

ಹುಬ್ಬಳ್ಳಿ: ಹುಬ್ಬಳ್ಳಿಯ ಯುವ ಸ್ಕೇಟರ್ ತ್ರಿಷಾ ಪ್ರವೀಣ್ ಜಡಲಾ, ಇಟಲಿಯಲ್ಲಿ (Italy) ಈ ತಿಂಗಳು ನಡೆದ ಪ್ರತಿಷ್ಠಿತ ವಿಶ್ವ ಸ್ಕೇಟ್ ಕ್ರೀಡಾಕೂಟದಲ್ಲಿ (Sports Event) ಕಂಚಿನ ಪದಕ ಗೆಲ್ಲುವ ಮೂಲಕ ತನ್ನ ಜಿಲ್ಲೆ, ರಾಜ್ಯ ಮತ್ತು ದೇಶಕ್ಕೆ ಹಾಗೂ ತಮ್ಮ ಕುಟುಂಬಸ್ಥರಿಗೆ ಹೆಮ್ಮೆ ತಂದಿದ್ದಾರೆ.
ಜಿಲ್ಲೆಯ ಕ್ರೀಡಾ ಸಾಧನೆಯ ಇತಿಹಾಸದ ಪುಸ್ತಕದಲ್ಲಿ ತನ್ನ ಹೆಸರನ್ನು ಸೇರಿಸುವ ಮೂಲಕ ಈ ಅದ್ಭುತ ಸಾಧನೆ ಮಾಡಿದ ಹುಬ್ಬಳ್ಳಿಯ ಮೊದಲ ಮತ್ತು ಏಕೈಕ ಬಾಲಕಿಯಾಗಿದ್ದಾರೆ.
ಇಂದು ಹುಬ್ಬಳಿಗೆ ಆಗಮಿಸಿದ ಅವರನ್ನು ಉದ್ಯಮಿ ಡಾ. ವಿ ಎಸ್ ವಿ ಪ್ರಸಾದ ಅವರು ಸ್ವಾಗತಿಸಿ ಬೆನ್ನು ತಟ್ಟಿ ಪ್ರೋತ್ಸಾಹಿಸಿದರು. ಈ ಸಂದರ್ಭದಲ್ಲಿ ಇವಳ ಯಶಸ್ಸಿಗೆ ನೆರವು ನೀಡಿದ ಉದ್ಯಮಿಗಳಾದ ಡಾ ಆನಂದ ಸಂಕೇಶ್ವರ್ ಮತ್ತು ಇನ್ನೊಬ್ಬ ಉದ್ಯಮಿಯಾದ ಡಾ. ವಿ ಎಸ್ ವಿ ಪ್ರಸಾದ ಅವರನ್ನು ಮತ್ತು ಅಕ್ಷಯ್ ಎನ್ ಕ್ಲೇವ ನಿವಾಸಿಗಳು ಸೇರಿದಂತೆ ಎಲ್ಲರನ್ನೂ ಪದಕ ವಿಜೇತೆ ತ್ರಿಷಾ ಜಡಾಲಾ ಸ್ಮರಿಸಿದ್ದಾರೆ.