

ಪಟ್ನಾ: ಬಿಹಾರದಲ್ಲಿ ಆಚರಿಸಲಾಗುವ ಪ್ರತಿಷ್ಠಿತ ಜಿತಿಯಾ (Jitiya) ವ್ರತದ ವೇಳೆ ನದಿಗೆ ಸ್ನಾನಕ್ಕೆಂದು ತೆರಳಿದ್ದ 46 ಮಂದಿ ನೀರಿನಲ್ಲಿ ಮುಳುಗಿ (Drowned) ಮೃತಪಟ್ಟಿರುವ (Death Case) ಬಗ್ಗೆ ವರದಿಯಾಗಿದೆ. ಮೃತರ ಪೈಕಿ 37 ಮಕ್ಕಳಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಹಾರದ ಪೂರ್ವ, ಪಶ್ಚಿಮ ಚಂಪಾರಣ್, ಔರಂಗಾಬಾದ್, ಕೈಮೂರ್, ಬಕ್ಸರ್, ಸಿವಾನ್, ರೋಹ್ತಾಸ್, ಸರನ್, ಪಾಟ್ನಾ, ವೈಶಾಲಿ, ಮುಜಾಫರ್‍ಪುರ, ಸಮಸ್ತಿಪುರ್, ಗೋಪಾಲ್‍ಗಂಜ್ ಮತ್ತು ಅಗರ್ವಾಲ್ ಜಿಲ್ಲೆಗಳಲ್ಲಿ ಈ ದುರ್ಘಟನೆ (Tragedy) ನಡೆದಿದ್ದು, ರಕ್ಷಣಾ ಕಾರ್ಯಾಚರಣೆ (Rescue Operation) ಭರದಿಂದ ಸಾಗಿದೆ.
ಜಿತಿಯಾ ಹಬ್ಬವನ್ನು ಮಕ್ಕಳ (Children) ಯೋಗಕ್ಷೇಮ ಮತ್ತು ಸಮೃದ್ಧಿಗಾಗಿ ತಾಯಂದಿರು (Mother) ಆಚರಿಸುತ್ತಾರೆ. ಮಕ್ಕಳು, ತಮ್ಮ ತಾಯಂದಿರೊಂದಿಗೆ ವಿವಿಧ ಜಲಮೂಲಗಳಲ್ಲಿ ಸ್ನಾನಕ್ಕೆ ತೆರಳಿದ್ದಾಗ ಈ ಅವಘಡ ಸಂಭವಿಸಿದ್ದು, ಮುಖ್ಯಮಂತ್ರಿ ನಿತೀಶ್ ಕುಮಾರ್ ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ.