ಸ್ವಲ್ಪ ಪ್ರಯತ್ನ ಪಟ್ಟಿದ್ದರೆ ಸಾಧಿಸಬಹುದಿತ್ತು; ಏಕದಿನ ವಿಶ್ವಕಪ್​ ಸೋಲಿನ ಕುರಿತು ಮೌನಮುರಿದ ರೋಹಿತ್ ಶರ್ಮಾ

Rohit Sharma
Published on

ಸೆಂಚುರಿಯನ್: ಏಕದಿನ ವಿಶ್ವಕಪ್​ ಫಿನಾಲೆಯಲ್ಲಿ ಉಂಟಾದ ಸೋಲಿನ ನೋವು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿ ಗೆಲುವಿನಿಂದ ಸರಿದೂಗಿಸುವುದಿಲ್ಲ ಎಂದು ಟೀಂ ಇಂಡಿಯಾ ನಾಯಕ ರೋಹಿತ್​ ಶರ್ಮಾ ಹೇಳಿದ್ದಾರೆ.

ಡಿಸೆಂಬರ್​ 26ರಂದು ದಕ್ಷಿಣ ಆಫ್ರಿಕಾ ವಿರುದ್ಧ ಶುರುವಾಗಲಿರುವ ಎರಡು ಪಂದ್ಯಗಳ ಟೆಸ್ಸ್​ ಸರಣಿಗು ಮುನ್ನ ಪತ್ರಿಕಾಗೋಷ್ಠಿಯನ್ನುದ್ಧೇಶಿಸಿ ಮಾತನಾಡಿದ ರೋಹಿತ್​ ದಕ್ಷಿಣ ಆಫ್ರಿಕಾದಲ್ಲಿ ನಾವು ಈವರೆಗೂ ಒಂದು ಟೆಸ್ಟ್​ ಸರಣಿಯನ್ನು ಗೆದ್ದಿಲ್ಲ. ಒಂದು ವೇಳೆ ಗೆದ್ದರೆ ಅದು ದೊಡ್ಡ ವಿಚಾರವಾಗುತ್ತದೆ ಎಂದಿದ್ದಾರೆ.

ನಾವು ದಕ್ಷಿಣ ಆಫ್ರಿಕಾದಲ್ಲಿ ಈವರೆಗೂ ಒಂದು ಟೆಸ್ಟ್​ ಸರಣಿಯನ್ನು ಗೆದ್ದಿಲ್ಲ. ಒಂದು ವೇಳೆ ಗೆದ್ದರೆ ನಾವು ಇತಿಹಾಸವನ್ನು ಬರೆಯುತ್ತೇವೆ. ಈ ಸರಣಿ ಗೆಲುವು ವಿಶ್ವಕಪ್​ ಫಿನಾಲೆ ಸೋಲಿನ ನೋವನ್ನು ಸರಿದೂಗಿಸುವುದಿಲ್ಲ. ವಿಶ್ವಕಪ್​ನಲ್ಲಿ ನಾವು 10 ಪಂದ್ಯಗಳನ್ನು ಹೇಗೆ ಆಡಿದ್ದೇವೆ ಎಂಬುದನ್ನು ನೀವುಗಳ ನೋಡಿದ್ದೀರಾ. ಆದರೆ, ಫಿನಾಲೆಯಲ್ಲಿ ನಾವು ಅಂದುಕೊಂಡಂತೆ ಆಟವಾಡಲು ಸಾಧ್ಯವಾಗಲಿಲ್ಲ.

ಫಿನಾಲೆ ಸೋಲಿನಿಂದ ಹೊರಬರಲು ನಾನು ತುಂಬಾ ಸಮಯವನ್ನು ತೆಗೆದುಕೊಂಡೆ. ಒಂದು ವೇಳೆ ವಿಶ್ವಕಪ್​ ಫಿನಾಲೆಯಲ್ಲಿ ಉಂಟಾದ ಸೋಲಿನ ನೋವು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿ ಗೆಲುವಿನಿಂದ ಸರಿದೂಗಿಸುವುದಿಲ್ಲ ಎಂದು ಟೀಂ ಇಂಡಿಯಾ ನಾಯಕ ರೋಹಿತ್​ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net