More

    ಹಿಂದಿ ಭಾಷಿಕರು ತಮಿಳುನಾಡಿನಲ್ಲಿ ಶೌಚಾಲಯಗಳನ್ನು ತೊಳೆಯುತ್ತಿದ್ದಾರೆ: ವಿವಾದದ ಕಿಡಿ ಹೊತ್ತಿಸಿದ ಡಿಎಂಕೆ ಸಂಸದ

    ಚೆನ್ನೈ: ಕೆಲ ತಿಂಗಳ ಹಿಂದೆ ಸನಾತನ ಧರ್ಮದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ರಾಷ್ಟ್ರ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದ ಡಿಎಂಕೆ ನಾಯಕರು ಇದೀಗ ಮತ್ತೊಮ್ಮೆ ತಮ್ಮ ವಿವಾದಿತ ಹೇಳಿಕೆಗಳಿಂದ ಸುದ್ದಿಯಾಗಿದ್ದಾರೆ. ಉತ್ತರಭಾರತದಿಂದ ಹಿಂದಿ ಮಾತನಾಡುವ ರಾಜ್ಯಗಳಿಂದ ತಮಿಳುನಾಡಿಗೆ ಬರುವ ವಲಸಿಗರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ವಿವಾದ ಹುಟ್ಟುಹಾಕಿದ್ದಾರೆ.

    ಕಳೆದ ಕೆಲ ದಿನಗಳ ಹಿಂದೆ ಸಂಸತ್​ ಅಧಿವೇಶನದಲ್ಲಿ ಡಿಎಂಕೆ ಸಂಸದ ಸೆಂಥಿಲ್​ ಕುಮಾರ್​ ಹಿಂದಿ ಭಾಷಿಕ ರಾಜ್ಯಗಳನ್ನ ಅವಮಾನಿಸಿದ ಪ್ರಕರಣ ಮಾಸುವ ಮುನ್ನವೇ ಪಕ್ಷದ ಮತ್ತೊಬ್ಬ ನಾಯಕ ದಯಾನಿಧಿ ಮಾರನ್​ ಹೇಳಿಕೆ ನೀಡಿರುವುದು ತೀವ್ರ ಖಂಡನೆಗೆ ಗುರಿಯಾಗಿದೆ.

    ದಯಾನಿಧಿ ಮಾರನ್​ ಹೇಳಿಕೆ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಇಂಗ್ಲೀಷ್​ ಕಲಿತವರು ಐಟಿ ಉದ್ಯೋಗ ಮಾಡುತ್ತಾರೆ. ಹಿಂದಿ ಕಲಿತವರು ರಸ್ತೆ ಹಾಗೂ ಶೌಚಾಲಯ ಶುಚಿಗೊಳಿಸುತ್ತಾರೆ ಎಂದು ಹೇಳಿದ್ದಾರೆ. ದಯಾನಿಧಿ ಮಾರನ್​ ಹೇಳಿಕೆ ವೈರಲ್​ ಆಗಿದ್ದು, ಇದೊಂದು ದುರದೃಷ್ಟಕರ ಸಂಗತಿಯಾಗಿದ್ದು, ಕೂಡಲೇ ಇಂಡಿಯಾ ಒಕ್ಕೂಟದ ನಾಯಕರು ಹೇಳಿಕೆಗೆ ಸ್ಪಷ್ಟನೆ ನೀಡಬೇಕೆಂದು ಹಲವರು ಆಗ್ರಹಿಸಿದ್ದಾರೆ.

    ಇದನ್ನೂ ಓದಿ: ರೋಹಿತ್​ಗೆ ಮತ್ತೆ ಮುಂಬೈ ಇಂಡಿಯನ್ಸ್​ ನಾಯಕನ ಪಟ್ಟ; ಕಾರಣ ಹೀಗಿದೆ

    ಈ ತಿಂಗಳ ಆರಂಭದಲ್ಲಿ, ತಮಿಳುನಾಡಿನ ಧರ್ಮಪುರಿಯ ಡಿಎಂಕೆ ಸಂಸದ ಸೆಂಥಿಲ್ ಕುಮಾರ್ ಅವರು ಭಾರತದ ಉತ್ತರ ಭಾಗದ ಹಿಂದಿ ಮಾತನಾಡುವ ರಾಜ್ಯಗಳನ್ನ ಅಣಕಿಸಲು ಗೋಮೂತ್ರ ಹೇಳಿಕೆಯನ್ನ ನೀಡಿದ್ದರು. ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ (ತಿದ್ದುಪಡಿ) ಮಸೂದೆ 2023 ಕುರಿತು ಸಂಸತ್ತನ್ನುದ್ದೇಶಿಸಿ ಮಾತನಾಡಿದ ಡಿಎಂಕೆ ನಾಯಕ, ಹಿಂದಿ ಹೃದಯಭಾಗದಲ್ಲಿರುವ ರಾಜ್ಯಗಳನ್ನು ಗೋಮೂತ್ರ ರಾಜ್ಯಗಳು ಎಂದು ಉಲ್ಲೇಖಿಸಿದರು.

    ಈ ಬಿಜೆಪಿಯ ಶಕ್ತಿಯು ಮುಖ್ಯವಾಗಿ ಹೃದಯಭಾಗದ ರಾಜ್ಯಗಳಾದ ಹಿಂದಿಯಲ್ಲಿ ಮಾತ್ರ ಚುನಾವಣೆಗಳನ್ನ ಗೆಲ್ಲುತ್ತಿದೆ ಎಂದು ಈ ದೇಶದ ಜನರು ಭಾವಿಸಬೇಕು, ಇದನ್ನು ನಾವು ಸಾಮಾನ್ಯವಾಗಿ ಗೋಮೂತ್ರ ರಾಜ್ಯ ಎಂದು ಕರೆಯುತ್ತೇವೆ ಎಂದು ಹೇಳಿ ತೀವ್ರ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ ಕ್ಷಮೆಯಾಚಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts