ನವದೆಹಲಿ: ಜೂನ್ 29ರಂದು ಮುಕ್ತಾಯಗೊಂಡ ಟಿ20 ವಿಶ್ವಕಪ್ನಲ್ಲಿ (T20 WorldCup) ಭಾರತ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಸುದೀರ್ಘ ಕಪ್ ಬರವನ್ನು ನೀಗಿಸಿತ್ತು. ಯುಎಸ್ಎಸ್-ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ನಡೆದ ಈ ಟೂರ್ನಿಯಲ್ಲಿ ಭಾರತಕ್ಕೆ ಫೈನಲ್ನಲ್ಲಿ ದಕ್ಷಿಣ ಆಫ್ರಿಕಾ ಎದುರಾಗಿತ್ತು. ರೋಚಕ ಹಣಾಹಣಿಯಲ್ಲಿ ಗೆದುದ ಬೀಗಿದ ಭಾರತ 17 ವರ್ಷಗಳ ಬಳಿಕ ಎರಡನೇ ಬಾರಿಗೆ ಕಪ್ ಜಯಿಸುವಲ್ಲಿ ಯಶಸ್ವಿಯಾಗಿದ್ದು, ಟಿ20 ವಿಶ್ವಕಪ್ ಗೆಲುವಿನ ಬಳಿಕ ಎರಡನೇ ಸರಣಿಯನ್ನು ಆಡುತ್ತಿದೆ. ಆದರೆ, ದಕ್ಷಿಣ ಆಫ್ರಿಕಾ ಮಾತ್ರ ಯಾಕೋ ಸೋಲಿನ ಆಘಾತದಿಂದ ಹೊರಬಂದಂತೆ ಕಾಣುತ್ತಿಲ್ಲ.
ಏಕೆಂದರೆ ಭಾರತ ಟಿ20 ವಶಿ್ವಕಪ್ ಗೆದ್ದ ಬಳಿಕ ಸೂರ್ಯಕುಮಾರ್ ಹಿಡಿದ ಕ್ಯಾಚ್ನಲ್ಲಿ ಮೋಸದಾಟವಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಕೆಲ ದಿನಗಳ ಕಾಲ ವ್ಯಾಪಕ ಚರ್ಚೆಯೂ ಸಹ ನಡೆಯಿತು. ಇದೀಗ ಸ್ವತಃ ಡೇವಿಡ್ ಮಿಲ್ಲರ್ ಈ ಬಗ್ಗೆ ಮಾತನಾಡಿದ್ದು, ಕ್ರೀಡೆ ಎಲ್ಲರಿಗೂ ಸೂಕ್ತವಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ CBI ಪವರ್ ಕಟ್ ಮಾಡಿದ ಕಾಂಗ್ರೆಸ್ ಸರ್ಕಾರ; Not because of MUDA ಎಂದ ಸಚಿವರು
ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ ಮಿಲ್ಲರ್, ತಂಡವಾಗಿ ಉತ್ತಮ ಅಭಿಯಾನವನ್ನು ಮಾಡಿದ ನಾವು ನಿಜವಾಗಿಯೂ ಹೋರಾಡಿದ್ದೇವೆ. ನಾವು ಸ್ಪರ್ಧಾತ್ಮಕ ಕ್ರಿಕೆಟ್ ಆಡಿದ್ದೇವೆ ಮತ್ತು ನಾವು ಯಾವಾಗಲೂ ಮಿಶ್ರಣದಲ್ಲಿದ್ದೇವೆ. ಆದರೆ ಕ್ರೀಡೆಯು ಎಲ್ಲರಿಗೂ ನ್ಯಾಯೋಚಿತವಲ್ಲ. ಈ ಹಿಂದೆ ಹಲವಾರು ಕ್ರೂರವಾದ ಸಂದರ್ಭಗಳು ಇದ್ದವು ಮತ್ತು ನಾನು ಅದನ್ನು ಕಠಿಣವಾಗಿ ತೆಗೆದುಕೊಂಡಿದ್ದೇನೆ. ಕ್ರೀಡೆ ಎಂದಮೇಲೆ ಸೋಲು-ಗೆಲುವು ಖಚಿತ.
ನಾನು ನಿಜವಾಗಿಯೂ ನನ್ನ ದೇಶಕ್ಕೆ ನಿರಾಸೆ ಮಾಡಿದ್ದೇನೆ. ಏಕೆಂದರೆ ಈ ರೀತಿಯ ಸನ್ನಿವೇಶಗಳೊಂದಿಗೆ, ನೀವು ಅಂತಿಮವಾಗಿ ನಿಮ್ಮನ್ನು ಹೇಗೆ ಮರಳಿ ಪಡೆಯುತ್ತೀರಿ ಮತ್ತು ಅದರಿಂದ ನೀವು ಏನು ಕಲಿಯುತ್ತೀರಿ ಎಂಬುದರ ಬಗ್ಗೆ ನಾನು ಭಾವಿಸುತ್ತೇನೆ. ಕೆಲವೊಮ್ಮೆ ನೀವು ವಿಭಿನ್ನವಾಗಿ ಏನನ್ನೂ ಮಾಡಲು ಸಾಧ್ಯವಿಲ್ಲ. ಅವರು ಉತ್ತಮ ಕ್ರಿಕೆಟ್ ಆಡಿದ್ದಾರೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಸ್ಪೋಟಕ ವ್ಯಾಟರ್ ಡೇವಿಡ್ ಮಿಲ್ಲರ್ ಹೇಳಿದ್ದಾರೆ.