

ಸೌಥಾಂಪ್ಟನ್: ಮಹಾಮಾರಿ ಕರೊನಾ ವೈರಸ್ ರುದ್ರತಾಂಡವಕ್ಕೆ ಇಡೀ ವಿಶ್ವವೇ ಬೆಚ್ಚಿಬಿದ್ದಿದೆ. ವೈದ್ಯಕೀಯ ಸಿಬ್ಬಂದಿ ಹಗಳಿರುಳು ಈ ಮಹಾಮಾರಿ ವಿರುದ್ಧ ಹೋರಾಡುತ್ತಿದ್ದಾರೆ. ಇವರಿಗೆ ಕರೊನಾ ವಾರಿಯರ್ಸ್ ಅಂತಾನೇ ಬಿರುದು ನೀಡಲಾಗಿದೆ. ಇದಕ್ಕೆ ವಿಭಿನ್ನವಾಗಿ ನಿಂತಿರುವ ಇಂಗ್ಲೆಂಡ್ ಕ್ರಿಕೆಟಿಗರು ಕೋವಿಡ್ ವಾರಿಯರ್ಸ್‌ನ ಹೆಸರುಗಳನ್ನು ತಮ್ಮ ಅಭ್ಯಾಸದ ಜೆರ್ಸಿಗಳ ಹಿಂದೆ ಬರೆಸಿಕೊಳ್ಳುವ ಮೂಲಕ ಅವರ ಸೇವೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇಂಗ್ಲೆಂಡ್‌ನ ಡಾರ್ಲಿಂಗ್ಟನ್‌ನ ದುರ್‌ಹ್ಯಾಂನಲ್ಲಿರುವ ನ್ಯಾಷನಲ್ ಹೆಲ್ತ್ ಸರ್ವೀಸ್ (ಎನ್‌ಎಚ್‌ಎಸ್) ಟ್ರಸ್ಟ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಮೂಲಕ ಡಾ.ವಿಕಾಸ್ ಕುಮಾರ್ ಹೆಸರನ್ನು ಇಂಗ್ಲೆಂಡ್ ನಾಯಕ ಬೆನ್‌ಸ್ಟೋಕ್ಸ್ ಬರೆಸಿಕೊಂಡಿದ್ದಾರೆ.
ಇದನ್ನೂ ಓದಿ: VIDEO | ಧೋನಿ ಕ್ರಿಕೆಟ್ ಆಡದೆ ಭರ್ತಿ ಒಂದು ವರ್ಷ!
ನನಗೆ ಕ್ರಿಕೆಟ್ ಆಟಗಾರನಾಗಬೇಕು ಎಂದು ಕನಸಿತ್ತು. ಆದರೆ, ನನ್ನ ಸಹೋದರರು ಅವರಂತೆಯೇ ವೈದ್ಯನಾಗಬೇಕೆಂದು ಹಂಬಲಿಸಿದರು. ನಾನು ವೈದ್ಯಕೀಯ ಪದವಿ ಓದುತ್ತಿದ್ದಾಗ ಕಾಲೇಜು ತಂಡದ ಪರ ಸಾಕಷ್ಟು ಕ್ರಿಕೆಟ್ ಆಡಿದ್ದೇನೆ. 3 ವರ್ಷಗಳ ಹಿಂದೆ ನವದೆಹಲಿಯಲ್ಲಿ ಭಾರತ-ಶ್ರೀಲಂಕಾ ನಡುವಿನ ಪಂದ್ಯದಲ್ಲಿ ವೈದ್ಯಕೀಯ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸಿದ್ದೆ ಎಂದು ಮೆಲುಕು ಹಾಕಿದ್ದಾರೆ.