

ನವದೆಹಲಿ: ಐಪಿಎಲ್ ಶುರುವಾಗುವುದಕ್ಕೂ ಮುಂಚಿನಿಂದಲೂ ಒಂದಲ್ಲ ಒಂದು ವಿಚಾರಕ್ಕೆ ಸದ್ದು ಮಾಡುತ್ತಿರುವ ಹಾರ್ದಿಕ್ ಪಾಂಡ್ಯ ಕಳೆದ ಕೆಲ ದಿನಗಳಿಂದ ಮತ್ತೊಂದು ವಿಚಾರವಾಗಿ ಸದ್ದು ಮಾಡುತ್ತಿದ್ದಾರೆ. ಪತ್ನಿ ನತಾಶಾಗೆ ಹಾರ್ದಿಕ್ ಡಿವೋರ್ಸ್ ಕೊಡುತ್ತಾರೆ ಎಂದು ಹೇಳಲಾಗಿದ್ದು, ಇದಕ್ಕೆ ಪುಷ್ಠಿ ನೀಡುವಂತೆ ಇದೀಗ ನತಾಶಾ ಅವರು ಪೋಸ್ಟ್ ಒಂದನ್ನು ಶೇರ್ ಮಾಡಿದ್ದು, ವಿಚ್ಛೇದನ. ವದಂತಿಗೆ ಇಂಬು ನೀಡಿದೆ.
ಮೇ 24ರಂದು ರೆಡ್ಡಿಟ್ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಇವರು ವಿಚ್ಚೇದನ ಸುದ್ದಿಗೆ ಪುಷ್ಠಿ ನೀಡಿದೆ. ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಸ್ಟಾಂಕೋವಿಕ್ 2020 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದಾದ ಬಳಿಕ ಪ್ರತಿ ಸೀಸನ್ ಐಪಿಎಲ್ನಲ್ಲೂ ನತಾಶಾ ಕಾಣಿಸಿಕೊಂಡಿದ್ದರು. ಆದರೆ ಈ ಬಾರಿಯ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿ ಪಾಂಡ್ಯ ಪಾದಾರ್ಪಣೆ ಮಾಡಿದರೂ, ನತಾಶಾ ಮಾತ್ರ ಕಾಣಿಸಿಕೊಂಡಿರಲಿಲ್ಲ. ಅಲ್ಲದೆ ಯಾವುದೇ ಪಂದ್ಯವನ್ನು ವೀಕ್ಷಿಸಲು ಅವರು ಆಗಮಿಸಿರಲಿಲ್ಲ.
ಅತ್ತ ನತಾಶಾ ಸ್ಟಾಂಕೋವಿಕ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಿಂದ ಪಾಂಡ್ಯ ಉಪನಾಮವನ್ನು ತೆಗೆದು ಹಾಕಿದ್ದಾರೆ. ಅಲ್ಲದೇ ಇತ್ತೀಚಿನ ದಿನಗಳಲ್ಲಿ ಹಾರ್ದಿಕ್ ಪಾಂಡ್ಯ ಜೊತೆಗಿನ ಒಂದೇ ಒಂದು ಫೋಟೋವನ್ನು ಶೇರ್ ಮಾಡಿಲ್ಲ. ಈ ಎಲ್ಲಾ ಕಾರಣಗಳಿಂದಾಗಿ ಇದೀಗ ಇಬ್ಬರು ಡೈವೋರ್ಸ್ ಆಗಲಿದ್ದಾರೆ ಎಂದು ಹೇಳಲಾಗಿದೆ. ಇತ್ತ ನತಾಶಾ ಅವರು ಸಾಮಾಜಿಕ ಜಾಲತಾಣದಲ್ಲಿ ಸಮ್ ಒನ್ ಇಸ್ ರೆಡಿ ಟು ಗೆಟ್ ಆನ್ ದಿ ಸ್ಟ್ರೀಟ್ಸ್ ಎಂಬ ಸ್ಟೋರಿಯನ್ನು ಶೇರ್ ಮಾಡಿದ್ದು, ವಿಚ್ಛೇದನ. ವದಂತಿಗೆ ಮತ್ತಷ್ಟು ಪುಷ್ಠಿ ನೀಡಿದೆ.
ವಿಚ್ಛೇದನದ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ತನ್ನ ಆಸ್ತಿಯಲ್ಲಿ 70 ಪ್ರತಿಶತವನ್ನು ನತಾಶಾಗೆ ನೀಡಬೇಕಾಗಬಹುದು. ಏಕೆಂದರೆ ಪಾಂಡ್ಯ ಅವರ ಹೆಂಡತಿ ಸರ್ಬಿಯಾ ದೇಶದವರು. ಹೀಗಾಗಿ ಅವರು ಜೀವನಾಂಶವನ್ನು ಸರ್ಬಿಯನ್ ದಿನಾರ್ನಲ್ಲಿ ಪಡೆದುಕೊಳ್ಳುವ ಸಾಧ್ಯತೆಯಿದೆ. ಈ ಎಲ್ಲಾ ಕಾರಣಗಳಿಂದಾಗಿ ಪಾಂಡ್ಯ ತಮ್ಮ ಮುಂದಿನ ನಡೆಯ ಬಗ್ಗೆ ಎಲ್ಲೂ ಕೂಡ ಮಾತನಾಡುತ್ತಿಲ್ಲ ಎಂದು ವರದಿಯಾಗಿದೆ. ಮುಂದಿನ ದಿನಗಳಲ್ಲಿ ಇದು ಯಾವ ಹಂತ ತಲುಪಲಿದೆ ಎಂದು ಕಾದು ನೋಡಬೇಕಿದೆ.