More

    ಸಬ್​ ಕಾ ರಾಮ: ರಾಮ ಮಂದಿರ “ಪ್ರಾಣ ಪ್ರತಿಷ್ಠಾ” ಸಮಾರಂಭದಲ್ಲಿ ಸರ್ವರನ್ನು ತಲುಪಲು ಆರ್​ಎಸ್​ಎಸ್​ ಪ್ಲ್ಯಾನ್

    ನವದೆಹಲಿ: ಮುಂಬರುವ ವರ್ಷದಲ್ಲಿ ಜನವರಿ 22 ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಡೆಯಲಿರುವ ರಾಮ ಮಂದಿರದ “ಪ್ರಾಣ ಪ್ರತಿಷ್ಠಾ” ಸಮಾರಂಭವು 1,500-1,600 “ಪ್ರಖ್ಯಾತ” ಅತಿಥಿಗಳು ಸೇರಿದಂತೆ ಅಂದಾಜು 8,000 ಆಹ್ವಾನಿತರ ಭಾಗವಹಿಸುವಿಕೆಗೆ ಸಾಕ್ಷಿಯಾಗಲಿದೆ. ದೇವಾಲಯದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಆರ್‌ಎಸ್‌ಎಸ್ ಸರ್ಸಂಘಚಾಲಕ್ ಮೋಹನ್ ಭಾಗವತ್ ಭಾಷಣ ಮಾಡಲಿದ್ದಾರೆ.

    ಎಲ್ಲಾ ಮಾಜಿ ಪ್ರಧಾನಿಗಳು, ಎಲ್ಲಾ ರಾಷ್ಟ್ರೀಯ ಪಕ್ಷದ ಮುಖ್ಯಸ್ಥರು, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಕೈಗಾರಿಕೋದ್ಯಮಿಗಳಾದ ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿ, ದಲೈ ಲಾಮಾ, ಚಲನಚಿತ್ರ ನಟರಾದ ಅಮಿತಾಬ್ ಬಚ್ಚನ್, ರಜನಿಕಾಂತ್, ಮಾಧುರಿ ದೀಕ್ಷಿತ್ ನೇನೆ ಮೊದಲಾದ ಪ್ರಮುಖ ವ್ಯಕ್ತಿಗಳನ್ನು ರಾಮ ಮಂದಿರ ಟ್ರಸ್ಟ್ ಆಹ್ವಾನಿಸಿದೆ.

    ರಾಮ ಮಂದಿರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಬಿಜೆಪಿ ದಿಗ್ಗಜರಾದ ಎಲ್ ಕೆ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಪಕ್ಷದ ಹಿರಿಯ ನಾಯಕರಾದ ಉಮಾಭಾರತಿ, ವಿನಯ್ ಕಟಿಯಾರ್ ಅವರನ್ನೂ ಆಹ್ವಾನಿಸಲಾಗಿದೆ.

    ಆದರೆ, ಈ ಉದ್ಘಾಟನೆ ಸಮಾರಂಭವು ಅಯೋಧ್ಯೆಯ ಬಗ್ಗೆ ಮಾತ್ರ ಸೀಮಿತವಾಗಿರದೆ, ಈ ಕಾರ್ಯಕ್ರಮದ ಸಿದ್ಧತೆಯು “ಸಬ್​ ಕೆ ರಾಮ್ (ಎಲ್ಲರ ರಾಮ)” ಎಂಬ ದಿಕ್ಸೂಚಿಯನ್ನು ಹೊಂದಿರಬೇಕೆಂದು ಸಂಘ ಪರಿವಾರದ ಬಯಸಿದೆ ಎಂದು ಆರೆಸ್ಸೆಸ್ ಮೂಲಗಳು ಹೇಳಿವೆ.

