RCB ಕಪ್​ ಗೆದ್ರೆ ಸರ್ಕಾರ ರಜೆ ನೀಡಬೇಕು: CM ಸಿದ್ರಾಮಯ್ಯಗೆ ಆರ್​ಸಿಬಿ ಅಭಿಮಾನಿ ಬರೆದ ಪತ್ರ ವೈರಲ್​

dk - 2025-05-30T093853.075
Published on

RCB :ಇಂಡಿಯನ್​ ಪ್ರೀಮಿಯರ್​ ಲೀಗ್​(IPL 2025)ನ 18ನೇ ಆವೃತ್ತಿಯ ಕ್ವಾಲಿಫೈಯರ್​​-1ರ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​ ವಿರುದ್ಧ 8 ವಿಕೆಟ್​ಗಳ ಜಯ ಸಾಧಿಸಿದ ಆರ್​ಸಿಬಿ ತಂಡ 9 ವರ್ಷಗಳ ಬಳಿಕ ಫೈನಲ್​ಗೆ ಲಗ್ಗೆ ಇಟ್ಟಿದೆ. ಈ ಮೂಲಕ 18 ವರ್ಷಗಳ ಕಪ್​​ ನಿಗಿಸುವುದಕ್ಕೆ ಇನ್ನೊಂದೇ ಹೆಜ್ಜೆ ಬಾಕಿ ಇದೆ. ಇದೀಗ ಆರ್​ಸಿಬಿ ಪೈನಲ್​​ ಗೆದ್ದರೆ ಅದನ್ನು ಪ್ರತಿ ವರ್ಷ 'ಆರ್​ಸಿಬಿ ಫ್ಯಾನ್ಸ್​ ಹಬ್ಬ' ಎಂದು ಆಚರಣೆ ಮಾಡಬೇಕು. ಅಲ್ಲದೆ ಆ ದಿನ ರಜೆ ನೀಡಬೇಕು ಎಂದು ಸಿಎಂ ಸಿದ್ರಾಮಯ್ಯಗೆ ಓರ್ವ ಅಭಿಮಾನಿ ಪತ್ರ ಬರೆದಿದ್ದಾನೆ.

ಬೆಳಗಾವಿ ಜಿಲ್ಲೆಯ ಗೋಕಾಕ್ ಮೂಲದ ಶಿವಾನಂದ ಮಲ್ಲನ್ನವರ್ ಎಂಬ ಯುವಕ ಆರ್‌ಸಿಬಿ ಅಭಿಮಾನಿ, ಆರ್‌ಸಿಬಿ ಕಪ್ಪು ಗೆದ್ದ ದಿನ ಪ್ರತಿ ವರ್ಷ ರಜೆ ನೀಡಬೇಕು. ಎಲ್ಲಾ ಜಿಲ್ಲೆಯಲ್ಲೂ ಆಚರಣೆ ವ್ಯವಸ್ಥೆ ಮಾಡಿಕೊಡಬೇಕು ಎಂದು ಆರ್ಸಿಬಿ ಫೈನಲ್‌ಗೆ ತಲಪುವಂತೆ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆಯುವ ಮೂಲಕ ವಿಶೇಷ ಮನವಿ ಮಾಡಿದ್ದಾನೆ. ಇದೀಗ ಈ ಪತ್ರ ಸಾಮಾಜಿಕ ಜಾಲತಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ವೈರಲ್​ ಪತ್ರದಲ್ಲೇನಿದೆ..?

ಐಪಿಎಲ್ ಫೈನಲ್ ಪಂದ್ಯದಲ್ಲಿ ಆರ್​ಸಿಬಿ ಗೆದ್ದರೆ ಆ ದಿನವನ್ನು ಕರ್ನಾಟಕ ರಾಜ್ಯ ಆರ್​​ಸಿಬಿ ಫ್ಯಾನ್ಸ್ ಹಬ್ಬ ಘೋಷಿಸಬೇಕು. ಜತೆಗೆ ಈ ದಿನವನ್ನು ಸರ್ಕಾರಿ ರಜೆ ಎಂದು ಘೋಷಿಸಲು ಅಭಿಮಾನಿ, ಸಿದ್ದರಾಮಯ್ಯನವರಿಗೆ ಮನವಿ ಮಾಡಿದ್ದಾನೆ.

ಕರ್ನಾಟಕ ರಾಜ್ಯೋತ್ಸವವನ್ನು ಪ್ರತಿ ಜಿಲ್ಲೆಯಲ್ಲಿ ಯಾವ ರೀತಿ ಆಚರಿಸಲಾಗುತ್ತದೋ, ಅದೇ ರೀತಿ ಆರ್‌ಸಿಬಿ ಫ್ಯಾನ್ಸ್ ಹಬ್ಬವನ್ನು ಆಚರಿಸಲು ಸರ್ಕಾರ ಅನುವು ಮಾಡಿಕೊಡಬೇಕು ಎಂದು ಪತ್ರದಲ್ಲಿ ಬರೆಯಲಾಗಿದೆ. ಇದನ್ನು ಕರ್ನಾಟಕ ಸರ್ಕಾರ ಗಣನೀಯವಾಗಿ ರಜೆ ತೆಗೆದುಕೊಂಡಿತು ಮತ್ತು ಆರ್ ಸಿಬಿ ಫ್ಯಾನ್ಸ್ ಹಬ್ಬ ಆಚರಿಸುವುದಕ್ಕೆ ಪರವಾಣಿಗೆ ಕೊಡ ಎಲ್ಲಾ ಆರ್ಸಿಬಿ ಫ್ಯಾನ್ಸ್ ಪರವಾಗಿ ಕಳಕಳಿಯ ವಿನಂತಿ ಮಾಡಿಕೊಳ್ಳುತ್ತೇವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net