More

    ಲೋಕಸಭೆ ಚುನಾವಣೆಗೆ 10 ಭರವಸೆ

    ಸೊರಬ: ರಾಜ್ಯ ಸರ್ಕಾರ ಐದು ಗ್ಯಾರಂಟಿಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದೆ. ಲೋಕಸಭೆ ಚುನಾವಣೆ ಬಳಿಕ ದೇಶಾದ್ಯಂತ 10 ಯೋಜನೆಗಳನ್ನು ಜಾರಿಗೆ ತರುವುದಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ೋಷಿಸಿದೆ ಎಂದು ಯೋಜನೆಗಳ ಅನುಷ್ಠಾನ ಪ್ರಾಧಿಕಾರ ತಾಲೂಕು ಸಮಿತಿ ಅಧ್ಯಕ್ಷ ಜೈಶೀಲಪ್ಪ ಗೌಡ ಅಂಕರವಳ್ಳಿ ಹೇಳಿದರು.

    ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಹಾಗೂ ಮುಖಂಡರ ಸಭೆಯಲ್ಲಿ ಮಾತನಾಡಿ, ಬೂತ್ ವ್ಯಾಪ್ತಿಯಲ್ಲಿ ಸಮಿತಿ ಅಧ್ಯಕ್ಷರ ತಂಡ ಹಾಗೂ ಕಾರ್ಯಕರ್ತರು ಲಾನುಭವಿಗಳ ಮನೆ ಮನೆಗೆ ತೆರಳಿ ಯೋಜನೆಯ ಲಾಭವನ್ನ ಮತಗಳಾಗಿ ಪರಿವರ್ತಿಸಬೇಕು. ಸರ್ಕಾರದ ಸಾಧನೆ ಜನರಿಗೆ ತಿಳಿಸಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಬೇಕು ಎಂದು ತಿಳಿಸಿದರು.
    ದೇಶದ ಸಮಗ್ರ ಅಭಿವೃದ್ಧಿ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ಜನರ ಒಲವು ಕಾಂಗ್ರೆಸ್ ಪರವಾಗಿದೆ. ಈ ಬಾರಿ ಶಿವಮೊಗ್ಗ ಕ್ಷೇತ್ರದಿಂದ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಗೆಲ್ಲುವ ಮೂಲಕ ಬಂಗಾರಪ್ಪ ಕಾಲದ ವೈಭವದ ರಾಜಕಾರಣ ಮರುಕಳಿಸಲಿದೆ ಎಂದರು.
    ತಾಲೂಕಿನಲ್ಲಿ ಗೃಹಜ್ಯೋತಿ ಯೋಜನೆಯಡಿ 48 ಸಾವಿರ ಲಾನುಭವಿಗಳು, ಅನ್ನಭಾಗ್ಯ ಯೋಜನೆಯಡಿ 46 ಸಾವಿರ, ಗೃಹಲಕ್ಷ್ಮಿ 49 ಸಾವಿರ, ಯುವನಿಧಿಯಲ್ಲಿ 643 ಜನ ಲಾನುಭವಿಗಳು ಲಾಭ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.
    ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ, ಆನವಟ್ಟಿ ಬ್ಲಾಕ್ ಅಧ್ಯಕ್ಷ ಸದಾನಂದ ಗೌಡ, ಎಚ್.ಗಣಪತಿ, ಕೆ.ವಿ.ಗೌಡ, ತಬಲಿ ಬಂಗಾರಪ್ಪ, ಪ್ರಭಾಕರ ಶಿಗ್ಗಾ, ಸುಜಾತಾ ಜೋತಾಡಿ, ವಿಶಾಲಕ್ಷಮ್ಮ, ಎಂ.ಡಿ.ಶೇಖರ್, ಮಂಜುನಾಥ್ ತಲಗಡ್ಡೆ, ಶಿವಪುತ್ರಪ್ಪ, ಪ್ರಕಾಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts