

ಬೆಂಗಳೂರು: ಪ್ರಸಕ್ತ ಐಪಿಎಲ್ ಆವೃತ್ತಿ ಬಹಳ ರೋಚಕವಾಗುತ್ತಿದ್ದು, ಕ್ರಿಕೆಟ್ ಅಭಿಮಾನಿಗಳ ಚಿತ್ತ ಕೇವಲ ಪ್ಲೇಆಫ್ ಪಂದ್ಯಗಳತ್ತ ಮೂಡುತ್ತಿದೆ. ಆದರೆ, ಇದಕ್ಕೂ ಮೊದಲು ಮೇ.18ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯ ಮಾತ್ರ ಬಲು ರೋಚಕವಾಗಿರಲಿದೆ ಎಂಬುದು 100ಕ್ಕೆ 100 ಗ್ಯಾರಂಟಿ ಎನ್ನುವಂತಾಗಿದೆ.
ಇದನ್ನೂ ಓದಿ: ಮಹದೇವಪ್ರಸಾದ್ ಬಡಾವಣೆಗೆ ಮೂಲ ಸೌಕರ್ಯ ಕಲ್ಪಿಸಲು ಒತ್ತಾಯ
ಈಗಾಗಲೇ ಐಪಿಎಲ್ ಅಂಕಪಟ್ಟಿಯಲ್ಲಿ ಕೆಕೆಆರ್, ರಾಜಸ್ಥಾನ ರಾಯಲ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ಪ್ಲೇಆಫ್ಗೆ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿವೆ. ಸದ್ಯ ಈಗ ಉಳಿದಿರುವುದು ಆರ್ಸಿಬಿ ಮತ್ತು ಸಿಎಸ್ಕೆ ಮಾತ್ರ. ಇವರಿಬ್ಬರಲ್ಲಿ ಯಾರು ಪಂದ್ಯ ಗೆದ್ದು ಪ್ಲೇಆಫ್ಗೆ ಎಂಟ್ರಿ ಕೊಡಲಿದ್ದಾರೆ ಎಂಬುದನ್ನು ಸದ್ಯ ಬಹಳ ಕಾತರದಿಂದ ಕಾದು ನೋಡಬೇಕಿದೆ. ಇನ್ನು ಈ ರೋಚಕ ಪಂದ್ಯಕ್ಕೆ ಮಳೆಯೂ ಅಡ್ಡಿಯಾಗಲಿದೆ ಎಂದು ಹೇಳಲಾಗುತ್ತಿದ್ದು, ಆರ್ಸಿಬಿ ಭವಿಷ್ಯ ಮಳೆರಾಯನ ಮೇಲೂ ನಿಂತಿದೆ ಎಂಬುದೇ ಭಾರೀ ಆಶ್ಚರ್ಯ.
ಸದ್ಯ ಈಗಾಗಲೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತರಬೇತಿ ನಡೆಸುತ್ತಿರುವ ಎರಡು ತಂಡಗಳು, ಗೆಲುವಿಗಾಗಿ ಏನೇನು ಅಗತ್ಯವಿದೆಯೋ, ಅದರ ತಯಾರಿಗೆ ಸನ್ನದ್ಧವಾಗಿದೆ. ಇನ್ನು ಸಿಎಸ್ಕೆ ತಂಡದಲ್ಲಿ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರನ್ನು ಪ್ರ್ಯಾಕ್ಟಿಸ್ ಸೆಷನ್ನಲ್ಲಿ ನೋಡುವುದೇ ಅಭಿಮಾನಿಗಳಿಗೆ ಒಂದು ಖುಷಿ. ಪ್ರತಿಬಾರಿ ಬ್ಯಾಟಿಂಗ್, ವಿಕೆಟ್ ಕೀಪಿಂಗ್ ಮಾಡುತ್ತಿದ್ದ ಮಾಹಿ, ಈ ಬಾರಿ ಬೌಲಿಂಗ್ ತರಬೇತಿಯಲ್ಲಿ ನಿರತರಾದ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿದೆ.
ವೈರಲ್ ವಿಡಿಯೋ ನೋಡಿದ ಫ್ಯಾನ್ಸ್, ಇದೇನು ಆಶ್ವರ್ಯ? ಧೋನಿ ಬೌಲಿಂಗ್ ಮಾಡುತ್ತಿದ್ದಾರೆ ಅಂದರೆ ಖಂಡಿತ ಅಲ್ಲಿ ಯಾವುದೋ ಒಂದು ವಿಷಯ ನಮ್ಮಿಂದ ಅಡಗಿದೆ ಎಂದು ಭಾವಿಸಿದ್ದಾರೆ. ಕೆಲವರು ಈ ಸೀಸನ್ನಲ್ಲಿ ಇದು ಧೋನಿ ಅವರ ಕಡೆಯ ಪಂದ್ಯವಾದ ಕಾರಣ, ಪ್ರಾಯಶಃ ಮಾಹಿಗೆ ಒಂದು ಓವರ್ ಬೌಲಿಂಗ್ ಕೊಡುವ ನಿರ್ಧಾರವನ್ನು ಫ್ರಾಂಚೈಸಿ ಮಾಡಿರಬೇಕು ಎಂದು ಅಭಿಪ್ರಾಯಿಸಿದ್ದಾರೆ. ಸದ್ಯ ಈ ವಿಷಯ ಎಲ್ಲರ ಗಮನಸೆಳೆದಿದ್ದು, ಕ್ಯಾಪ್ಟನ್ ಕೂಲ್ ಬೌಲಿಂಗ್ ದಾಳಿ ನೋಡಲು ನಾವಂತು ಬಹಳ ಕುತೂಹಲದಿಂದ ಕಾಯುತ್ತಿದ್ದೇವೆ ಎಂದೆಲ್ಲಾ ಕಮೆಂಟ್ಗಳ ಸುರಿಮಳೆ ಹರಿದುಬಂದಿದೆ,(ಏಜೆನ್ಸೀಸ್).