ಇನ್ನೊಂದೆ ಹೆಜ್ಜೆ ಮಾತ್ರ... ಅನುಷ್ಕಾಗೆ ವಿರಾಟ್ ಸನ್ನೆ ಮಾಡಿದ್ದೇನು?: ವಿಡಿಯೋ ಇಲ್ಲಿದೆ ನೋಡಿ.. | IPL 2025

dk - 2025-05-30T084249.180
Published on

ಇಂಡಿಯನ್​ ಪ್ರೀಮಿಯರ್​ ಲೀಗ್​(IPL 2025)ನ 18ನೇ ಆವೃತ್ತಿಯ ಕ್ವಾಲಿಫೈಯರ್​​-1ರ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​ ವಿರುದ್ಧ 8 ವಿಕೆಟ್​ಗಳ ಜಯ ಸಾಧಿಸಿದ ಆರ್​ಸಿಬಿ ತಂಡ 9 ವರ್ಷಗಳ ಬಳಿಕ ಫೈನಲ್​ಗೆ ಲಗ್ಗೆ ಇಟ್ಟಿದೆ. ಈ ಮೂಲಕ 18 ವರ್ಷಗಳ ಕಪ್​​ ನಿಗಿಸುವುದಕ್ಕೆ ಇನ್ನೊಂದೇ ಹೆಜ್ಜೆ ಬಾಕಿ ಇದೆ. ಇನ್ನು RCB ಪಂದ್ಯ ಗೆಲುವಿನ ಬಳಿಕ ಮೈದಾನದಲ್ಲಿ ಆಟಗಾರರು ಕುಣಿದು ಸಂಭ್ರಮಿಸಿದರು. ಈ ನಡುವೆ ಪೆವಿಲಿಯನ್​ ಸ್ಟ್ಯಾಂಡ್​ನಲ್ಲಿದ್ದ ಅನುಷ್ಕಾಗೆ ಕೊಹ್ಲಿ ತನ್ನ ಕೈ ಸನ್ನೆ ಮೂಲಕ ವಿಶೇಷವಾಗಿ ಸಂತಸ ವ್ಯಕ್ತಪಡಿಸಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ 2025ರ ಫೈನಲ್‌ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡ ಅನುಷ್ಕಾ ಶರ್ಮ ತಮ್ಮ ಸಂತೋಷವನ್ನು ಪಕ್ಕದಲ್ಲಿದ್ದ ಎಲ್ಲರ ಜತೆ ಹಂಚಿಕೊಂಡರು. ಕೊಹ್ಲಿ ಕಡೆ ಮುಖ ಮಾಡಿದ ಅನುಷ್ಕಾ ಸಂತೋಷವನ್ನು ತಡೆದುಕೊಳ್ಳಲು ಆಗಲಿಲ್ಲ. ಅಲ್ಲಿಂದಲ್ಲೇ ಖುಷಿಯಿಂದ ಚಪ್ಪಾಳೆ ತಟ್ಟುವ ಮೂಲಕ ಸಂಭ್ರಮಿಸಿದರು. ಇದನ್ನು ಗಮನಿಸಿದ ಕೊಹ್ಲಿ ಸ್ಟ್ಯಾಂಡ್‌ಗಳತ್ತ ನೋಡಿ ಅನುಷ್ಕಾ ಕಡೆಗೆ ಒಂದು ಬೆರಳು ತೋರಿಸಿದರು. ಅಭಿಮಾನಿಗಳು ನಂಬುವಂತೆ, ಅವರು ಬಹಳ ದಿನಗಳಿಂದ ಇರುವ ಕನಸು ಐಪಿಎಲ್ ಟ್ರೋಫಿಯನ್ನು ಎತ್ತುವ ಹೆಜ್ಜೆ "ಇನ್ನೂ ಒಂದು ಗೆಲುವು ಮಾತ್ರ ಬಾಕಿ ಇದೆ" ಎಂದು ಹೇಳುವ ಅವರ ಸನ್ನೆ ಇದು ಎಂದು ಅಭಿಮಾನಿಗಳು ವೈರಲ್​ ಮಾಡಿದ್ದಾರೆ.

ಇದನ್ನೂ ಓದಿ:ಇತ್ತೀಚೆಗೆ ವೈರಲ್​ ಆದ​ ವಿಡಿಯೋದಲ್ಲಿದ್ದಿದ್ದು ಯಾಕುಮಾಮವೇ? ಇದಕ್ಕಿದ್ದ ಶಕ್ತಿಯ ಬಗ್ಗೆ ತಿಳಿದ್ರೆ ನೀವು ದಂಗಾಗ್ತೀರಾ! Yakumama "ಆರ್‌ಸಿಬಿ ಫೈನಲ್‌ಗೆ ಅರ್ಹತೆ ಪಡೆದಾಗ ಅನುಷ್ಕಾ ಶರ್ಮಗೆ ಎಷ್ಟು ಸಂತೋಷ" ಎಂದು ಎಕ್ಸ್​ನಲ್ಲಿ ಒಬ್ಬ ಬಳಕೆದಾರರು ಬರೆದಿದ್ದಾರೆ. ಮತ್ತೊಬ್ಬ ಅಭಿಮಾನಿ, "ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾಗೆ ಐಪಿಎಲ್ ಟ್ರೋಫಿಯಿಂದ ನಮಗೆ ಇನ್ನೊಂದು ಗೆಲುವು ಇದೆ ಎಂದು ಹೇಳಿದರು" ಸೇರಿಸಿದ್ದಾರೆ. ಹೀಗೆ ನೆಟ್ಟಿಗರು ವಿರಾನುಷ್ಕಾ ಬಗ್ಗೆ ತರಹೇವಾರಿ ಕಾಮೆಂಟ್​ಗಳನ್ನು ಮಾಡಿದ್ದಾರೆ.

ಮೈದಾನದಲ್ಲಿನ ಅವರ ಉತ್ಸಾಹ ಮತ್ತು ಅದರಲ್ಲಿ ಅನುಷ್ಕಾ ಅವರ ಅಚಲ ಬೆಂಬಲ ಯಾವಾಗಲೂ ಅಭಿಮಾನಿಗಳಿಗೆ ಒಂದು ಪ್ರಮುಖ ಅಂಶವಾಗಿದೆ. ಹೀಗಾಗಿ, ಗುರುವಾರ ರಾತ್ರಿಯೂ ಇದಕ್ಕೆ ಹೊರತಾಗಿರಲಿಲ್ಲ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net