ಬಹುಮಹಡಿ ಕಟ್ಟಡದಿಂದ ಜಿಗಿದು ಪ್ರಾಣ ಬಿಟ್ಟ ಮಹಿಳೆ; ತಾಯಿಗಾಗಿ ಹುಡುಕಾಡಿದ ಮಕ್ಕಳು

Crime
Published on

ಚೆನೈ: ಇತ್ತಿಚಿಗೆ ಚೆನೈ ವಿಮಾನ ನಿಲ್ದಾಣದಲ್ಲಿ ನೂತನವಾಗಿ ಉದ್ಘಾಟನೆಗೊಂಡ ಬಹು ಮಹಡಿ ಕಾರ್​ ಪಾರ್ಕಿಂಗ್​(MLCP)ನಲ್ಲಿ ಮಹಿಳೆ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತ ಮಹಿಳೆಯನ್ನು ಐಶ್ವರ್ಯ ಬಾಲಾಜಿ(33) ಎಂದು ಗುರುತಿಸಲಾಗಿದ್ದು ಅವರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಚಲನಚಿತ್ರ ವೀಕ್ಷಿಸಲು ಹೋಗಿದ್ದರು

ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಐಶ್ವರ್ಯ ತನ್ನ ಇಬ್ಬರು ಮಕ್ಕಳನ್ನು ಏರ್​ಪೋರ್ಟ್​ ಆವರಣದಲ್ಲಿ ಇತ್ತೀಚಿಗೆ ಉದ್ಘಾಟನೆಗೊಂಡ ಏರೋಹಬ್​ ಮಲ್ಟಿಪ್ಲೆಕ್ಸ್​ನಲ್ಲಿ ಚಲನಚಿತ್ರ ವೀಕ್ಷಿಸಲು ಹೋಗಿದ್ದರು.

ಈ ವೇಳೆ ಐಶ್ವರ್ಯ ಚಿತ್ರ ಶುರುವಾದ ನಂತರ ತನ್ನ ಇಬ್ಬರು ಮಕ್ಕಳಿಗೆ ವಾಷ್​ ರೂಂಗೆ ಹೋಗಿ ಬರುವುದಾಗಿ ಹೇಳಿ ಹೊರಬಂದು ಮತ್ತು ಬಹು ಮಹಡಿ ಕಾರ್​ ಪಾರ್ಕಿಂಗ್ ಕಟ್ಟಡದ ಕಡೆಗೆ ಹೋಗಿದ್ದಾರೆ.

MLCP

ನಾಲ್ಕನೇ ಮಹಡಿಯಿಂದ ಜಿಗಿದ ಮಹಿಳೆ

ಇನ್ನು ಮಹಿಳೆ ಕಾರ್​ ಪಾರ್ಕಿಂಗ್​ ಕಟ್ಟಡದ ನಾಲ್ಕನೇ ಮಹಡಿಯನ್ನು ಏರಿ ಅಲ್ಲಿಂದ ಜಿಗಿಯಲು ಯತ್ನಿಸುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ಪೊಲೀಸರು ಸ್ಥಳ ತಲುಪುವ ವೇಳೆಗೆ ಮಹಿಳೆ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ತೀವ್ರ ರಕ್ತಸ್ತ್ರಾವ ಆಗಿದ್ದರಿಂದ ಮಹಿಳೆ ಸ್ಥಳದಲ್ಲೇ ಸಾವನಪ್ಪಿದ್ದಾರೆ ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.

ತಾಯಿಗಾಗಿ ಹುಡುಕಾಡಿದ ಮಕ್ಕಳು

ಇನ್ನು ತಮ್ಮ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಸಂಗತಿ ತಿಳಿಯದೆ ಮಕ್ಕಳಿಬ್ಬರು ಚಿತ್ರ ಮುಗಿದ ನಂತರ ತಮ್ಮ ತಾಯಿಗಾಗಿ ಹುಡುಕಾಟ ನಡೆಸುತ್ತಿದ್ದ ದೃಶ್ಯ ಮನಕಲಕುವಂತಿತ್ತು.

ಇನ್ನು ಮೃತ ಮಹಿಳೆಯ ಗುರುತು ಸಿಗದೆ ಪರದಾಡುತ್ತಿದ್ದ ಪೊಲೀಸರು ಮಕ್ಕಳ ಬಳಿ ವಿಚಾರಿಸಿದಾಗ ಮಾಹಿತಿ ನೀಡಿ ಶವವನ್ನು ಗುರುತು ಹಿಡಿದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net