VIDEO| ನೋಡ ನೋಡುತ್ತಿದ್ದಂತೆ ಬಡಿದಾಡಿಕೊಂಡ IPL ಅಭಿಮಾನಿಗಳು!

Fans Fight
Published on

ನವದೆಹಲಿ: ಇಂಡಿಯನ್​ ಪ್ರೀಮಿಯರ್ ಲೀಗ್(IPL) ಪಂದ್ಯಗಳು ಕ್ರೀಡಾಭಿಮಾನಿಗಳಲ್ಲಿ ಯಾವ ಮಟ್ಟಿಗೆ ಕ್ರೇಜ್​ ಹುಟ್ಟಿಸಿದೆ ಎಂದರೆ ಪ್ರತಿ ಪಂದ್ಯಕ್ಕೂ ಮೈದಾನದಲ್ಲಿ ಜನ ಕಿಕ್ಕಿರಿದು ಸೇರಿರುತ್ತಾರೆ.

ಇನ್ನು ಐಪಿಎಲ್​ ಪಂದ್ಯಗಳು ನಡೆಯುವ ವೇಳೆ ಅಭಿಮಾನಿಗಳ ನಡುವೆ ವಾಗ್ವಾದ ನಡೆಯುತ್ತವೆ ಕೆಲವೊಮ್ಮೆ ಇದು ವಿಕೋಪಕ್ಕೆ ತಿರುಗಿ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪುತ್ತದೆ.

ಬಡಿದಾಡಿಕೊಂಡ ಅಭಿಮಾನಿಗಳು

ಇನ್ನು ಶನಿವಾರ ರಾಷ್ಟ್ರ ರಾಜಧಾನಿ ದೆಹಲಿಯ ಅರುಣ್​ ಜೇಟ್ಲಿ ಕ್ರೀಡಾಂಗಣದಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ಹಾಗೂ ಡೆಲ್ಲಿ ಕ್ಯಾಪಿಟಲ್ಸ್​​ ನಡುವೆ ನಡೆದ ಪಂದ್ಯದಲ್ಲಿ ಇಂತಹದೊಂದು ಘಟನೆ ನಡೆದಿದೆ.

ಪಂದ್ಯ ನಡೆಯುವ ವೇಳೆ ಪ್ರೇಕ್ಷಕರ ಗ್ಯಾಲರಿಯಲ್ಲಿ ಇದ್ದ ಅಭಿಮಾನಿಗಳ ನಡುವೆ ಜಗಳವಾಗಿದ್ದು ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ಬಡಿದಾಟಕ್ಕೆ ಕಾರಣ ಏನಿರಬಹುದು ಎಂದು ನೆಟ್ಟಿಗರು ಯೋಚಿಸುತ್ತಿದ್ದಾರೆ.

ಪ್ರಕರಣ ದಾಖಲು

ವಿಡಿಯೋದಲ್ಲಿ ಕಂಡು ಬರುವ ಹಾಗೆ 5-6 ಮಂದಿ ನಡುವೆ ಹೊಡೆದಾಟವಾಗಿದ್ದು ಇವರ ಕೈಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಧ್ವಜವನ್ನು ಹಿಡಿದಿರುವುದು ಕಂಡು ಬರುತ್ತದೆ ಮತ್ತು ಯಾವ ವಿಚಾರವಾಗಿ ಇವರ ನಡುವೆ ಜಗಳ ನಡೆದಿದೆ ಎಂಬುದರ ಕಾರಣ ಇನ್ನು ಬಹಿರಂಗವಾಗಿಲ್ಲ

ಇನ್ನು ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲಗ್​ ಆದ ಬೆನ್ನಲ್ಲೇ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಹೊಡೆದಾಟದಲ್ಲಿ ಭಾಗಿಯಾಗುರುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net