ಪ್ಯಾಂಟ್​ ಮೇಲೆ ಕಾಫಿ ಚೆಲ್ಲಿಕೊಂಡು ಪೇಚಿಗೆ ಸಿಲುಕಿದ ನಟ; ಕಾಲೆಳೆದ ನೆಟ್ಟಿಗರು

Ranbir kapoor
Published on

ಮುಂಬೈ: ಬಾಲಿವುಡ್​ ನಟ ರಣಬೀರ್​ ಕಪೂರ್ ಇತ್ತೀಚಿಗೆ ತಮ್ಮ ತಾಯಿ ನೀತು ಕಪೂರ್ ಅವರೊಂದಿಗೆ ಮೊಟ್ಟಮೊದಲ ಬಾರಿಗೆ ಕಾರ್ಯಕ್ರಮ ಒಂದರಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.

ಅದರಲ್ಲೇನು ವಿಶೇಷ ಎಂದು ಕೇಳಬಹುದು ಕಾರ್ಯಕ್ರಮದಲ್ಲಿ ರಣಬೀರ್​ ಕಪೂರ್​ ಒಂದು ಅವಾಂತರವನ್ನು ಮಾಡಿಕೊಂಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ಟೀಕೆಗೆ ಗುರಿಯಾಗಿದ್ದಾರೆ.

ಡಾ. ಜಯಶ್ರೀ ಶರದ್​ ಅವರು ಬರೆದಿರುವ ನೂತನ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಬಾಲಿವುಡ್​ನ ಹಲವು ಸೆಲೆಬ್ರಿಟಿಗಖಳು ಭಾಗವಹಿಸಿದ್ದರು. ನಟ ರಣಬೀರ್​ ಕಪೂರ್​ ಹಾಗೂ ಅವರ ತಾಯಿ ನೀತು ಕಪೂರ್ ಸಂವಾದ ಕಾರ್ಯಕ್ರಮದಲ್ಲಿ ಕೂಡ ಭಾಗಿಯಾಗಿದ್ದರು.

Ranbir Coffee

ಕಾಫಿ ಚೆಲ್ಲಿಕೊಂಡ ನಟ

ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ರಣಬೀರ್​ ಕಪೂರ್ ಒಂದು ಕೈಯಲ್ಲಿ ಕಾಫಿ ಮಗ್​ ಮತ್ತು ಮತ್ತೊಂದು ಕೈಯಲ್ಲಿ ಮೈಕ್​ ಹಿಡಿದು ಮಾತನಾಡುತ್ತಿದ್ದರು.

ಮಾತನಾಡುವ ವೇಳೆ ರಣಬೀರ್​ ತಮ್ಮ ಕೈಯಲ್ಲಿ ಕಾಫಿ ಮಗ್​ ಇದೆ ಎಂಬುದನ್ನು ಮರೆತ್ತಿದ್ದರು ಮತ್ತು ಪ್ಯಾಂಟ್​ ಮೇಲೆ ಚೆಲ್ಲಿಕೊಂಡಿದ್ದಾರೆ. ತಕ್ಷಣವೇ ಕುರ್ಚಿಯಿಂದ ಎದ್ದ ನಟ ತಮ್ಮಗೆ ಏನಾಗಿಲ್ಲ ಎನ್ನುವ ಹಾಗೆ ವರ್ತಿಸಿದ್ದಾರೆ.

ನಟನ ಕಾಲೆಳೆದ ನೆಟ್ಟಿಗರು

ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆದ ಬೆನ್ನಲ್ಲೇ ನೆಟ್ಟಿಗರು ನಟನ ಕಾಲೆಳೆದಿದ್ದು ಇಲ್ಲು ಕೂಡ ಓವರ್​ ಆ್ಯಕ್ಟಿಂಗ್​ ಬೇಕಾ ಎಂದು ಪ್ರಶ್ನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net