ಜಾಗಿಂಗ್​ ಮಾಡುವಾಗ ಕುಸಿದು ಬಿದ್ದು ಯುವಕ ಸಾವು; Heart Wrenching Video Goes Viral

Heart Attack
Published on

ಅಹಮದಾಬಾದ್: ಇತ್ತೀಚಿನ ವರ್ಷದಲ್ಲಿ ಹೃದಯ ಸಂಬಂಧಿ (Heart Related) ಕಾಯಿಲೆಗಳಿಗೆ ಯುವ ಪೀಳಿಗೆ ಹೆಚ್ಚು ಬಲಿಯಾಗುತ್ತಿದ್ದು, ಈ ಆಘಾತಕಾರಿ ವಿಚಾರ ಪೋಷಕರನ್ನು ಚಿಂತೆಗೆ ದೂಡಿದೆ. ಇದೀಗ ಗುಜರಾತ್​ ಪೊಲೀಸ್​ ನೇಮಕಾರಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಯುವಕನೋರ್ವ ಜಾಗಿಂಗ್​ ಮಾಡುವಾಗ ಹೃದಯಾಘಾತದಿಂದ (Heart Attack) ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಗುಜರಾತ್​ನ ಜಾಮ್‌ನಗರದ ಲಾಲ್‌ಪುರ ತಾಲ್ಲೂಕಿನ ಭರುಡಿಯಾ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಹೇಮಂತ್ ಭಾಯ್ ಜೋಗಲ್ ಎಂದು ಗುರುತಿಸಲಾಗಿದ್ದು, ಯುವಕ ಹೃದಯಾಘಾತದಿಂದ ಕುಸಿದು ಬೀಳುತ್ತಿರುವ ವಿಡಿಯೋ ಹತ್ತಿರದ ಸಿಸಿಟಿವಿ ಒಂದರಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ ಯುವಕ ಹೇಮಂತ್​ ಎಂದಿನಂತೆ ತನ್ನ ಸ್ನೇಹಿತರೊಂದಿಗೆ ಗ್ರಾಮದ ಫೀಲ್ಡ್​ನಲ್ಲಿ ಜಾಗಿಂಗ್​ ಮಾಡುತ್ತಿರುತ್ತಾನೆ. ಎರಡು ಸುತ್ತು ಚೆನ್ನಾಗಿ ಓಡುವ ಯುವಕ ಬಳಿಕ ಸುಸ್ತಾದಂತೆ ಕಾಣುತ್ತಿದ್ದು, ಏಕಾಏಕಿ ಕುಸಿದು ಬೀಳುತ್ತಾನೆ. ಇದನ್ನು ನೋಡಿದ ಸ್ನೇಹಿತರು ಕೂಡಲೇ ಆತನ ರಕ್ಷಣೆಗೆ ಧಾವಿಸುವುದನ್ನು ವೈರಲ್​ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ.

ಯುವಕನ ಸಾವಿಗೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಕಳಿಸಿ ಪ್ರಕರಣವನ್ನ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net