

ಬೆಂಗಳೂರು: ನಾವು ಧರಿಸುವ ಬಟ್ಟೆಗಳ ಮೇಲೆ ಕಲೆಯಾದರೆ ಅವುಗಳನ್ನು ಹೋಗಲಾಡಿಸಲು ಡಿಟರ್ಜೆಂಟ್, ಲಿಕ್ಷಿಡ್ ಅಥವಾ ಸೋಪ್ ಬಳಸುತ್ತೇವೆ. ಇನ್ನು ಕೆಲವೊಮ್ಮೆ ಡ್ರೈ ಕ್ಲೀನ್ ಮಾಡಿಸುತ್ತೇವೆ. ಹಾಗಿದ್ದರೂ ಆ ಕಲೆಗಳು ಮಾಯವಾಗುವುದಿಲ್ಲ. ಹೀಗಿರುವಾಗ ನಾವು ಕೆಲ ಮನೆಮದ್ದುಗಳು ಬಟ್ಟೆ ಮೇಲಿನ ಕಲೆಗಳನ್ನು ಸುಲಭವಾಗಿ ಹೋಗಲಾಡಿಸಲು ಸಹಾಯ ಮಾಡುತ್ತವೆ.
ಅದಕ್ಕೆ ಪೂರಕವೆಂಬಂತೆ ಮಹಿಳೆಯೊಬ್ಬರು ಈಗ ಒಂದು ಸುಲಭ ಉಪಾಯ ತೋರಿಸಿಕೊಟ್ಟಿದ್ದು, ಇದನ್ನು ನೋಡಿದ ನೆಟ್ಟಿಗರು ನಿನ್ ಟ್ಯಾಲೆಂಟ್ ಮೆಚ್ಚಬೇಕಮ್ಮ ಎಂದು ಹಾಡಿಹೊಗಳಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ ಡೋಲೋ 650 ಮಾತ್ರೆಗಳನ್ನು ತೆಗೆದುಕೊಳ್ಳುವ ಮಹಿಳೆ ಅದನ್ನು ನೀರಿನಲ್ಲಿ ಬರೆಸುತ್ತಾರೆ. ಬಳಿಕ ಬಟ್ಟೆ ಕಲೆಯಾಗಿರುವ ಜಾಗಕ್ಕೆ ಹಚ್ಚಿ ಅದನ್ನು ಕೆಲ ಕ್ಷಣದಲ್ಲೇ ಮಾಯ ಮಾಡುತ್ತಾರೆ. ಇವರೆಗೂ 5 ಲಕ್ಷಕ್ಕೂ ಅಧಿಕ ಬಾರಿ ವಿಡಿಯೋ ವೀಕ್ಷಣೆಗೆ ಒಳಪಟ್ಟಿದ್ದು, ಮೇರಿಕಾದ ವಿಜ್ಞಾನಿಗಳು ಭಾರತದ ಈ ಆವಿಷ್ಕಾರಕ್ಕೆ ಬೆರಗಾಗಿದ್ದಾರೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
ವೈರಲ್ ವಿಡಿಯೋದಲ್ಲಿ ಮಹಿಳೆಯೊಬ್ಬರು ಬಟ್ಟೆಗಳಲ್ಲಿನ ಕಲೆಗಳನ್ನು ಡೋಲೋ-650 ಮಾತ್ರೆಯನ್ನು ಬಳಸಿ ಹೇಗೆ ತೆಗೆದುಹಾಕಬಹುದು ಎಂಬುದನ್ನು ಹೇಳಿಕೊಡುತ್ತಿರುವುನ್ನು ಕಾಣಬಹುದು. ಆ ಮಹಿಳೆ ಮೊದಲಿಗೆ ಒಂದು ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಅದನ್ನು ಗ್ಯಾಸ್ ಒಲೆಯ ಮೇಲೆ ಕುದಿಯಲು ಇಡುತ್ತಾರೆ. ನಂತರ ಎರಡು ಡೋಲೋ-650 ಮಾತ್ರೆಯನ್ನು ತೆಗೆದುಕೊಂಡು, ಅದನ್ನು ಚೆನ್ನಾಗಿ ಪುಡಿ ಮಾಡಿ ಕುದಿಯುತ್ತಿರುವ ನೀರಿಗೆ ಹಾಕ್ತಾರೆ.
ಬಳಿಕ ಆ ನೀರಿಗೆ ಎರಡು ಚಮಚ ಬೇಕಿಂಗ್ ಸೋಡಾ ಮತ್ತು ಅರ್ಧ ಕಪ್ ಡಿಟರ್ಜೆಂಟ್ ಪೌಡರ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳುತ್ತಾರೆ. ಹೀಗೆ ನೀರನ್ನು ಚೆನ್ನಾಗಿ ಕುದಿಸಿ, ನಂತರ ಕಲೆಯಾಗಿರುವಂತಹ ಬಿಳಿ ಬಟ್ಟೆಯನ್ನು ತೆಗೆದುಕೊಂಡು, ಅದನ್ನು ಎರಡು ನಿಮಿಷಗಳ ಕಾಲ ಡೋಲೋ-650 ಮಾತ್ರೆಯನ್ನು ಹಾಕಿದ ನೀರಿನಲ್ಲಿ ಅದ್ದಿಡುತ್ತಾರೆ. ಕೊನೆಯಲ್ಲಿ ಬಟ್ಟೆಯನ್ನು ತಿಕ್ಕಿ ತೊಳೆಯದೆಯೂ ಸುಲಭವಾಗಿ ಬಟ್ಟೆಯ ಕಲೆ ತೆಗೆದು ಹಾಕಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.