

ನವದೆಹಲಿ: 18ನೇ ಆವೃತ್ತಿಯ ಐಪಿಎಲ್ (IPL) ಆರಂಭವಾಗುವುದಕ್ಕೆ ತಿಂಗಳುಗಳು ಬಾಕಿ ಉಳಿದಿದ್ದು, ಒಂದಿಲ್ಲೊಂದು ಕಾರಣಕ್ಕೆ ಕ್ರೀಡಾಭಿಮಾನಿಗಳ ಗಮನ ಸೆಳೆಯುತ್ತಿದೆ. ರಿಟೇನ್ಗೆ (Retain) ಸಂಬಂಧಿಸಿದಂತೆ ಬಿಸಿಸಿಐ ಈ ವಾರ ನೂತನ ನಿಯಮವನ್ನು ಪ್ರಕಟಿಸಲಿದ್ದು, ಫ್ರಾಂಚೈಸಿಗಳು ಕಾತುರದಿಂದ ಕಾಯುತ್ತಿವೆ. ಏಕೆಂದರೆ ಐದು ಆಟಗಾರರನ್ನು ಉಳಿಸಿಕೊಳ್ಳಬೇಕೆಂಬ ನಿಯಮ ಏನಾದರೂ ಜಾರಿಯಾದಲ್ಲಿ ಫ್ರಾಂಚೈಸಿಗಳು ಉಳಿದ ಆಟಗಾರರನ್ನು ಬಿಡಬೇಕಾಗುತ್ತದೆ. ತಂಡಗಳು ತಮ್ಮ ಕೋರ್ ಅನ್ನು ಹೇಗೆ ಉಳಿಸಿಕೊಳ್ಳುತ್ತವೆ ಎಂಬುದರ ಕುರಿತು ಸಾಕಷ್ಟು ಜಿಜ್ಞಾಸೆ ಹುಟ್ಟಿಕೊಂಡಿದೆ. ಇದೆಲ್ಲದರ ನಡುವೆ ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್ ವೈರಲ್ ಆಗಿದೆ.
ಅದೇನೆಂದರೆ, ಡೆಲ್ಲಿ ಕ್ಯಾಪಿಟಲ್ಸ್ನ (Delhi Capitals) ನಾಯಕ ರಿಷಭ್ ಪಂತ್ ತಮ್ಮ ಮ್ಯಾನೇಜರ್ ಮೂಲಕ ಆರ್ಸಿಬಿ ಮ್ಯಾನೇಜ್ಮೆಂಟ್ಅನ್ನು ಸಂಪರ್ಕಿಸಿದ್ದಾರೆ. ಅಲ್ಲದೇ ಪಂತ್, ಆರ್ಸಿಬಿ ತಂಡದ ನಾಯಕರಾಗಲು ಬಯಸಿದ್ದರು. ಆದರೆ, ಆರ್ಸಿಬಿ (RCB) ಮ್ಯಾನೇಜ್ಮೆಂಟ್ ಪಂತ್ ಅವರ ಬೇಡಿಕೆಗೆ ಸಮ್ಮತಿಸಲಿಲ್ಲ. ಅಲ್ಲದೇ ಪಂತ್ ಆರ್ಸಿಬಿಗೆ ಬರುವುದು ವಿರಾಟ್ ಕೊಹ್ಲಿಗೆ ಇಷ್ಟವಿಲ್ಲ ಎಂದು ರಾಜೀವ್ ಎಂಬುವವರು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದರು. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಪಂತ್ ಸುದ್ದಿಯನ್ನು ಅಲ್ಲಗೆಳೆದಿದ್ದಾರೆ.
ಇದು ಶುದ್ಧ ಸುಳ್ಳು. ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಸುಳ್ಳು ಸುದ್ದಿಗಳನ್ನು ಯಾಕೆ ಹಬ್ಬಿಸುತ್ತೀರಿ. ಸಂವೇದನಾಶೀಲ ವ್ಯಕ್ತಿಗಳು ತುಂಬಾ ಕೆಟ್ಟವರು. ಯಾವುದೇ ಕಾರಣಕ್ಕೂ ನಂಬಲಾಗದ ವಾತಾವರಣ ನಿರ್ಮಿಸಬೇಡಿ. ಇದು ಮೊದಲ ಬಾರಿ ಅಲ್ಲ ಮತ್ತು ಕೊನೆಯದಾಗಿರುವುದಿಲ್ಲ. ಬರೆಯುವ ಮೊದಲು ದಯವಿಟ್ಟು ನಿಮ್ಮ ಆಪಾದಿತ ಮೂಲಗಳನ್ನು ಪರಿಶೀಲಿಸಿ. ದಿನೇ ದಿನೇ ಈ ರೀತಿಯ ಕೆಲಸಗಳು ಹೆಚ್ಚಾಗುತ್ತಿವೆ. ಈ ರೀತಿಯಾಗಿ ಸುಳ್ಳು ಸುದ್ದಿ ಹಬ್ಬಿಸುವವರಿಗೆ ಈ ಹೇಳಿಕೆ ಅನ್ವಯವಾಗುತ್ತದೆ ಎಂದು ಪಂತ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಅಪಘಾತವಾದ 635 ದಿನಗಳ ಬಳಿಕ ಟೆಸ್ಟ್ ಕ್ರಿಕೆಟ್ಗೆ ಮರಳಿದ ಬಳಿಕ ಪಂತ್ ಭರ್ಜರಿ ಶತಕ ಸಿಡಿಸುವ ಮೂಲಕ ಎದುರಾಳಿಗಳಿಗೆ ಖಡಕ್ ಸಂದೇಶ ರವಾನಿಸಿದ್ದಾರೆ. ಮುಂಬರುಬ ವಾರ್ಡರ್ ಗವಾಸ್ಕರ್ ಟ್ರೋಫಿ, ಚಾಂಪಿಯನ್ಸ್ ಟ್ರೋಫಿ, ಐಪಿಎಲ್, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲೂ ಕೂಡ ಈ ಫಾರ್ಮ್ ಮುಂದುವರೆಯಲಿದೆಯಾ ಎಂದು ಕಾದು ನೋಡಬೇಕಿದೆ.