More

    ವಿದೇಶಿ ಫಂಡ್​ ಸ್ವೀಕಾರ; ಬೈಜುಸ್​ ಸಂಸ್ಥೆ ಮೇಲೆ ಇಡಿ ದಾಳಿ

    ಬೆಂಗಳೂರು: ಅಕ್ರಮ ವಿದೇಶಿ ಹಣ ಸ್ವೀಕಾರ ಮತ್ತು ಹಣ ವರ್ಗಾವಣೆ ಆರೋಪದ ಮೇಲೆ ಬೈಜುಸ್ ಕಂಪನಿಗೆ ಸೇರಿದ ಮೂರು ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ (ED) ದಾಳಿ ನಡೆಸಿದೆ.

    ಆನ್‌ಲೈನ್ ಶಿಕ್ಷಣ ಸಂಸ್ಥೆ ಬೈಜುಸ್ ಕಂಪನಿಯ 2 ವ್ಯವಹಾರಿಕ ಸ್ಥಳ ಮತ್ತು ಸಂಸ್ಥಾಪಕ, ಸಿಇಒ ರವೀಂದ್ರನ್ ಬೈಜು ಮನೆಯಲ್ಲಿ ಇಡಿ ಪರಿಶೀಲನೆ ಶೋಧ ನಡೆಸಿದೆ.

    ಅಕ್ರಮ ಆರೋಪ

    ಥಿಂಕ್ ಆ್ಯಂಡ್ ಲರ್ನ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ನಡೆಸಲಾಗುತ್ತಿರುವ ಬೈಜುಸ್, ವಿದೇಶಿ ಹಣ ವರ್ಗಾವಣೆ ನಿರ್ವಹಣೆ ಕಾಯ್ದೆ ಉಲ್ಲಂಘನೆ ಆರೋಪದ ಮೇಲೆ ದಾಳಿ ನಡೆಸಲಾಗಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.

    Byjus

    ಇದನ್ನೂ ಒದಿ: ಅಕ್ರಮ ಹಣ ವರ್ಗಾವಣೆ; ಚೀನಾ ಮೂಲದ ಶಿಕ್ಷಣ ಸಂಸ್ಥೆ ಮೇಲೆ ದಾಳಿ

    ಪರಿಶೀಲನೆ ಸಂದರ್ಭದಲ್ಲಿ ಕೆಲ ದಾಖಲೆಗಳು, ಡಿಜಿಟಲ್ ಡೇಟಾವನ್ನು ವಶಕ್ಕೆ ಪಡೆಯಲಾಗಿದೆ. 2011-23ರವರೆಗೂ 28 ಸಾವಿರ ಕೋಟಿ ರೂ. ವಿದೇಶದಿಂದ ನೇರ ಹೂಡಿಕೆ ರೂಪದಲ್ಲಿ ಹಣ ಸ್ವೀಕರಿಸಿರುವುದು ಬೆಳಕಿಗೆ ಬಂದಿದೆ.

    ಹೂಡಿಕೆ ಹೆಸರಲ್ಲಿ ವರ್ಗಾವಣೆ

    ಇದೇ ಅವಧಿಯಲ್ಲಿ 9,754 ಕೋಟಿ ರೂ. ವಿದೇಶಿ ನೇರ ಹೂಡಿಕೆ ಹೆಸರಿನಲ್ಲಿ ವರ್ಗಾವಣೆ ಮಾಡಿರುವುದು, 944 ಕೋಟಿ ರೂ. ಜಾಹಿರಾತು, ಮಾರ್ಕೆಟಿಂಗ್‌ಗೆ ಖರ್ಚು ಮಾಡಲಾಗಿದೆ ಎಂದು ಕಂಪನಿ ದಾಖಲೆಗಳಲ್ಲಿ ತೋರಿಸಿದೆ.

    2020-21ರ ಆರ್ಥಿಕ ವರ್ಷದಿಂದ ಸೂಕ್ತ ದಾಖಲೆಗಳನ್ನು ನಿರ್ವಹಣೆ ಮಾಡಿಲ್ಲ. ಅನೇಕ ಖಾಸಗಿ ಕಂಪನಿ ಮತ್ತು ವ್ಯಕ್ತಿಗಳ ದೂರು ಆಧರಿಸಿ ತನಿಖೆ ಕೈಗೊಳ್ಳಲಾಗಿತ್ತು. ಈ ಕುರಿತು ಸಮನ್ಸ್ ನೀಡಿ ವಿಚಾರಣೆಗೆ ಕರೆಯಲಾಗಿತ್ತು. ಆದರೂ ವಿಚಾರಣೆಗೆ ಬೈಜುಸ್ ಸಂಸ್ಥಾಪಕ ರವೀಂದ್ರನ್ ಹಾಜರು ಆಗಿರಲಿಲ್ಲ. ಈ ಹಿನ್ನೆಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಇಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts