ಸಿಎಸ್​ಕೆ ಕ್ಯಾಪ್ಟನ್​ ಸ್ಥಾನಕ್ಕೆ ಧೋನಿ ಅಲ್ಲ ಮೊದಲ ಆಯ್ಕೆ! ಸೆಹ್ವಾಗ್​ ಬಿಚ್ಚಿಟ್ಟ ಶಾಕಿಂಗ್ ಸಂಗತಿ ಇದು

WhatsApp Image 2024-05-18 at 1.07.40 PM
Published on

ಚೆನ್ನೈ: ಕಳೆದ 14 ವರ್ಷಗಳಿಂದ ಐಪಿಎಲ್​ನಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿ ಯಶಸ್ವಿಯಾಗಿರುವ ಮಹೇಂದ್ರ ಸಿಂಗ್ ಧೋನಿ ಅವರ ಆಟದ ವೈಖರಿ, ನಾಯಕತ್ವದ ಬಗ್ಗೆ ಕ್ರಿಕೆಟ್ ಅಭಿಮಾನಿಗಳಿಂದ ಹಿಡಿದು ಕ್ರಿಕೆಟ್​ ದಿಗ್ಗಜರಿಗೂ ಅದೇನೋ ಒಂದು ಹೆಮ್ಮೆ, ಉತ್ಸಾಹ. 2008ರಲ್ಲಿ ಪ್ರಾರಂಭವಾದ ಇಂಡಿಯನ್​ ಪ್ರೀಮಿಯರ್​ ಲೀಗ್​ನ ಸಿಎಸ್​ಕೆ ಫ್ರಾಂಚೈಸಿಯ ಕ್ಯಾಪ್ಟನ್​ ಸ್ಥಾನಕ್ಕೆ ಧೋನಿ ಮೊದಲ ಆಯ್ಕೆ ಆಗಿರಲಿಲ್ಲ ಎಂಬ ಶಾಕಿಂಗ್ ಸಂಗತಿಯನ್ನು ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಅಂದು ಟೀಂ ಇಂಡಿಯಾದ ಕ್ಯಾಪ್ಟನ್ ಆಗಿ ಇಡೀ ತಂಡವನ್ನು ಮುನ್ನಡೆಸಿದ 'ಕ್ಯಾಪ್ಟನ್ ಕೂಲ್'​ ಐಪಿಎಲ್​ ಆಡಲು ಎಂಟ್ರಿ ಕೊಡುವ ಮುನ್ನ ಅವರಿನ್ನು ಯಾವ ತಂಡಕ್ಕೆ ಸೇರಲಿದ್ದಾರೆ ಎಂಬುದು ಇನ್ನೂ ಖಚಿತವಾಗಿರಲಿಲ್ಲ. ಅಸಲಿಗೆ ಐಪಿಎಲ್ ಪ್ಲೇಯರ್ ಆಕ್ಷನ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದವರು ಧೋನಿಯನ್ನೇ ಅಧಿಕೃತವಾಗಿ ತಮ್ಮ ತಂಡಕ್ಕೆ ಆಯ್ಕೆ ಮಾಡಿತು. ಆದರೆ, ಎಂ.ಎಸ್​ ಕ್ಯಾಪ್ಟನ್ ಸ್ಥಾನಕ್ಕೆ ಮೊದಲ ಆಯ್ಕೆಯಾಗಿರಲಿಲ್ಲ. ಸಿಎಸ್​ಕೆ ಫ್ರಾಂಚೈಸಿಗೆ ಆಟಗಾರರನ್ನು ಆಯ್ಕೆ ಮಾಡುವ ಅವಕಾಶವನ್ನು ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವಿ.ಬಿ. ಚಂದ್ರಶೇಖರ್​ ಪಡೆದಿದ್ದರು. ಆಗ ಅವರು ಆಕ್ಷನ್​ ನಡೆಯುವ ಮುನ್ನ ನನಗೆ ಕರೆ ಮಾಡಿದ್ದರು ಎಂದರು.

"ವಿ.ಬಿ. ಚಂದ್ರಶೇಖರ್ ಅವರು ಸಿಎಸ್‌ಕೆಗೆ ಆಟಗಾರರನ್ನು ಆಯ್ಕೆ ಮಾಡುತ್ತಿದ್ದರು. ಆಗ ನನಗೆ ಫೋನ್ ಮಾಡಿ ಕೇಳಿದ ಅವರು, 'ನೀವು ನಮ್ಮ ತಂಡಕ್ಕೆ ಆಡಬೇಕೆಂದು ನಾನು ಬಯಸುತ್ತೇನೆ. ಡೆಲ್ಲಿ ಡೇರ್ ಡೆವಿಲ್ಸ್ ಟೀಮ್​ ನಿಮ್ಮನ್ನು ತಮ್ಮ ತಂಡದ ನಾಯಕನಾಗಿ ಆಯ್ಕೆ ಮಾಡಿಕೊಳ್ಳಲು ಬಯಸಿದೆ. ಹೀಗಿರುವ ಪರಿಸ್ಥಿತಿಯಲ್ಲಿ ಅವರ ಆಫರ್ ಸ್ವೀಕರಿಸಬೇಡಿ, ಬದಲಿಗೆ ತಿರಸ್ಕರಿಸಿ' ಎಂದು ಹೇಳಿದರು. ಆದ್ರೆ, ಅಂದು ನನಗೆ ಡೇರ್‌ಡೆವಿಲ್ಸ್‌ನಿಂದಲೂ (ಪ್ರಸ್ತುತ ಡೆಲ್ಲಿ ಕ್ಯಾಪಿಟಲ್ಸ್) ಇದೇ ಆಫರ್​ ಕೇಳಿಬಂದಿತು. ಆಗ ಹೆಚ್ಚು ಯೋಚಿಸದೆ, ಅವರ ಮಾತಿಗೆ ಒಪ್ಪಿಗೆ ಸೂಚಿಸಿ, ಡೆಲ್ಲಿ ಡೇರ್​ಡೆವಿಲ್ಸ್ ತಂಡದ ನಾಯಕನಾಗಿ ಆಯ್ಕೆಯಾದೆ" ಎಂದು ತಿಳಿಸಿದರು.

"ಅಸಲಿಗೆ ನಾನು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲಿಲ್ಲ. ಯಾವಾಗ ನಾನು ಸಿಎಸ್​ಕೆ ಕೊಟ್ಟ ಕ್ಯಾಪ್ಟನ್ ಆಫರ್​ ಒಪ್ಪಲಿಲ್ಲವೋ, ಅಂದೇ ವಿ.ಬಿ. ಚಂದ್ರಶೇಖರ್ ಅವರು ಆಕ್ಷನ್​ನಲ್ಲಿ ಮಹೇಂದ್ರ ಸಿಂಗ್ ಧೋನಿಯನ್ನು ಖರೀದಿಸಿ, ತಮ್ಮ ತಂಡದ ನಾಯಕನನ್ನಾಗಿ ಮಾಡಿತು. ಹೀಗೆ ನೋಡುವುದಾದರೆ, ಚೆನ್ನೈ ಪಡೆಯ ಕ್ಯಾಪ್ಟನ್ ಸ್ಥಾನಕ್ಕೆ ಧೋನಿ ಮೊದಲ ಆಯ್ಕೆ ಆಗಿರಲಿಲ್ಲ" ಎಂದು ವೀರೂ ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net