ಬುಮ್ರಾ/ಸಿರಾಜ್​ನನ್ನು ತಂಡದಿಂದ ಕೈ ಬಿಟ್ಟು ಈತನಿಗೆ ಅವಕಾಶ ಕೊಡಿ; ಯುವ ವೇಗಿ ಪರ ಬ್ಯಾಟ್​ ಬೀಸಿದ RCB ಸ್ಟಾರ್​

Bumrah Siraj
Published on

ಕಾನ್ಪುರ: ಇಲ್ಲಿನ ಗ್ರೀನ್​ ಪಾರ್ಕ್​ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಟೆಸ್ಟ್​ ಸರಣಿಯ ಎರಡನೇ ಪಂದ್ಯ ನಡೆಯಲಿದ್ದು, ಉಭಯ ತಂಡಗಳು ಈಗಾಗಲೇ ಭರ್ಜರಿ ಸಿದ್ಧತೆ ನಡೆಸಿವೆ. ಮೊದಲ ಪಂದ್ಯ ಗೆದಗದು ಸಂಪೂರ್ಣ ವಿಶ್ವಾಸದಲ್ಲಿರುವ ಭಾರತ ತಂಡವು ಎರಡನೇ ಮ್ಯಾಚ್​ನಲ್ಲೂ ತನ್ನ ಗೆಲುವಿನ ಓಟವನ್ನು ವಿಸ್ತರಿಸಲು ಯೋಜನೆ ರೂಪಿಸಿದ್ದು, ಸರಣಿ ಗೆಲ್ಲುವ ತವಕದಲ್ಲಿದೆ. ಇತ್ತ ಬಾಂಗ್ಲಾ ಕೂಡ ಭಾರತಕ್ಕೆ ಕೌಂಟರ್​ ಕೊಡಲು ಸಜ್ಜಾಗಿದ್ದು, ಪಂದ್ಯ ಶುರುವಾದ ಬಳಿಕ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ.

ಸರಣಿಯ ಮೊದಲ ಪಂದ್ಯದಲ್ಲಿ ಆಡಿದ ತಂಡವನ್ನು ಎರಡನೇ ಮ್ಯಾಚ್​ಗೂ ಮುಂದುವರೆಸುವುದು ಖಚಿತ ಎಂದು ಹೇಳಲಾಗಿದ್ದು, ತಂಡದಲ್ಲಿ ಕೆಲವು ಬದಲಾವಣೆಗಳನ್ನು ಮಾಡಬಹುದು ಎಂದು ಹೇಳಲಾಗಿದೆ. ಆದರೆ, ಈ ಬಗ್ಗೆ ಮ್ಯಾನೇಜ್​​ಮೆಂಟ್​ ಏನು ಹೇಳಿಲ್ಲವಾದರೂ ವೇಗಿ ಕೋಟಾದಲ್ಲಿ ಆರ್​ಸಿಬಿ ವೇಗಿ ಯಶ್​ ದಯಾಳ್​ಗೆ ಅವಕಾಶ ನೀಡಬೇಕೆಂದು ಆಗ್ರಹ ಕೇಳಿ ಬಂದಿದೆ. ಈ ಬಗ್ಗೆ ಮಾಜಿ ಕ್ರಿಕೆಟಿಗ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು, ಬುಮ್ರಾ, ಸಿರಾಜ್​ ಬದಲಿಗೆ ಈತನಿಗೆ ಅವಕಾಶ ಕೊಡಿ ಎಂದು ಆಗ್ರಹಿಸಿದ್ದಾರೆ.

Yash Dayal

ANIಗೆ ನೀಡಿರುವ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಪಾರ್ಥೀವ್ ಪಟೇಲ್​​, ಯಶ್​ ದಯಾಳ್​ನಂತಹ ಉತ್ತಮ ಎಡಗೈ ವೇಗಿಯನ್ನು ನೋಡಲು ಇದೊಂದು ಉತ್ತಮ ಅವಕಾಶವಾಗಿದ್ದು, ಭಾರತದ ಪರ ಎಡಗೈ ವೇಗಿಗಳನ್ನು ಆಡಿಸಿ ತುಂಬಾ ಸಮಯವಾಗಿದೆ. ಆದ್ದರಿಂದ ಅವರಿಗೆ ಅವಕಾಶ ಸಿಕ್ಕರೆ ಅದು ಒಳ್ಳೆಯದು ಎಂದು ನಾನು ಭಾವಿಸುತ್ತೇನೆ.

ಆತ ಒಬ್ಬ ಅದ್ಭುತ ಆಟಗಾರನಾಗಿದ್ದು, ಆತನನ್ನು ಎರಡನೇ ಟೆಸ್ಟ್​ ಪಂದ್ಯದಲ್ಲಿ ಕಣಕ್ಕಿಳಿಸುವುದರಿಂದ ತಂಡಕ್ಕೆ ಯಾವುದೇ ಹಾನಿಯಾಗುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಸರ್ಫರಾಜ್ ಮತ್ತು ಧ್ರುವ್ ತಂಡಕ್ಕೆ ಮರಳುತ್ತಾರೆ ಎಂದು ನಾನು ಭಾವಿಸುವುದಿಲ್ಲ. ರಿಷಭ್ ಈಗಷ್ಟೇ ಪುನರಾಗಮನ ಮಾಡಿದ್ದಾರೆ. ಇಬ್ಬರೂ ಅತ್ಯಂತ ಪ್ರತಿಭಾವಂತ ಆಟಗಾರರು ಮತ್ತು ಟೆಸ್ಟ್ ಕ್ರಿಕೆಟ್‌ಗೆ ತುಂಬಾ ಸಿದ್ಧರಾಗಿದ್ದಾರೆ. ಆದರೆ ಅವರು ತಮ್ಮ ಅವಕಾಶಗಳಿಗಾಗಿ ಕಾಯಬೇಕಾಗಿದೆ ಎಂದು ಪಾರ್ಥೀವ್ ಪಟೇಲ್ ANIಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net