    ಈ ಕಸರತ್ತಿನ ಭಾಗವಾಗಿ, ಆರ್‌ಎಸ್‌ಎಸ್‌ನ ಮತ್ತು ವಿಎಚ್‌ಪಿ ಸದಸ್ಯರು ಜನವರಿ 1 ರಿಂದ ಜನವರಿ 15 ರವರೆಗೆ ದೇಶಾದ್ಯಂತ “ಅಕ್ಷತೆ (ಅಕ್ಕಿ)” ವಿತರಣೆಗಾಗಿ ಮನೆ-ಮನೆ ಪ್ರಚಾರವನ್ನು ಕೈಗೊಳ್ಳಲಿದ್ದಾರೆ. ರಾಮ ಮಂದಿರದ ಉದ್ಘಾಟನೆಯ ಸಂದರ್ಭದಲ್ಲಿ ಜನವರಿ 22ರಂದು ಜನರು ತಮ್ಮ ಸ್ಥಳೀಯ ದೇವಾಲಯಗಳಲ್ಲಿ ಸಭೆಗಳನ್ನು ಆಯೋಜಿಸುವುದಕ್ಕಾಗಿ ಸಾಂಕೇತಿಕ ಆಹ್ವಾನ ನೀಡುವ ಇದಾಗಿದೆ.

    ಈ ಪ್ರಚಾರವು ಭಾರತದಾದ್ಯಂತ ಮಾತ್ರವಲ್ಲದೆ ವಿದೇಶಗಳಲ್ಲಿ ಸಹ ನಡೆಯಲಿದೆ, ಅಲ್ಲಿ ಸಂಘ ಪರಿವಾರವು ಹಿಂದೂ ಸಮುದಾಯದ ಜನರು ಜನವರಿ 22 ರಂದು ತಮ್ಮ ಪ್ರದೇಶಗಳಲ್ಲಿ ಇದೇ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಸಜ್ಜುಗೊಳಿಸುತ್ತಿದೆ.

    “ಜನರು ಅಯೋಧ್ಯೆಯ ಮೇಲೆ ಕೇಂದ್ರೀಕರಿಸುತ್ತಿದ್ದಾರೆ, ಆದರೆ, ಜನವರಿ 22ರಂದು ರಾಷ್ಟ್ರೀಯ ಮಟ್ಟದಲ್ಲಿ ಇದು ದೊಡ್ಡ ಕಾರ್ಯಕ್ರಮವಾಗಲಿದೆ, ಕೆಲವು ಕಾರ್ಯಕ್ರಮಗಳು ಜಗತ್ತಿನಾದ್ಯಂತ ಜರುಗಲಿವೆ. ಅಯೋಧ್ಯೆ ಪ್ರಾಣ ಪ್ರತಿಷ್ಠೆಯೊಂದಿಗೆ ನಡೆಯುವ ಸ್ಥಳೀಯ ಕಾರ್ಯಕ್ರಮಗಳು ಆನ್‌ಲೈನ್‌ನಲ್ಲಿ ಲೈವ್ ಕಾಣಲಿವೆ, ಇದು ಅಯೋಧ್ಯೆಯಲ್ಲಿ ಏನು ನಡೆಯುತ್ತಿದೆ ಎಂಬುದರ ಜತೆಗೆ ದೇಶ ಮತ್ತು ಪ್ರಪಂಚದ ಕೆಲವು ಭಾಗಗಳಲ್ಲೂ ಇದಕ್ಕೆ ಜತೆಯಾಗಿ ಕಾರ್ಯಕ್ರಮಗಳ ಜರುಗುತ್ತವೆ ಎಂಬುದನ್ನು ತೋರಿಸುತ್ತದೆ ಎಂದು ಆರ್‌ಎಸ್‌ಎಸ್ ಮೂಲಗಳು ಹೇಳಿವೆ.

    ರಾಮ ಮಂದಿರದ ಉದ್ಘಾಟನೆಯು ಬಿಜೆಪಿಗೆ ಮೂರು ದಶಕಗಳಿಗೂ ಹೆಚ್ಚು ಕಾಲ ತಾನು ಪ್ರತಿಪಾದಿಸಿಕೊಂಡು ಬಂದ ಪ್ರಮುಖ ಸೈದ್ಧಾಂತಿಕ ಸಂಗತಿಯ ಅನುಷ್ಠಾನವಾಗಿದೆ. ಇದು ಅಡ್ವಾಣಿ ನೇತೃತ್ವದ ರಾಮ ಮಂದಿರ ಚಳವಳಿಯಾಗಿದ್ದು, ರಾಷ್ಟ್ರೀಯ ಮಟ್ಟದಲ್ಲಿ ರಾಜಕೀಯ ಅಧಿಕಾರ ಗಳಿಸಿಕೊಳ್ಳಲು ಉತ್ತೇಜನ ನೀಡುವ ವಿಷಯವಾಗಿ ಹೊರಹೊಮ್ಮಿತು.

    ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದುಪಡಿಸಿದ್ದಲ್ಲದೆ, ಬಿಜೆಪಿ ಈಡೇರಿಸಿದೆ ಎಂಬುದಕ್ಕೆ ದೇವಾಲಯ ಮತ್ತೊಂದು ಪುರಾವೆಯಾಗಿದೆ ಎಂಬ ಸಂದೇಶವನ್ನು ಅಯೋಧ್ಯೆ ರಾಮ ಮಂದಿರ ನಿರ್ಮಾಣವು ಲೋಕಸಭೆ ಚುನಾವಣೆಯ ಪೂರ್ವದಲ್ಲಿ ರವಾನಿಸಲಿದೆ ಎಂದು ಬಿಜೆಪಿ ಪಾಳಯ ಭಾವಿಸಿದೆ.

    2024 ರ ಏಪ್ರಿಲ್-ಮೇವರೆಗೆ ನಡೆಯಲಿರುವ ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ಬಿಜೆಪಿ ಹೈಲೈಟ್ ಮಾಡುವ ವಿಷಯಗಳಲ್ಲಿ ದೇವಸ್ಥಾನವು ಒಂದಾಗಿರಬಹುದು.

    “ದೇವಾಲಯವು ಕೇವಲ ಸೈದ್ಧಾಂತಿಕ ಸಮಸ್ಯೆಯನ್ನು ಪರಿಹರಿಸಲು ಅಲ್ಲ. ಇತರ ಪಕ್ಷಗಳಿಗಿಂತ ಭಿನ್ನವಾಗಿ ಬಿಜೆಪಿ ತಾನು ಭರವಸೆ ನೀಡಿದ್ದನ್ನು ಈಡೇರಿಸುತ್ತದೆ ಎಂದು ಜನರಿಗೆ ಹೇಳುವುದಾಗಿದೆ. 81 ಕೋಟಿ ಜನರಿಗೆ ಉಚಿತ ಆಹಾರ ಧಾನ್ಯ ನೀಡುವುದು, ಕೋವಿಡ್ ವ್ಯಾಕ್ಸಿನೇಷನ್ ಖಾತ್ರಿಪಡಿಸುವುದು, ರಾಮ ಮಂದಿರವು ಅಂತಿಮವಾಗಿ ರಿಯಾಲಿಟಿ ಆಗಿರುವುದು ಅಥವಾ 370 ನೇ ವಿಧಿ ರದ್ದತಿ ಸಂಗತಿಗಳು… ಹೀಗೆ ಮತದಾರರ ಮನಸ್ಸಿನಲ್ಲಿ ಹಲವಾರು ವಿಷಯಗಳು ‘ಮೋದಿಯವರ ಭರವಸೆ’ಗಳಾಗಿ ಸೇರಿಕೊಳ್ಳುತ್ತವೆ. ಯಾವಾಗಲೂ ಬಿಜೆಪಿಯು ಭರವಸೆಗಳನ್ನು ನೆರವೇರಿಸುತ್ತದೆ ಎಂಬ ಸಂದೇಶವನ್ನು ಪಕ್ಷವು ಎಲ್ಲೆಡೆ ಮತದಾರರಿಗೆ ತಲುಪಿಸುತ್ತಿದೆ’ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

    ಅಪಘಾತ ಸ್ಥಳಕ್ಕೆ ಧಾವಿಸುತ್ತಿದ್ದಾಗ ಮತ್ತೊಂದು ಅಪಘಾತ: ಒಂದೇ ಕುಟುಂಬದ ನಾಲ್ವರು ಬಲಿ ತೆಗೆದುಕೊಂಡ ದಟ್ಟ ಮಂಜು

    700 ರೂಪಾಯಿಗೆ ಥಾರ್​ ಕಾರು ಕೇಳಿದ ಪುಟಾಣಿ: ವಾಹನ ಉದ್ಯಮಿ ಆನಂದ್ ಮಹೀಂದ್ರಾ ಹೇಳಿದ್ದೇನು? ಇಂಟರ್​ನೆಟ್​ ಬಳಕೆದಾರರ ಆಕರ್ಷಕ ಸಲಹೆಗಳೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts