು ಹೇಳಿದ್ದೇನು..?

dk - 2025-05-30T120241.229
Published on

RCB :ಇಂಡಿಯನ್​ ಪ್ರೀಮಿಯರ್​ ಲೀಗ್​(IPL 2025)ನ 18ನೇ ಆವೃತ್ತಿಯ ಕ್ವಾಲಿಫೈಯರ್​​-1ರ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​ ವಿರುದ್ಧ 8 ವಿಕೆಟ್​ಗಳ ಜಯ ಸಾಧಿಸಿದ ಆರ್​ಸಿಬಿ ತಂಡ 9 ವರ್ಷಗಳ ಬಳಿಕ ಫೈನಲ್​ಗೆ ಲಗ್ಗೆ ಇಟ್ಟಿದೆ. ಈ ಮೂಲಕ 18 ವರ್ಷಗಳ ಕಪ್​​ ನಿಗಿಸುವುದಕ್ಕೆ ಇನ್ನೊಂದೇ ಹೆಜ್ಜೆ ಬಾಕಿ ಇದೆ. ಇದೀಗ ದೇಶಾದ್ಯಂತ ಆರ್​ಸಿಬಿ ಅಭಿಮಾನಿಗಳಿಂದ ಸಂತಸ ವ್ಯಕ್ತವಾಗುತ್ತಿದೆ. ಇದರ ನಡುವೆ ಆರ್​ಸಿಬಿ ಪ್ರಾಂಚೈಸಿ ಸಂಸ್ಥಾಪಕ, ಮಾಜಿ ಮಾಲೀಕ ವಿಜಯ್​​ ಮಲ್ಯ RCB ತಂಡಕ್ಕೆ ಶುಭ ಕೋರಿದ್ದಾರೆ.

ನಾಲ್ಕನೇ ಬಾರಿಗೆ ಫೈನಲ್​​ಗೆ

ಏತನ್ಮಧ್ಯೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 9 ವರ್ಷಗಳ ನಂತರ ಐಪಿಎಲ್ ಫೈನಲ್ ತಲುಪಿತು. 2016 ರಲ್ಲಿ ಕೊನೆಯ ಬಾರಿಗೆ ಫೈನಲ್ ತಲುಪಿತ್ತು. ಆರ್‌ಸಿಬಿ ಐಪಿಎಲ್‌ನಲ್ಲಿ ನಾಲ್ಕನೇ ಬಾರಿಗೆ ಫೈನಲ್ ತಲುಪಿರುವುದು ಗಮನಾರ್ಹ. 2009, 2011, 2016 ಮತ್ತು 2025 ರ ಆವೃತ್ತಿಗಳಲ್ಲಿ ಫೈನಲ್​ಗೆ ತಲುಪಿದೆ. ಆದರೆ ಕಳೆದ ಮೂರು ಬಾರಿಯೂ ಅದು ರನ್ನರ್ ಅಪ್ ಸ್ಥಾನದಲ್ಲಿದೆ. ಆದರೆ, ಈ ಬಾರಿ ಯಾವುದೇ ಬೆಲೆ ತೆತ್ತಾದರೂ ಪ್ರಶಸ್ತಿ ಗೆಲ್ಲಲೇಬೇಕೆಂದು ತಂಡ ದೃಢನಿಶ್ಚಯ ಮಾಡಿದಂತಿದೆ.

ವಿಜಯ್​​ ಮಲ್ಯ ಹೇಳಿದ್ದೇನು..?

ಪಿಬಿಕೆಎಸ್ ವಿರುದ್ಧ ಅದ್ಭುತ ಗೆಲುವು ಸಾಧಿಸಿ ಐಪಿಎಲ್ ಫೈನಲ್‌ಗೆ ಪ್ರವೇಶಿಸಿದ್ದಕ್ಕಾಗಿ ಆರ್‌ಸಿಬಿಗೆ ಅಭಿನಂದನೆಗಳು. ಹೆಚ್ಚಿನ ಒತ್ತಡದ ಸ್ಪರ್ಧೆಯಲ್ಲಿ ಅತ್ಯುತ್ತಮ ಆಲ್-ರೌಂಡ್ ಪ್ರದರ್ಶನ. ಪ್ರಶಸ್ತಿಯತ್ತ ಮುಂದುವರಿಯಿರಿ ಎಂದು ಹಂಚಿಕೊಂಡಿದ್ದಾರೆ.

ವಿಜಯ್​​ ಮಲ್ಯ ಆಹ್ವಾನಿಸಿದ ಅಭಿಮಾನಿಗಳು ಆರ್‌ಸಿಬಿ ಫ್ರಾಂಚೈಸಿಯನ್ನು ಆರಂಭಿಕ ಹಂತದಲ್ಲಿ ಕಟ್ಟಿ ಬೆಳೆಸಿದ ವಿಜಯ್ ಮಲ್ಯ ಇದೀಗ ಟ್ರೋಫಿ ಗೆಲುವು ನೋಡಬೇಕು. ಹೀಗಾಗಿ ಅಹಮ್ಮದಾಬಾದ್‌ನಲ್ಲಿ ಜೂನ್ 3 ರಂದು ನಡೆಯಲಿರುವ ಫೈನಲ್ ಪಂದ್ಯವನ್ನು ವೀಕ್ಷಿಸಲು ವಿಜಯ್ ಮಲ್ಯಗೆ ಅಭಿಮಾನಿಗಳು ಆಹ್ವಾನ ನೀಡಿದ್ದಾರೆ. ಇದೆ ವೇಳೆ ಮಲ್ಯ ವಿರುದ್ಧ ಟ್ವೀಟ್ ಮಾಡಿದ್ದಾರೆ. ಐಪಿಎಲ್ ಫೈನಲ್ ಪಂದ್ಯಕ್ಕೆ ಬನ್ನಿ, ಹೇಗೋ ಆರ್​ಸಿಬಿ ಫೈನಲ್ ಗೆಲ್ಲುತ್ತೆ. ಎಲ್ಲಾ ಸಾಲ ತೀರಿಸಿಬಿಡಬಹುದು ಎಂದು ಪ್ರತಿಕ್ರಿಯಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net