ಕೆಳಗೆ ಬಿದ್ದ ಮಹಿಳೆಯ ನೆರವಿಗೆ ಬಾರದ ಕ್ರಿಕೆಟಿಗ; ಕಿಡಿಕಾರಿದ ನೆಟ್ಟಿಗರು

dhawal kulkarni
Published on

ಮುಂಬೈ: ಕ್ರಿಕೆಟ್​ ಆಟಗಾರರು ಆಗೊಮ್ಮೆ ಈಗೊಮ್ಮೆ ಸಾವರ್ಜನಿಕ ಸ್ಥಳಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಸುದ್ದಿಯಾಗುತ್ತಾರೆ. ಕೆಲವೊಮ್ಮೆ ಇಂತಹ ವಿಚಾರಗಳು ವಿವಾದಕ್ಕೀಡಾಗಿ ಟ್ರೋಲ್​ ಸಹ ಆಗುತ್ತಾರೆ.

ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು ಕ್ರಿಕೆಟಿಗನ ಈ ನಡೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಪೇಚಿಗೆ ಸಿಲುಕಿದ ಕ್ರಿಕೆಟಿಗ

ಮುಂಬೈ ಕ್ರಿಕೆಟ್​ ಟೀಂನ ವೇಗದ ಬೌಲರ್​ ಧವಳ್​ ಕುಲಕರ್ಣಿ ಪೇಚಿಗೆ ಸಿಲುಕಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್​ ಮಾಡಲಾಗುತ್ತಿದೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ಕ್ರಿಕೆಟಿಗನ ಕುರಿತು ನೆಟ್ಟಿಗರು ಕಿಡಿಕಾರಿದ್ದು ಅಪಹಾಸ್ಯ ಮಾಡುತ್ತಿದ್ದಾರೆ.

ಏನಿರಬಹುದು?

ಶನಿವಾರ ಮುಂಬೈನ ಪ್ರಸಿದ್ದ ರೆಸ್ಟೋರೆಂಟ್​ಗೆ ಭೇಟಿ ನೀಡಿದ್ದ ವೇಳೆ ಮಹಿಳೆ ಒಬ್ಬರು ಕೆಳಗೆ ಬೀಳುತ್ತಾರೆ. ಇದನ್ನು ಗಮನಿಸದೆ ಕ್ರಿಕೆಟಿಗ ಫೋಟೋಗೆ ಫೋಸ್​ ನೀಡುತ್ತಿರುವುದು ವ್ಯಾಪಕ ಖಂಡನೆಗೆ ಗುರಿಯಾಗಿದೆ.

ಇನ್ನು ಕ್ರಿಕೆಟಿಗನ ಈ ನಡೆಗೆ ಸಾಕಷ್ಟು ಟೀಕೆಗೆ ಗುರಿಯಾಗಿದ್ದು ಮಹಿಳೆಗೆ ಸಹಾಯ ಮಾಡುವುದಕ್ಕಿಂತ ನಿಮಗೆ ಫೋಟೋಗೆ ಫೋಸ್​ ನೀಡುವುದೆ ಹೆಚ್ಚಾಯಿತ ಎಂದು ಕಿಡಿಕಾರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net