More

    ಯೇಸುಕ್ರಿಸ್ತನ ಆದರ್ಶಗಳು ನಮಗೆ ಮಾರ್ಗದರ್ಶಕ ಬೆಳಕಿನಂತೆ: ಪ್ರಧಾನಿ ನರೇಂದ್ರ ಮೋದಿ

    ನವದೆಹಲಿ: ಇಂದು ದೇಶಾದ್ಯಂತ ಸಂಭ್ರಮ-ಸಡಗರದಿಂದ ಕ್ರಿಸ್​ಮಸ್​ ಹಬ್ಬವನ್ನು ಆಚರಿಸಲಾಗುತ್ತಿದೆ. ದೆಹಲಿಯ ಚರ್ಚ್​ ಒಂದರಲ್ಲಿ ಕ್ರಿಸ್​ಮಸ್​ ಆಚರಿಸಿದ ಪ್ರಧಾನಿ ನರೇಂದ್ರ ಮೋದಿ ಯೇಸುಕ್ರಿಸ್ತನ ಜೀವನ ಸಂದೇಶ, ದಯೆ ಮತ್ತು ಸೇವೆಯ ಮೌಲ್ಯಗಳನ್ನು ಹಾಡಿ ಹೊಗಳಿದ್ದಾರೆ.

    ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ನಾನು ಕ್ರಿಶ್ಚಿಯನ್ ಸಮುದಾಯದೊಂದಿಗೆ ಅತ್ಯಂತ ಹಳೆಯ ಮತ್ತು ನಿಕಟ ಸಂಬಂಧವನ್ನು ಹೊಂದಿದ್ದೇನೆ. ಗುಜರಾತಿನ ಮುಖ್ಯಮಂತ್ರಿ ಆಗಿದ್ದ ವೇಳೆ ನಾನು ಆಗಾಗ ಕ್ರೈಸ್ತ ಸಮುದಾಯ ಮತ್ತು ಅವರ ಮುಖಂಡರನ್ನು ಭೇಟಿಯಾಗುತ್ತಿದ್ದೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಸಬ್​ ಕಾ ರಾಮ: ರಾಮ ಮಂದಿರ “ಪ್ರಾಣ ಪ್ರತಿಷ್ಠಾ” ಸಮಾರಂಭದಲ್ಲಿ ಸರ್ವರನ್ನು ತಲುಪಲು ಆರ್​ಎಸ್​ಎಸ್​ ಪ್ಲ್ಯಾನ್

    ಕ್ರಿಸ್​ಮಸ್​ ನಾವು ಯೇಸುಕ್ರಿಸ್ತನ ಜನ್ಮದಿನವನ್ನು ಆಚರಿಸುವ ದಿನ. ಅವರ ಜೀವನ ಸಂದೇಶ ಮತ್ತು ಮೌಲ್ಯಗಳನ್ನು ನೆನಪಿಸಿಕೊಳ್ಳುವ ಸಂದರ್ಭವೂ ಇದಾಗಿದೆ. ಅವರು ದಯೆ ಮತ್ತು ಸೇವೆಯ ಆದರ್ಶಗಳನ್ನಿಟ್ಟುಕೊಂಡು ಬದುಕಿದವರು. ಎಲ್ಲರಿಗೂ ನ್ಯಾಯ ಸಿಗುವ ಸಮಾಜವನ್ನು ರೂಪಿಸುವ ಕೆಲಸ ಮಾಡಿದರು. ಈ ಆದರ್ಶಗಳು ನಮ್ಮ ದೇಶದ ಅಭಿವೃದ್ಧಿ ಪಯಣಕ್ಕೆ ಮಾರ್ಗದರ್ಶಕ ಬೆಳಕಿನಂತೆ ಕೆಲಸ ಮಾಡುತ್ತವೆ.

    ಸರ್ಕಾರದ ಅಭಿವೃದ್ಧಿಯ ಪ್ರಯೋಜನಗಳು ಎಲ್ಲರಿಗೂ ತಲುಪುವಂತೆ ಮಾಡುತ್ತಿದ್ದೇವೆ. ಇಂದು ದೇಶದಲ್ಲಿ ಆಗುತ್ತಿರುವ ಅಭಿವೃದ್ಧಿಯ ಲಾಭಗಳು ಕ್ರೈಸ್ತ ಸಮುದಾಯದ ಜನರಿಗೆ ಅದರಲ್ಲೂ ಬಡವರು, ವಂಚಿತರಿಗೆ ತಲುಪುತ್ತಿದೆ. 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತವನ್ನು ರಚಿಸುವ ಗುರಿಯೊಂದಿಗೆ, ನಾವು ತ್ವರಿತಗತಿಯಲ್ಲಿ ಮುನ್ನಡೆಯುತ್ತಿದ್ದೇವೆ. ಈ ಅಭಿವೃದ್ಧಿ ಪಯಣದಲ್ಲಿ ನಮ್ಮ ಯುವಕರು ನಮ್ಮ ಪ್ರಮುಖ ಪಾಲುದಾರರಾಗಲಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts