More

    IPL2024| ಹಾರ್ದಿಕ್​ ಪಾಂಡ್ಯ ಖರೀದಿಗಾಗಿ 100 ಕೋಟಿ ರೂ. ವ್ಯಯಿಸಿದ ಮುಂಬೈ ಇಂಡಿಯನ್ಸ್!

    ಮುಂಬೈ: ಮುಂದಿನ ವರ್ಷ ನಡೆಯಲಿರುವ 17ನೇ ಆವೃತ್ತಿಯ ಐಪಿಎಲ್​ಗಾಗಿ ಈಗಾಗಲೇ ಸಿದ್ದತೆಗಳು ಭರದಿಂದ ಆರಂಭಗೊಂಡಿದ್ದು, ಈ ಪೈಕಿ ಹೆಚ್ಚು ಸದ್ದು ಮಾಡುತ್ತಿರುವ ವಿಚಾರ ಎಂದರೆ ಅದು ಮುಂಬೈ ಇಂಡಿಯನ್ಸ್​ ಹಾಗೂ ಹಾರ್ದಿಕ್​ ಪಾಂಡ್ಯ ಎಂದು ಹೇಳಬಹುದು. ಇದೀಗ ರಿವೀಲ್​ ಆಗಿರುವ ಹೊಸ ವಿಚಾರ ಒಂದರಲ್ಲಿ ಹಾರ್ದಿಕ್ ಪಾಂಡ್ಯರನ್ನು ಮಾರಾಟ ಮಾಡಲು ಗುಜರಾತ್ ಟೈಟಾನ್ಸ್ ಬೃಹತ್ ಮೊತ್ತ ಪಡೆದಿದೆ ಎಂದು ತಿಳಿದು ಬಂದಿದೆ.

    17ನೇ ಆವೃತ್ತಿಯ ಐಪಿಎಲ್​ನಲ್ಲಿ ಹಾರ್ದಿಕ್​ ಪಾಂಡ್ಯ ಮುಂಬೈ ಇಂಡಿಯನ್ಸ್​ ಪರ ಆಡುತ್ತಿರುವುದು ಹೊಸ ವಿಚಾರವೇನಲ್ಲ. ಗುಜರಾತ್ ಟೈಟಾನ್ಸ್ ತಂಡದಲ್ಲಿದ್ದ ಪಾಂಡ್ಯರನ್ನು ಐಪಿಎಲ್ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ಟ್ರೇಡ್ ಮಾಡಿಕೊಂಡಿತ್ತು. ಆದರೆ, ಈ ಟ್ರೇಡ್​ಗಾಗಿ ಮುಂಬೈ ಇಂಡಿಯನ್ಸ್​ ಗುಜರಾತ್​ ಟೈಟಾನ್ಸ್​ಗೆ​ ಬರೋಬ್ಬರಿ 100 ಕೋಟಿ ರೂ. ನೀಡಿದೆ ಎಂದು ವರದಿಯಾಗಿದೆ.

    ಇದನ್ನೂ ಓದಿ: ಉಪನ್ಯಾಸ ನೀಡುವಾಗಲೇ ವೇದಿಕೆ ಮೇಲೆ ಕುಸಿದು ಬಿದ್ದು ಐಐಟಿ ಪ್ರಾಧ್ಯಾಪಕ ನಿಧನ

    ಹಾರ್ದಿಕ್​ ಪಾಂಡ್ಯರನ್ನು ಟ್ರೇಡ್​ ಮೂಲಕ ಮುಂಬೈ ಇಂಡಿಯನ್ಸ್​ಗೆ ವರ್ಗಾವಣೆ ಮಾಡಲು ಗುಜರಾತ್​ ಟೈಟಾನ್ಸ್​ ಬರೋಬ್ಬರಿ 100 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿತ್ತು ಎಂದು ತಿಳಿದು ಬಂದಿದೆ. ಅದರಂತೆ ಮುಂಬೈ ಇಂಡಿಯನ್ಸ್​ 100 ಕೋಟಿ ರೂಪಾಯಿ ವ್ಯಯಿಸಿ ಹಾರ್ದಿಕ್​ ಪಾಂಡ್ಯರನ್ನು ಟ್ರೇಡ್​ ಮೂಲಕ ಖರೀದಿಸಿದೆ ಎಂದು ವರದಿಯಾಗಿದೆ.

    ಐಪಿಎಲ್ ಟ್ರೇಡಿಂಗ್ ನಿಯಮಗಳ ಪ್ರಕಾರ, ಒಬ್ಬ ಆಟಗಾರನನ್ನು ಟ್ರೇಡ್ ಮಾಡಿಕೊಳ್ಳಬೇಕಿದ್ದರೆ ಎರಡೂ ಫ್ರಾಂಚೈಸಿಗಳು ಒಮ್ಮತಕ್ಕೆ ಬರಬೇಕು. ಅಲ್ಲದೇ ಆಟಗಾರನ ಮಾರಾಟ ಮಾಡುವ ಫ್ರಾಂಚೈಸಿಯು ಹೇಳುವ ಮೊತ್ತವನ್ನು ಖರೀದಿಸುವ ತಂಡ ನೀಡಬೇಕಾಗುತ್ತದೆ. ಹೀಗೆ ಎರಡು ಫ್ರಾಂಚೈಸಿಗಳ ನಡುವೆ ಡೀಲ್ ಆಗಿದ್ದಲ್ಲಿ ಮಾತ್ರ ಟ್ರೇಡಿಂಗ್ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಇತ್ತ ಬೃಹತ್ ಮೊತ್ತ ಪಾವತಿಸಿ ಖರೀದಿಸಿದ ಪಾಂಡ್ಯ ಇದೀಗ ಮುಂಬೈ ಇಂಡಿಯನ್ಸ್​ ತಂಡದ ಹೊಸ ನಾಯಕರಾಗಿ ಆಯ್ಕೆಯಾಗಿದ್ದಾರೆ. ಅದರಂತೆ ಐಪಿಎಲ್ 2024 ರಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ರೋಹಿತ್ ಶರ್ಮಾ ಬದಲಿಗೆ ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts