

ನವದೆಹಲಿ: ಎಲ್ಲೆಗಳನ್ನು ಮೀರಿದ ವಿಚಾರದಲ್ಲಿ ಫ್ಯಾಶನ್ ಕೂಡ ಒಂಗಾಗಿದ್ದು ಹಲವು ವರ್ಷಗಳಿಂದ ಮಹಿಳೆಯರು ಪುರುಷರ ಉಡುಗೆ ತೊಡುಗೆಗಳನ್ನು ಅನುಸರಿಸುತ್ತಿದ್ದಾರೆ.
ಕೆಲವೊಮ್ಮೆ ತಾವು ಹಾಕುವ ಬಟ್ಟೆಯ ವಿಚಾರವಾಗಿ ಹೆಚ್ಚು ಸದ್ದು ಮಾಡುತ್ತಾರೆ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕುತ್ತಾರೆ.
ಇನ್ನು ಉಡುಗೆಯ ವಿಚಾರವಾಗಿ ಯುವಕರಿಬ್ಬರು ಸಾಮಾಜಿಕ ಜಾಲತಾಣದಲ್ಲಿ ಹೊಸ ಚರ್ಚೆ ಒಂದನ್ನು ಹುಟ್ಟು ಹಾಕಿದ್ದು ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
ದೆಹಲಿ ಮೂಲದ ಯುವಕರಾದ ಸಮೀರ್ ಖಾನ್ ಹಾಗೂ ಭವ್ಯ ಕುಮಾರ್ ಎಂಬ ಇಬ್ಬರು ಯುವರಕು ಟಿ-ಶರ್ಟ್ ಹಾಗೂ ಡೆನಿಮ್ ಸ್ಕರ್ಟ್ ಧರಿಸಿ ದೆಹಲಿ ಮೆಟ್ರೋದಲ್ಲಿ ಸಂಚರಿಸಿದ್ದಾರೆ.
ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ ಈ ಇಬ್ಬರು ಯುವಕರು ದೆಹಲಿ ಮೆಟ್ರೋ ರೈಲಿನನ್ನು ಹತ್ತಿಕೊಳ್ಳುವುದು ಕಂಡು ಬರುತ್ತದೆ. ಇವರನ್ನು ನೋಡಿದ ಸಹ ಪ್ರಯಾಣಿಕರು ನಿಬ್ಬೆರಗಾಗಿ ನೋಡುತ್ತಿರುವುದು ಕಂಡು ಬರುತ್ತದೆ.
ಸದ್ಯ ವೈರಲ್ ಆಗಿರುವ ವಿಡಿಯೋಗೆ ನೆಟ್ಟಿಗರು ಸಕರಾತ್ಮಕವಾಗಿ ಪ್ರತಿಕ್ರಿಯಿಸಿದ್ದು ಅವರ ಆತ್ಮಸ್ಥೈರ್ಯ ಹಾಗೂ ಪ್ರಜ್ಞೆಯನ್ನು ಹಾಡಿ ಹೊಗಳಿದ್ದಾರೆ.
ಇದು ಧರಿಸಲು ಅರಾಮಾದಾಯಕವಾಗಿದ್ದು ನೋಡಲು ಸೊಗಸಾಗಿದೆ. ಹುಡುಗರು ನಮಗೆ ಶರ್ಟ್, ಪ್ಯಾಂಟ್ ಬಿಟ್ಟರೆ ಬೇರೆ ಆಯ್ಕೆ ಇಲ್ಲ ಎಂದು ಹೇಳುವವರು ಇದನ್ನು ಒಮ್ಮೆ ಪ್ರಯೋಗಿಸಿ ಎಂದು ಕಮೆಂಟ್ ಹಾಕಿದ್ದಾರೆ .